More

    ಸ್ವಾಸ್ಥೃ ಸಮಾಜ ಕಟ್ಟುವುದು ಯುವಕರ ಜವಬ್ದಾರಿ : ಮೋಹನ್ ನಾಯ್ಕ

    ಲಿಂಗಸೂಗೂರು: ಯುವಕರು ಬದುಕು ನಾಶಮಾಡುವ ದುಶ್ಚಟಗಳಿಂದ ಹೊರ ಬಂದು ಸ್ವಾಸ್ಥೃ ಸಮಾಜ ಕಟ್ಟಬೇಕಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮೋಹನ್ ನಾಯ್ಕ ಹೇಳಿದರು.

    ಇದನ್ನೂ ಓದಿ:ಕಾಯಕ, ದಾಸೋಹ ಪರಿಕಲ್ಪನೆಯಿಂದ ಸಮಾಜ ಶುದ್ಧಿ

    ಪಟ್ಟಣದ ಸಂಗಮೇಶ್ವರ ಮಹಾವಿದ್ಯಾಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕ ಘಟಕ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮನಸ್ಸು ಹರಿಬಿಡದೇ, ವ್ಯಸನಗಳಿಗೆ ಬಲಿಯಾಗದೇ ಉತ್ತಮ ಪ್ರಜೆಗಳಾಗುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ. ಹಾನಿಕಾರಕ, ಮತಿವಿಕಾರಕ ಪದಾರ್ಥಗಳಿಂದ ದೂರವಿದ್ದು, ಭವ್ಯ ಭಾರತದ ದಿವ್ಯ ಪ್ರಜೆಗಳಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಪ್ರತಿಭಟನೆ ಮತ್ತು ಹೋರಾಟಗಳಿಂದ ಆಗದ ಕೆಲಸ ಜಾಗೃತಿ ಮೂಡಿಸುವುದರಿಂದ ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಯುವಕರು ಚಟಗಳು ತ್ಯಜಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.

    ಸಂಪನ್ಮೂಲ ವ್ಯಕ್ತಿಗಳಾದ ರವೀಂದ್ರ ಬಳಿಗಾರ್ ಮತ್ತು ಸತೀಶ ದರ್ಶನಕರ್, ಪುರಸಭೆ ಮಾಜಿ ಉಪಾಧ್ಯಕ್ಷ ಮಹ್ಮದ್ ರಫೀ ಕಾರ್ಯಕ್ರಮ, ಹಿರಿಯ ಪ್ರಾಧ್ಯಾಪಕ ಡಿ.ಕೆ ಮುಜಾವರ್, ಪ್ರಾಧ್ಯಾಪಕಿ ಶಾಂತಮ್ಮ ಪಾಟೀಲ, ಮೇಲ್ವಿಚಾರಕಿ ಜ್ಯೋತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts