More

    ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮೀಸ್‌ನಲ್ಲಿ ಭಾರತಕ್ಕೆ ಆಘಾತ ನೀಡಿದ ಜಪಾನ್

    ಢಾಕಾ: ಲೀಗ್ ಹಂತದಲ್ಲಿ ಅಜೇಯ ಸಾಧನೆಯೊಂದಿಗೆ ಅಗ್ರಸ್ಥಾನ ಗಳಿಸಿದ್ದ ಹಾಲಿ ಚಾಂಪಿಯನ್ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ. ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತ ಭಾರತ ತಂಡ ಜಪಾನ್ ವಿರುದ್ಧ 3-5 ಗೋಲುಗಳಿಂದ ಆಘಾತ ಎದುರಿಸಿತು.

    ಲೀಗ್ ಹಂತದಲ್ಲಿ ಜಪಾನ್ ಎದುರು 6-0 ಗೋಲುಗಳಿಂದ ಗೆದ್ದ ವಿಶ್ವಾಸದಲ್ಲಿದ್ದ ಮನ್‌ಪ್ರೀತ್ ಸಿಂಗ್ ಪಡೆ ಮಂಗಳವಾರ ನಡೆದ ಉಪಾಂತ್ಯದ ಕಾದಾಟದಲ್ಲಿ ತಿರುಗೇಟು ಎದುರಿಸಿತು. ಇದರಿಂದಾಗಿ ಸತತ 3ನೇ ಬಾರಿ ಟೂರ್ನಿಯ ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿತು.

    ಮೊದಲ 2 ನಿಮಿಷಗಳಲ್ಲೇ 2 ಗೋಲು ಸಿಡಿಸಿದ ಜಪಾನ್, ಮೊದಲಾರ್ಧದಲ್ಲಿ 3-1 ಮುನ್ನಡೆ ಸಾಧಿಸಿತ್ತು. ಜಪಾನ್ ಪರ ಶೋತ ಯಮಡ (1ನೇ ನಿಮಿಷ), ರೈಕಿ ುಜಿಶಿಮ (2), ಯೊಶಿಕಿ ಕಿರಿಶಿಟ (14), ಕೋಸೀ ಖವಬೆ (35) ಮತ್ತು ರೈಮಾ ಓಕಾ (41) ಗೋಲು ಬಾರಿಸಿದರು. ಹಾರ್ದಿಕ್ ಸಿಂಗ್ (17, 58) ಮತ್ತು ಉಪನಾಯಕ ಹರ್ಮಾನ್‌ಪ್ರೀತ್ ಸಿಂಗ್ (43) 3 ಬಾರಿಯ ಚಾಂಪಿಯನ್ ಭಾರತದ ಸೋಲಿನ ಅಂತರ ತಗ್ಗಿಸಿದರು.

    ಹಾಕಿ ಇತಿಹಾಸದಲ್ಲಿ ಭಾರತಕ್ಕೆ ಇದು ಜಪಾನ್ ವಿರುದ್ಧ ಕೇವಲ 2ನೇ ಸೋಲಾಗಿದೆ. ಈ ಹಿಂದಿನ 18 ಮುಖಾಮುಖಿಗಳಲ್ಲಿ ಭಾರತ 16ರಲ್ಲಿ ಜಯಿಸಿದ್ದರೆ, 1ರಲ್ಲಿ ಡ್ರಾಕ್ಕೆ ತೃಪ್ತಿಪಟ್ಟಿತ್ತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತೋರಿದ ಅಮೋಘ ನಿರ್ವಹಣೆಯ ಬಳಿಕ ಭಾರತ ತಂಡ ಆಡುತ್ತಿರುವ ಮೊದಲ ಟೂರ್ನಿ ಇದಾಗಿದೆ.

    ಜಪಾನ್ ಮತ್ತು ದಕ್ಷಿಣ ಕೊರಿಯಾ ನಡುವೆ ಬುಧವಾರ ಪ್ರಶಸ್ತಿ ಸುತ್ತಿನ ಕಾದಾಟ ನಡೆಯಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡ 6-5ರಿಂದ ಪಾಕಿಸ್ತಾನವನ್ನು ಮಣಿಸಿತು.

    ಪಾಕಿಸ್ತಾನ ವಿರುದ್ಧ ಕಂಚಿಗೆ ಹೋರಾಟ
    ಕಳೆದ ಆವೃತ್ತಿಯ ಜಂಟಿ ಚಾಂಪಿಯನ್ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಬಾರಿ ಕಂಚಿನ ಪದಕಕ್ಕಾಗಿ ಸೆಣಸಲಿವೆ. ಸಾಂಪ್ರದಾಯಿಕ ಎದುರಾಳಿಗಳ ಲೀಗ್ ಹಂತದ ಕಾದಾಟದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು.

    ಮತ್ತೆ ಕಾಡಿದ ಶಾರುಖ್ ಖಾನ್, ತಮಿಳುನಾಡು ಎದುರು ಎಡವಿದ ಕರ್ನಾಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts