More

  ಆರೋಗ್ಯ ತಪಾಸಣಾ ಶಿಬಿರ ಜನರಿಗೆ ಅನೂಕೂಲ

  ಅಳವಂಡಿ: ವ್ಯಕ್ತಿಯ ದೈಹಿಕ, ಸಾಮಾಜಿಕ, ಮಾನಸಿಕ ಅಂಶಗಳು ಉತ್ತಮ ಆರೋಗ್ಯದಲ್ಲಿ ಇವೆ. ಕಾರಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಚ್ಚ ಪರಿಸರ ಹಾಗೂ ಮಾನಸಿಕ ನೆಮ್ಮದಿ ಅವಶ್ಯ ಎಂದು ಶ್ರೀಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು.

  ಇದನ್ನೂ ಓದಿ: ಪ್ರತಿನಿತ್ಯ ಮೂರು-ನಾಲ್ಕು ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಿ, ಆರೋಗ್ಯಕಾರಿ ಪ್ರಯೋಜನಗಳು ಸಾಕಷ್ಟಿವೆ

  ಶ್ರಾವಣ ಮಾಸದ ಕಡೆ ಸೋಮವಾರದ ಅಂಗವಾಗಿ ಶ್ರೀಸಿದ್ದೇಶ್ವರ ಮಠದಲ್ಲಿ ಶ್ರೀಶರಣಬಸವೇಶ್ವರ ಪುರಾಣ ಹಾಗೂ ಶ್ರೀಸಿದ್ದೇಶ್ವರ ಕ್ಲಿನಿಕ್, ಗವಿಶ್ರೀ ಡೈಗ್ನೋಸ್ಟಿಕ್ ಲ್ಯಾಬೋರೆಟರಿ, ಗವಿಸ್ವಾಮಿ ಕ್ಲಿನಿಕ್‌ದಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುಮಾರು 200 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಔಷಧಿ ಪಡೆದರು.

  ಪರಿಶುದ್ದ ಗಾಳಿ, ನೀರು, ಅಹಾರವನ್ನು ನಾವು ಸದ್ಭಳಕೆ ಮಾಡಿಕೊಂಡು ಆರೋಗ್ಯಕರ ಜೀವನ ನಡೆಸಬೇಕು ಅಂದರೆ ಜೀವನದಲ್ಲಿ ಸ್ವಚ್ಚತೆ ಹಾಗೂ ಶುದ್ದತೆಯನ್ನು ಅಳವಡಿಸಿಕೊಳ್ಳಬೇಕು.

  ಗ್ರಾಮೀಣದಲ್ಲಿ ಆಯೋಜಿಸುವ ಇಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಜನರಿಗೆ ಅನೂಕೂಲವಾಗಿದ್ದು, ಆರ್ಥಿಕ ಉಳಿತಾಯ ಆಗಲಿದೆ. ಶ್ರಮದಿಂದ ಬದುಕು ಕಟ್ಟಿಕೊಂಡವರು ಸಾಮಾಜಿಕವಾಗಿ ವಿವಿಧ ಉಚಿತ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವರ ಸಾಮಾಜಿಕ ಕಳಕಳಿಯನ್ನು ಸೂಚಿಸುತ್ತದೆ ಎಂದರು.

  ಶಿಕ್ಷಕ ವಿ.ವಿ.ಗೊಂಡಬಾಳ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಸದೃಡ ಆರೋಗ್ಯ ಬಹಳ ಮುಖ್ಯ, ದೇಹವು ರೋಗಗಳ ನೆಲೆಯಾಗದಂತೆ ಎಚ್ಚರ ವಹಿಸಬೇಕು ಹಾಗೂ ದುಶ್ಚಟಗಳಿಂದ ದೂರವಿರಬೇಕು.

  ಗೂ ಸದಾ ಸಕಾರಾತ್ಮಕ ಚಿಂತನೆ ಮಾಡಬೇಕು. ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.
  ನಿವೃತ್ತ ಪ್ರಾಚಾರ್ಯ ಎ.ಟಿ.ಕಲ್ಮಠ, ಪ್ರಮುಖರಾದ ಡಾ,ಹಾಲೇಶ ಕಬ್ಬೇರ, ಈಶಪ್ಪ ಜೋಳದ,
  ಡಾ.ಸಹನಾ, ಡಾ,ಸ್ವಾಮಿ ಸಿದ್ದನಗೌಡ್ರ, ಡಾ.ಅಭಿಷೇಕ ಹಿರೇಮಠ, ಶಮೀರ, ಕುಮಾರ್,
  ಶಿವು, ಅನಿಲ ಹಕ್ಕಂಡಿ, ನಜರುದ್ದೀನ, ಮಂಜುನಾಥಗೌಡ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts