More

    ಅಂಗೈಯಲ್ಲೇ ಎಲ್ಲ: ಅನಾರೋಗ್ಯಗೊಂಡಾಗಲೂ ನೆರವಿಗೆ ಬರಲಿದೆ ವಾಟ್ಸ್​​ಆ್ಯಪ್!

    ಬೆಂಗಳೂರು: ಅನಾರೋಗ್ಯಗೊಂಡು ಬೇಸರದಲ್ಲಿದ್ದಾಗ ಯಾರಾದರೂ ‘ವಾಟ್ಸಪ್​’ ಎಂದು ಯೋಗಕ್ಷೇಮ ವಿಚಾರಿಸಿಕೊಂಡರೆ ಆಗ ಬಹಳ ನಿರಾಳ ಅನಿಸುವುದು ಸಹಜ. ಹೆಚ್ಚೂಕಡಿಮೆ ಅಂಥದ್ದೇ ಒಂದು ನಿರಾಳತೆ ವಾಟ್ಸ್​ಆ್ಯಪ್​ ಮೂಲಕವೂ ಶೀಘ್ರದಲ್ಲೇ ಲಭಿಸಲಿದೆ. ​ ಹೌದು.. ವಾಟ್ಸ್​ಆ್ಯಪ್​ ಬಳಕೆದಾರರು ಅನಾರೋಗ್ಯಗೊಂಡಾಗಲೂ ಅದು ನೆರವಿಗೆ ಬರಲಿದೆ.

    ಫೇಸ್​ಬುಕ್​ ಮಾಲೀಕತ್ವದ ಮೆಸೆಜಿಂಗ್ ಆ್ಯಪ್​ ಮೊನ್ನೆಮೊನ್ನೆಯವರೆಗೆ ಆಡಿಯೊ-ವಿಡಿಯೋ ಚಾಟ್​​/ಕಾಲ್​ ಹಾಗೂ ಫೈಲ್ ಟ್ರಾನ್ಸ್​ಫರ್​ಗಳಿಗಷ್ಟೇ ಬಳಕೆ ಆಗುತ್ತಿತ್ತು. ಇನ್ನು ಹಣ ಕಳುಹಿಸಲು ಅನುಕೂಲವಾಗುವಂಥ ವ್ಯವಸ್ಥೆಯನ್ನು ವಾಟ್ಸ್​ಆ್ಯಪ್​ ಭಾರತದಲ್ಲಿ ಕಳೆದ ತಿಂಗಳಲ್ಲಿ ಅಳವಡಿಸಿತ್ತು. ಇದೀಗ ಬಳಕೆದಾರರ ಅನುಕೂಲದ ದೃಷ್ಟಿಯಿಂದ ವಾಟ್ಸ್​ಆ್ಯಪ್​ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

    ಅದು ತನ್ನ ಬಳಕೆದಾರರಿಗೆ ಆರೋಗ್ಯ ವಿಮೆ ಕೂಡ ನೀಡಲು ಮುಂದಾಗಿದೆ. ಎಸ್​ಬಿಐ ಜನರಲ್ ಇನ್ಶೂರೆನ್ಸ್​ ಮೂಲಕ ಆರೋಗ್ಯ ವಿಮೆ ಕೊಡುವ ಬಗ್ಗೆ ಕಂಪನಿ ಮಾತುಕತೆ ಆರಂಭಿಸಿದೆ. ಎಲ್ಲ ಅಂದುಕೊಂಡಂತೆಯೇ ನಡೆದರೆ ಈ ವರ್ಷಾಂತ್ಯದ ವೇಳೆಗೆ ವಾಟ್ಸ್​ಆ್ಯಪ್​ ಮೂಲಕ ಆರೋಗ್ಯ ವಿಮೆ ಕೂಡ ಸಿಗಲಿದೆ. ಅತಿ ಕಡಿಮೆ ಪ್ರೀಮಿಯಮ್​ ಮೂಲಕ ಅನಾರೋಗ್ಯ ಪರಿಸ್ಥಿತಿಯಲ್ಲಿ ತುರ್ತು ಆರ್ಥಿಕ ನೆರವು ನೀಡುವ ಹಿನ್ನೆಲೆಯಲ್ಲಿ ವಾಟ್ಸ್​ಆ್ಯಪ್ ಇಂಥದ್ದೊಂದು ಯೋಜನೆ ಕೈಗೆತ್ತಿಕೊಂಡಿದೆ. ಹೀಗೆ ಮೈಕ್ರೋ ಹೆಲ್ತ್​ ಇನ್ಶೂರೆನ್ಸ್ ಮಾತ್ರವಲ್ಲದೆ ಮೈಕ್ರೋ ಪೆನ್ಷನ್​ ಮುಂತಾದ ಸೌಲಭ್ಯಗಳನ್ನೂ ನೀಡಲು ವಾಟ್ಸ್​ಆ್ಯಪ್​ ಚಿಂತನೆ ನಡೆಸಿದೆ.

    ಫ್ರೆಂಡ್​ಗೆ ದುಡ್ಡು ಕಳುಹಿಸಬೇಕಾದ್ರೆ ಇನ್ನು ವಾಟ್ಸ್​ಆಪ್ ಮಾಡಿ!

    ಕೋವಿಡ್​ನಿಂದ ಗುಣವಾದ ಅಪ್ಪ, ಕೇಕ್​ ಕತ್ತರಿಸಿ ಸಂತಸಪಟ್ಟ ಮಗಳು; ಎಡಿಜಿಪಿ@ಲೋಕಾಭಿರಾಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts