More

    ಪ್ರತಿನಿತ್ಯ ಮೂರು-ನಾಲ್ಕು ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಿ, ಆರೋಗ್ಯಕಾರಿ ಪ್ರಯೋಜನಗಳು ಸಾಕಷ್ಟಿವೆ

    ಆಹಾರ ಪದ್ಧತಿಯಲ್ಲಿ ಕೇವಲ, ಪೌಷ್ಟಿಕಾಂಶ ಒಳಗೊಂಡಿರುವ ಹಣ್ಣು-ಹಂಪಲು, ಹಸಿರೆಲೆ ಸೊಪ್ಪು ತರಕಾರಿಗಳು ಇದ್ದರೆ ಮಾತ್ರ ಸಾಲದು, ಆಗಾಗ ಡ್ರೈ ಫ್ರೂಟ್ಸ್‌ಗಳ ಜೊತೆಗೆ ಪ್ರತಿ ದಿನ ಒಂದೆರಡು ಹಸಿ ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.


    ಖರ್ಜೂರಗಳನ್ನು ನೀರಿನಲ್ಲಿ ನೆನೆಸಿಟ್ಟು ತಿಂದ್ರೆ ಸಿಗುವ ಪ್ರಯೋಜನಗಳು?
    ಖರ್ಜೂರ ತನ್ನಲ್ಲಿ ನೈಸರ್ಗಿಕ ಸಿಹಿ ಅಂಶಗಳನ್ನು ಹೊಂದಿರು ವುದರ ಜೊತೆಗೆ, ತನ್ನಲ್ಲಿ ಯಥೇಚ್ಛವಾಗಿ ಕ್ಯಾಲೋರಿ, ನಾರಿ ನಾಂಶ, ಕಬ್ಬಿ ಣಾಂಶ, ಪ್ರೋಟೀನ್, ವಿವಿಧ ಬಗೆಯ ವಿಟಮಿ ನ್ಸ್‌ಗಳು, ಖನಿಜಾಂಶಗಳು ಹೇರಳವಾಗಿರುವುದರಿಂದ, ಜೀರ್ಣ ಕ್ರಿಯೆ ಪ್ರಕ್ರಿಯೆಯನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತದೆ,
    ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ, ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ, ಹೀಗೆ ಹಲವಾರು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ.​


    ನೈಸರ್ಗಿಕ ಸಿಹಿ ಅಂಶಗಳನ್ನು ಹೊಂದಿರುವ ಖರ್ಜೂರದಲ್ಲಿ ಗ್ಲೂಕೋಸ್, ಫ್ರಕ್ಟೋಸ್ ಹಾಗೂ ಸುಕ್ರೋಸ್‌ನಂತಹ ನೈಸರ್ಗಿಕ ಸಕ್ಕರೆ ಅಂಶಗಳು ಹೇರಳವಾಗಿ ಕಂಡು ಬರುವುದರಿಂದ, ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವುದು.
    ಇನ್ನು ಇಂದಿನ ದಿನಗಳಲ್ಲಿ ಮೂಳೆಗೆ ಸಂಬಂಧಪಟ್ಟ ಸಮಸ್ಯೆ ಗಳಾದ, ಸಂಧಿ ನೋವು, ಕೀಲು ನೋವಿ ನಂತಹ ಸಮಸ್ಯೆಗಳು ಸಣ್ಣ ವಯಸ್ಸಿ ನಲ್ಲಿಯೇ ಹೆಚ್ಚಿನವರಿಗೆ ಕಂಡು ಬರುತ್ತಿದೆ.
    ಮೂಳೆಯಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆ ಇರುವುದೇ ಈ ಸಮಸ್ಯೆಗೆ ಕಾರಣ. ಹೀಗಾಗಿ ಈ ಸಮಸ್ಯೆ ಇರುವವರು ಖರ್ಜೂರ ವನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಯಾಕೆಂದ್ರೆ ಇದರಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿ ಸಿಗುವು ದರಿಂದ ಮೂಳೆಗಳ ಆರೋಗ್ಯವನ್ನು ವೃದ್ಧಿಸುವುದು​
    ಮಲಬದ್ಧತೆ ಸಮಸ್ಯೆ ಇದ್ದವರು, ಬೆಳಗ್ಗೆ ಖಾಲಿ ಹೊಟ್ಟೆಗೆ ಎರಡು -ಮೂರು ನೆನೆಸಿದ ಖರ್ಜೂರ ಗಳನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ, ಈ ಸಮಸ್ಯೆಯನ್ನು ನಿವಾರಣೆ ಮಾಡ ಬಹುದು.


    ರಕ್ತದಲ್ಲಿ ಕಂಡು ಬರುವ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
    ಇನ್ನು ಖರ್ಜೂರದಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿ ಯಮ್ ಮೊದಲಾದ ಖನಿಜಾಂಶಗಳು ಕಂಡು ಬರುವುದರಿಂದ, ರಕ್ತದೊತ್ತಡವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ


    ಲೈಂಗಿಕ ಸಮಸ್ಯೆಯನ್ನು ಎದುರಿಸುತ್ತಿರುವ ಪುರುಷರು ಮತ್ತು ಮಹಿಳೆಯರು, ಪ್ರತಿದಿನ ರಾತ್ರಿ ಮಲ ಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ಹಾಲಿನಲ್ಲಿ ಸುಮಾರು ಐದಾರು ಖರ್ಜೂರಗಳನ್ನು ಇಡೀ ರಾತ್ರಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಮತ್ತು ಖರ್ಜೂರಗಳನ್ನು ಜೊತೆಗೆ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಸಮಸ್ಯೆಗೆ ಪರಿಹಾರ ಕಾಣಬಹುದು.


    ಸುಸ್ತು ಆಯಾಸ ಅಥವಾ ವೀಕ್‌ನೆಸ್‌‌ನಂತಹ ಸಮಸ್ಯೆಯನ್ನು ಎದುರಿಸುವವರು ಕೂಡ ನೆನೆಸಿದ ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts