More

    ಲಾಲೂ ಪ್ರಸಾದ್​ ಯಾದವ್​ ಆರೋಗ್ಯ ಇನ್ನಷ್ಟು ಗಂಭೀರ; ಆಸ್ಪತ್ರೆಗೆ ದೌಡಾಯಿಸಿದ ಕುಟುಂಬ

    ರಾಂಚಿ: ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಆರೋಗ್ಯ ಹದಗೆಟ್ಟಿದೆ. ಹಲವಾರು ದಿನಗಳಿಂದ ಅನಾರೋಗ್ಯದಲ್ಲಿರುವ ಅವರ ಆರೋಗ್ಯದಲ್ಲಿ ಇನ್ನಷ್ಟು ಸಮಸ್ಯೆ ಕಾಣಿಸಿಕೊಂಡಿದ್ದು, ರಾಂಚಿಯ ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದನ್ನೂ ಓದಿ: VIDEO | ಡಾಕೂ ಗಬ್ಬರ್ ಸಿಂಗ್​ಗೆ ಶಿಕ್ಷೆಯಾಗಿದ್ದು ಯಾಕೆ ಗೊತ್ತಾ? ಉತ್ತರಪ್ರದೇಶ ಪೊಲೀಸರ ಅನ್ವೇಷಣೆ!

    ಗುರುವಾರ ಸಂಜೆ ಅವರನ್ನು ರಿಮ್ಸ್​ ಆಸ್ಪತ್ರೆಗೆ ಕರೆತರಲಾಗಿದೆ. ಅವರ ಮಗಳು ಮಿಸಾ ಭಾರತಿ ಈಗಾಗಲೇ ಅಸ್ಪತ್ರೆ ತಲುಪಿದ್ದಾರೆ. ಅವರ ಕಿರಿಯ ಮಗ ತೇಜಶ್ವಿ ಯಾದವ್ ಮತ್ತು ಪತ್ನಿ ರಾಬ್ರಿ ದೇವಿ ಪಾಟ್ನಾದಿಂದ ಚಾರ್ಟರ್ಡ್ ವಿಮಾನದಲ್ಲಿ ರಾಂಚಿಗೆ ಬಂದಿಳಿದಿದ್ದಾರೆ.

    ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ 3 ಬಾರಿ ರೇಪ್​; 44 ಜನರ ಮೇಲೆ 32 ಪ್ರಕರಣ ದಾಖಲು

    “ಲಾಲು ಪ್ರಸಾದ್ ಯಾದವ್ ಆರೋಗ್ಯ ಸ್ಥಿರವಾಗಿದೆ. ಅವರ ಶ್ವಾಸಕೋಶದಲ್ಲಿ ಸೋಂಕು ಇದೆ. ಚಿಕಿತ್ಸೆ ನಡೆಯುತ್ತಿದೆ. ಇದು ಒಂದು ರೀತಿಯ ನ್ಯುಮೋನಿಯಾ ಕಾಣಿಸಿಕೊಂಡಿದೆ. ನಾವು ಏಮ್ಸ್​ನ ಶ್ವಾಸಕೋಶ ವಿಭಾಗದ ಮುಖ್ಯಸ್ಥರೊಂದಿಗೆ ಸಮಾಲೋಚಿಸಿದ್ದೇವೆ. ಆಂಟಿಜೆನ್​ ಪರೀಕ್ಷೆಯಲ್ಲಿ ಕರೊನಾ ನೆಗೆಟಿವ್​ ವರದಿ ಬಂದಿದೆ. ಆರ್​ಟಿಪಿಸಿಆರ್​ ಪರೀಕ್ಷೆಯ ವರದಿ ನಾಳೆ ಬರಲಿದೆ”ಎಂದು ರಿಮ್ಸ್ ನಿರ್ದೇಶಕ ಡಾ.ಕಮೇಶ್ವರ ಪ್ರಸಾದ್ ಹೇಳಿದ್ದಾರೆ. (ಏಜೆನ್ಸೀಸ್​)

    ಬಿಎಸ್ಸಿ ವಿದ್ಯಾರ್ಥಿನಿಗೆ ಮುಖ್ಯಮಂತ್ರಿ ಪಟ್ಟ! ಹಳ್ಳಿ ಹುಡುಗಿಯ ರಾಜಕೀಯ ದರ್ಬಾರ ನೋಡಲು ಸಜ್ಜಾದ ರಾಜ್ಯ

    ಮೋದಿ ಸರ್ಕಾರದಲ್ಲಿ ಡಬಲ್​ ಆದ ಸೆನ್ಸೆಕ್ಸ್​! ಏಳೇ ವರ್ಷದಲ್ಲಿ 25 ಸಾವಿರದಿಂದ 50 ಸಾವಿರಕ್ಕೆ ಜಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts