More

    ಐಸಿಯುನಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿ, ಸಾವಿನಮನೆಯ ಹಾದಿ ತುಳಿದ…

    ಬೆಂಗಳೂರು: ಕರೊನಾ ಸೋಂಕಿತನಾಗಿದ್ದು, ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುವಂತೆ ವೈದ್ಯರು ಅದೆಷ್ಟೇ ಸಲಹೆ ನೀಡಿದರೂ ಕೇಳದ ಯುವಕನೊಬ್ಬ ಸಾವಿನಮನೆಯ ಹಾದಿ ತುಳಿದಿದ್ದಾನೆ.

    23 ವರ್ಷದ ಆ ಯುವಕನಲ್ಲಿ ಕರೊನಾ ಲಕ್ಷಣಗಳು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯಿಂದ ಆತನನ್ನು ಬೌರಿಂಗ್​ ಮತ್ತು ಲೇಡಿ ಕರ್ಜನ್​ ಆಸ್ಪತ್ರೆಗೆ ಜೂನ್​ 9ರಂದು ಸ್ಥಳಾಂತರಿಸಲಾಗಿತ್ತು. ಆತನ ಪರಿಸ್ಥಿತಿ ಗಂಭೀರವಾಗಿದ್ದಲ್ಲದೆ, ತೀವ್ರವಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ. ಮಧುಮೇಹ ರೋಗಿಯಾಗಿದ್ದ ಆತ ತೀವ್ರ ಜ್ವರದಿಂದ ಬಳಲುತ್ತಿದ್ದ ಅಲ್ಲದೆ, ರಕ್ತದಲ್ಲಿ ಗ್ಲುಕೋಸ್​ ಪ್ರಮಾಣವೂ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಐಸಿಯುಗೆ ದಾಖಲಿಸಿ ಆತನಿಗೆ ಚಿಕಿತ್ಸೆ ಕೊಡಲು ನಿರ್ಧರಿಸಲಾಗಿತ್ತು. ಆದರೆ ಯಾರ ಮಾತನ್ನೂ ಕೇಳದ ಆತ ಹಟ ಹಿಡಿದು ಸ್ವಪ್ರೇರಣೆ ಮೇರೆಗೆ ಆಸ್ಪತ್ರೆಗೆ ಬಿಡುಗಡೆಗೊಳಿಸಿಕೊಂಡು ಮನೆಗೆ ತೆರಳಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

    ಆತನ ಗಂಟಲು ದ್ರವ ಮಾದರಿಯ ಪರೀಕ್ಷೆಯಲ್ಲಿ ಆತನಿಗೆ ಕರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಜೂನ್​ 11ರಂದು ಮತ್ತೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ, ಜೂ.12ರಂದು ಆತ ಮೃತಪಟ್ಟ ಎಂದು ಹೇಳಿದ್ದಾರೆ.

    ಲಡಾಖ್​ ಬಿಕ್ಕಟ್ಟು ಪರಿಹಾರ ಆಗುತ್ತಿದೆ, ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts