More

    ಐಪಿಎಸ್​ ಆಫೀಸರ್​ ಆಗಿದ್ದ ಇವರೀಗ ಸೆಕ್ಯುರಿಟಿ ಆಫೀಸರ್!: ನಿರಪರಾಧಿ ಆರ್​ಎಸ್​ಎಸ್ ಕಾರ್ಯಕರ್ತರ ಪರ ನಿಂತಿದ್ದೇ ಮುಳುವಾಯ್ತು..

    ಕೇರಳ: ಐಪಿಎಸ್​ ಅಧಿಕಾರಿಯಾಗಿ ಖಡಕ್ ಆಗಿದ್ದುಕೊಂಡು ಖಾಕಿ ಖದರ್ ತೋರಿದ್ದ ಇವರು ಇದೀಗ ಸೆಕ್ಯುರಿಟಿ ಆಫೀಸರ್​. ಈ ಅಧಿಕಾರಿಗೆ ಯಾವ ಪರಿಯಾಗಿ ಕಾಟ ಕೊಡಲಾಗಿತ್ತೆಂದರೆ, ನಾಲ್ಕೂವರೆ ವರ್ಷಗಳ ಅಮಾನತುಗೊಳಿಸಲಾಗಿತ್ತು, ನಿವೃತ್ತಿಗೆ ನಕಾರ ಅಂದಿದ್ದಲ್ಲದೆ, ಪಿಂಚಣಿಯನ್ನೂ ತಡೆಹಿಡಿದು, ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಹಿಂಸೆ ನೀಡಲಾಗಿತ್ತು.

    ಕೊನೆಗೂ ಏ. 30ರಂದು ನಿವೃತ್ತರಾಗಿರುವ ಇವರು ಇವೆಲ್ಲದರ ಪರಿಣಾಮವಾಗಿ ಈಗ ಜೀವನ ನಿರ್ವಹಣೆಗೆಂದು ನೆರೆರಾಜ್ಯದ ಖಾಸಗಿ ಸಂಸ್ಥೆಯೊಂದರಲ್ಲಿ ಸೆಕ್ಯುರಿಟಿ ಆಫೀಸರ್​​ ಆಗಿ ಕೆಲಸ ಮಾಡುತ್ತಿದ್ದಾರೆ. ಮೊಹಮದ್ ಫಜಲ್ ಎಂಬಾತನ ಕೊಲೆ ಪ್ರಕರಣದಲ್ಲಿ ಆಡಳಿತ ಪಕ್ಷ ಹೇಳಿದಂತೆ ನಡೆದುಕೊಳ್ಳಲು ನಿರಾಕರಿಸಿದ್ದೇ ಇವರಿಗೆ ಇಷ್ಟೆಲ್ಲ ತೊಂದರೆಗಳಾಗಲು ಕಾರಣ. ಕೇರಳ ಆರ್ಮ್ಡ್​ ಪೊಲೀಸ್​​ನ 5ನೇ ಬೆಟಾಲಿಯನ್​ನ ಕಮಾಂಡೆಂಟ್ ಆಗಿ ನಿವೃತ್ತರಾಗಿರುವ ಕೆ.ರಾಧಾಕೃಷ್ಣನ್ ಅವರೇ ಇಷ್ಟೆಲ್ಲ ಸಮಸ್ಯೆ ಎದುರಿಸಿ ಸಂಕಷ್ಟದಲ್ಲಿರುವ ವ್ಯಕ್ತಿ.

    ಇದನ್ನೂ ಓದಿ: ಗಂಡ-ಹೆಂಡಿರ ಬೇರೆ ಮಾಡಿ ತಾನು ಅಕ್ರಮ ಸಂಬಂಧ ಹೊಂದಿದ ಪೊಲೀಸ್; ನೇಣು ಹಾಕಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆ, ಕಾನ್​ಸ್ಟೆಬಲ್ ಪರಾರಿ..

    ಸಿಪಿಎಂ ತೊರೆದು ಎನ್​ಡಿಎಫ್​ಗೆ ಸೇರಿದ್ದ ಮೊಹಮ್ಮದ್ ಫಜಲ್​ 2006ರ ಅ. 22ರಂದು ಕಣ್ಣೂರಿನಲ್ಲಿ ಗ್ಯಾಂಗ್​ವೊಂದರಿಂದ ಕೊಲೆಗೀಡಾಗಿದ್ದ. ಈ ಸಂದರ್ಭದಲ್ಲಿ ರಾಧಾಕೃಷ್ಣನ್​ ಕಣ್ಣೂರಿನಲ್ಲಿ ಜಿಲ್ಲಾ ಕ್ರೈಮ್​ ರೆಕಾರ್ಡ್ಸ್​ ಬ್ಯೂರೋದ ಡಿವೈಎಸ್​ಪಿ ಆಗಿ ಕರ್ತವ್ಯದಲ್ಲಿದ್ದರು. ಆಗ ಡಿಐಜಿ ಅನಂತಕೃಷ್ಣನ್​ ಅವರು ರಾಧಾಕೃಷ್ಣನ್ ಅವರನ್ನು ತನಿಖಾಧಿರಿ ಆಗಿ ನೇಮಿಸಿ 20 ಜನರ ತಂಡವನ್ನು ರಚಿಸಿ, ಕೊಲೆ ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿದ್ದರು.

    ಫಜಲ್ ಕೊಲೆಯಾದ ಮಾರನೇ ದಿನವೇ ಸ್ಥಳೀಯ ಸಿಪಿಎಂ ಕಾರ್ಯದರ್ಶಿ ಕರಾಯಿ ರಾಜನ್​ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅವರು ಈ ಕೊಲೆ ಪ್ರಕರಣದಲ್ಲಿ ಆರ್​ಎಸ್​ಎಸ್​ನ ನಾಲ್ವರು ಇದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆ ನಾಲ್ವರನ್ನು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಂಡ ರಾಧಕೃಷ್ಣನ್, ಕೊಲೆ ಹಿಂದಿನ ಹಾಗೂ ನಂತರದ ದಿನಗಳಲ್ಲಿ ಕಾರ್ಯಕರ್ತರ ಚಲನವಲನಗಳ ಮಾಹಿತಿಯನ್ನೂ ಸಂಗ್ರಹಿಸಿದ್ದರು.

    ಇದನ್ನೂ ಓದಿ: ಗಂಡನನ್ನು ಕೊಂದು ಗುಂಡಿ ತೋಡಿ ಮುಚ್ಚಿದ ಪತ್ನಿ; ಬಳಿಕ ಮೊಬೈಲ್​ಫೋನ್​ ಸ್ವಿಚ್ಡ್​ ಆಫ್ ಮಾಡಿ ಪರಾರಿ

    ಇದಾದ ಮರುದಿನವೇ ಗೃಹಸಚಿವ ಕೊಡಿಯೇರಿ ಬಾಲಕೃಷ್ಣನ್​ ಅವರು ರಾಧಾಕೃಷ್ಣನ್​ ಅವರನ್ನು ತಮ್ಮ ಗೆಸ್ಟ್​ಹೌಸ್​ಗೆ ಕರೆಸಿಕೊಂಡು ಏಳೇ ದಿನಗಳೊಳಗೆ ಚಾರ್ಜ್​ಶೀಟ್​ ದಾಖಲಿಸುವಂತೆ ಸೂಚಿಸಿದ್ದರು. ಆದರೆ ಈ ಕೊಲೆ ಪ್ರಕರಣದಲ್ಲಿ ಆರ್​ಎಸ್​​ಎಸ್​ ಕಾರ್ಯಕರ್ತರ ಕೈವಾಡವಿಲ್ಲ ಎಂದು ಖಚಿತವಾಗುತ್ತಿದ್ದಂತೆ ರಾಧಾಕೃಷ್ಣನ್ ಆ ಎಲ್ಲ ಕಾರ್ಯಕರ್ತರನ್ನು ಬಿಟ್ಟು ಕಳಿಸಿದ್ದರಿಂದ ಅವರು ಸಿಪಿಎಂ ಕೆಂಗಣ್ಣಿಗೆ ಗುರಿಯಾದರು.

    ಈ ಮಧ್ಯೆ ರಾಧಾಕೃಷ್ಣನ್ ಸ್ಥಳೀಯ 300 ಕರೆಗಳ ಮಾಹಿತಿ ಕಲೆ ಹಾಕಿದ್ದು, ಅದರಲ್ಲಿ ಫಜಲ್ ಕೊಲೆಯಾದ ಸಂದರ್ಭದಲ್ಲಿ ಕರಾಯಿ ರಾಜನ್ ಆಪ್ತ ಮಾತ್ರವಲ್ಲದೆ, ಸಿಪಿಎಂ ಕಚೇರಿಯಿಂದಲೂ ಹೋದ ಕರೆಗಳ ಮಾಹಿತಿ ಇದ್ದವು. ಎರಡು ದಿನಗಳ ಬಳಿಕ ಮತ್ತೆ ರಾಧಾಕೃಷ್ಣನ್ ಅವರನ್ನು ಕರೆಸಿಕೊಂಡ ಗೃಹ ಸಚಿವ, ತಮ್ಮ ಪಕ್ಷದ ಯಾರ ಮೇಲೂ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿದ್ದಲ್ಲದೆ, ಫಜಲ್ ಕೊಲೆ ಪ್ರಕರಣದ ತನಿಖೆಯನ್ನು ಕ್ರೈಮ್​ ಬ್ರ್ಯಾಂಚ್​ಗೆ ವರ್ಗಾಯಿಸಿ, ತನಿಖಾಧಿಕಾರಿ ಸ್ಥಾನದಿಂದ ರಾಧಾಕೃಷ್ಣನ್ ಅವರನ್ನು ಎತ್ತಂಗಡಿ ಮಾಡಿಸಿದ್ದರು.

    ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಫಜಲ್ ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಪ್ರತ್ಯಕ್ಷದರ್ಶಿಗಳು ನನಗೆ ಮಾಹಿತಿ ನೀಡಿದ್ದರು. ಆದರೆ ಅದರಲ್ಲಿ ಒಬ್ಬರಾದ ಬಿಜೆಪಿ ಮುಖಂಡನನ್ನು ಕೊಲೆ ಮಾಡಲಾಗಿದ್ದರೆ, ಸಿಪಿಎಂ ಆ್ಯಕ್ಷನ್ ತಂಡದ ಮಾಜಿ ಸದಸ್ಯನ ಶವ ರೈಲ್ವೆ ಹಳಿಯಲ್ಲಿ ಕಂಡು ಬಂದಿತ್ತು ಎಂದು ರಾಧಾಕೃಷ್ಣನ್ ಹೇಳಿಕೊಂಡಿದ್ದಾರೆ.

    ಕ್ರಮೇಣ ಫಜಲ್ ಪತ್ನಿ ಕೇರಳ ಹೈಕೋರ್ಟ್​ಗೆ ಮನವಿ ಮಾಡಿಕೊಂಡ ಬಳಿಕ ಕೊಲೆ ಪ್ರಕರಣದ ತನಿಖೆ ಜವಾಬ್ದಾರಿ ಸಿಬಿಐಗೆ ಹಸ್ತಾಂತರವಾಗಿತ್ತು. 2012ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಪಿಎಂ ಕಾರ್ಯಕರ್ತರ ವಿರುದ್ಧ ಸಿಬಿಐ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    2006ರ ಡಿಸೆಂಬರ್ 15ರಂದು ಸಿಪಿಎಂ ಕಾರ್ಯಕರ್ತರಿಂದ ತಮ್ಮ ಮೇಲೆ ಭಯಂಕರ ಹಲ್ಲೆ ಆಗಿತ್ತು. ಬೆನ್ನುಮೂಳೆಗೆ ಏಟಾಗಿ ಒಂದೂವರೆ ವರ್ಷ ಕಾಲ ಆಸ್ಪತ್ರೆಯಲ್ಲಿ ಕಳೆಯಬೇಕಾಗಿತ್ತು. ಮಾತ್ರವಲ್ಲ ಅದಾದ ಮೇಲೂ ಮೂರು ಸಲ ಹಲ್ಲೆಯತ್ನ ಆಗಿತ್ತು ಎಂದು ಹೇಳಿಕೊಂಡಿರುವ ರಾಧಾಕೃಷ್ಣನ್ ತಮ್ಮ ಜೀವಕ್ಕೆ ಅಪಾಯವಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ನನ್ನನ್ನು ಯಾವತ್ತು ಬೇಕಾದರೂ ಸಾಯಿಸಬಹುದು. ಆದರೆ ಅಷ್ಟರೊಳಗೆ ನಾನು ನನ್ನ ಮಕ್ಕಳನ್ನು ಭದ್ರತೆ ಒದಗಿಸಬೇಕಿದೆ ಎಂದು ಅಲವತ್ತುಕೊಂಡಿದ್ದಾರೆ.

    ಇದನ್ನೂ ಓದಿ: ಪ್ರೀತಿಗೆ ಅಡ್ಡಿಯಾಗಿದ್ದ ತಂದೆಯನ್ನು ಪ್ರಿಯಕರನಿಂದ ಕೊಲ್ಲಿಸಿದ ಮಗಳು!; ಮನೇಲಿ ಅಪ್ಪ ಒಬ್ರೇ ಇದ್ದಾರೆ ಅಂತ ಕರೆಸಿ ಕೊಲ್ಲಿಸಿದ್ಲು…

    ಐಪಿಎಸ್ ಅಧಿಕಾರಿ ಆಗಿದ್ದ ರಾಧಾಕೃಷ್ಣನ್ ಎಷ್ಟು ಕಷ್ಟದಲ್ಲಿದ್ದಾರೆಂದರೆ, ರಿಸರ್ಚ್ ಸ್ಕಾಲರ್ ಆಗಿರುವ ಅವರ ಮಗಳ ಹಾಸ್ಟೆಲ್ ಖರ್ಚು ನಿಭಾಯಿಸಲು ಕೂಡ ಆಗುತ್ತಿಲ್ಲ. ಸ್ನಾತಕೋತ್ತರ ಪದವೀಧರನಾಗಿರುವ ಪುತ್ರ ಸಿವಿಲ್ ಸರ್ವಿಸ್​ ಕೋಚಿಂಗ್ ಕೋರ್ಸ್ ಅರ್ಧಕ್ಕೆ ನಿಲ್ಲಿಸುವಂತಾಗಿದೆ. ತಮ್ಮ ಕೇಸ್​ಗೆ ಸಂಬಂಧಿಸಿಂದೆ ಕುಟುಂಬದ ಆಸ್ತಿಯನ್ನು ಅಡವಿಟ್ಟಿದ್ದು, ಅದರ ಸಾಲ ತೀರಿಸಲಾಗದೆ ಮನೆ ಹರಾಜಿಗೆ ಬಂದಿತ್ತು ಎಂದು ತಮ್ಮ ಸಂಕಟವನ್ನು ತೋಡಿಕೊಂಡಿದ್ದಾರೆ. -ಏಜೆನ್ಸೀಸ್​

    ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತ ಮೂರೇ ದಿನಕ್ಕೆ ಅಮ್ಮ ಇನ್ನಿಲ್ಲ; ಸಿಜೇರಿಯನ್ ಮಾಡಿದ ವೈದ್ಯರ ನಿರ್ಲಕ್ಷ್ಯ ಎಂದು ಪಾಲಕರ ಆರೋಪ

    ಲಗ್ನವಾಗಲು ಹೊರಟ ಯುವತಿ, ವಜ್ರದೇಹಿ ಸ್ವಾಮೀಜಿಯ ಮಧ್ಯಪ್ರವೇಶ: ಈ ಮದ್ವೆ ಬೇಡ ಎಂದು ಆಕೆಯ ಮನವೊಲಿಕೆ; ಕಾರಣ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts