ಲಡಾಖ್​ ಬಿಕ್ಕಟ್ಟು ಪರಿಹಾರ ಆಗುತ್ತಿದೆ, ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿದೆ…

ದೆಹ್ರಾಡೂನ್​: ಲಡಾಖ್​ ಬಿಕ್ಕಟ್ಟು ಪರಿಹಾರಿದ ನಿಟ್ಟಿನಲ್ಲಿ ಚೀನಾದೊಂದಿಗೆ ನಡೆಸುತ್ತಿರುವ ಮಾತುಕತೆ ಫಲ ನೀಡಲಾರಂಭಿಸಿದೆ. ಗಲ್ವಾನ್​ ಕಣಿವೆಯಲ್ಲಿ ನಿಯೋಜಿಸಿದ್ದ ತನ್ನ ಸೇನೆಯನ್ನು ಚೀನಾ ಹಂತ ಹಂತವಾಗಿ ಹಿಂದಕ್ಕೆ ಪಡೆದುಕೊಳ್ಳುತ್ತಿದೆ ಎಂದು ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ ತಿಳಿಸಿದ್ದಾರೆ. ಇಂಡಿಯನ್​ ಮಿಲಿಟರಿ ಅಕಾಡೆಮಿಯಲ್ಲಿ ಶನಿವಾರ ಆಯೋಜನೆಗೊಂಡಿದ್ದ ನಿರ್ಗಮನ ಪಥಸಂಚಲನ ಕಾರ್ಯಕ್ರಮದ ನಂತರದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು. ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸದ್ಯ ನಡೆಯುತ್ತಿರುವ ಮಾತುಕತೆ ಪ್ರಕ್ರಿಯೆ ನಂತರದಲ್ಲಿ ಉಭಯ ರಾಷ್ಟ್ರಗಳ ನಡುವಿನ ಎಲ್ಲ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ ಎಂಬ … Continue reading ಲಡಾಖ್​ ಬಿಕ್ಕಟ್ಟು ಪರಿಹಾರ ಆಗುತ್ತಿದೆ, ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿದೆ…