ಕುಂಬಳೆ: ವೈದ್ಯಕೀಯ ತುರ್ತು ಸಂದರ್ಭ ಬಳಕೆಗೆಂದು ಕೇರಳ ಸರ್ಕಾರ ಬಾಡಿಗೆಗೆ ಪಡೆದಿದ್ದ ‘ಕಾರುಣ್ಯ’ ಹೆಲಿಕಾಪ್ಟರ್‌ನಲ್ಲಿ ಮಂಗಳವಾರ ತಿರುವನಂತಪುರದಿಂದ ಕೊಚ್ಚಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಹೃದಯ ತರಲಾಯಿತು.
ಕಾರು ಅಪಘಾತದಿಂದ ಮೃತಪಟ್ಟ ಅನುಜಿತ್ ಎಂಬವರ ಹೃದಯವನ್ನು ದಾನ ಮಾಡಲಾಗಿದ್ದು, ಅದನ್ನು ಕೊಚ್ಚಿಯ ತ್ರಿಪುಣಿತ್ತರ ಎಂಬಲ್ಲಿಯ ನಿವಾಸಿಗೆ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ.
ಈ ಹೆಲಿಕಾಪ್ಟರ್‌ನ ಮೊದಲ ಹಾರಾಟ ಏರ್ ಆಂಬುಲೆನ್ಸ್ ಮೂಲಕ ಮೇ ತಿಂಗಳಲ್ಲಿ ನಡೆದಿತ್ತು. 11 ಆಸನಗಳ ಅವಳಿ ಇಂಜಿನ್‌ಗಳುಳ್ಳ ಹೆಲಿಕಾಪ್ಟರ್‌ನ್ನು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಾದಿರಿಸಲಾಗಿದೆ.