More

    ಮಳವಳ್ಳಿ ತಾಲೂಕಿನ ವಿವಿಧ ಮಠಗಳಿಗೆ ಎಚ್‌ಡಿಕೆ ಸಹೋದರ ಭೇಟಿ

    ಮಳವಳ್ಳಿ: ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ಬುಧವಾರ ಸಹೋದರ ಎಚ್.ಡಿ.ರಮೇಶ್ ತಾಲೂಕಿನ ವಿವಿಧ ಮಠಗಳಿಗೆ ಭೇಟಿ ನೀಡಿದರೆ, ಇತ್ತ ಗುರುವಾರ ಮಾಜಿ ಶಾಸಕ ವೆಂಕಟಗೌಡ ನಾಡಗೌಡ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪ್ರತ್ಯೇಕವಾಗಿ ಬಿರುಸಿನ ಪ್ರಚಾರ ನಡೆಸಿದರು.

    ತಾಲೂಕಿನ ವೀರಶೈವ-ಲಿಂಗಾಯತ ಸಮುದಾಯದ ಪ್ರಮುಖ ಮಠಗಳಾದ ಡಿ.ಹಲಸಹಳ್ಳಿ ಗವಿಮಠ, ಧನಗೂರು ಮಠ, ಹೆಬ್ಬಣಿ, ಹೊಸಹಳ್ಳಿ, ಬೆಳಕವಾಡಿ, ಬಿ.ಜಿ.ಪುರ, ಸರಗೂರು, ಪೂರಿಗಾಲಿ, ಹಣಕೋಳ, ನೆಲ್ಲಿಗೆರೆ, ಹಂಗ್ರಾಪುರ, ರಾಗಿಬೊಮ್ಮನಹಳ್ಳಿ, ಕುಂದೂರು, ದೊಡ್ಡಬೂಹಳ್ಳಿ, ದ್ಯಾವಪಟ್ಟಣ ಮಠಕ್ಕೆ ರಮೇಶ್ ಭೇಟಿ ನೀಡಿ ಸ್ವಾಮೀಜಿಗಳಿಗೆ ಗೌರವ ಸಲ್ಲಿಸಿದರು.

    ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಡಿ.ಜಯರಾಮು, ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ ಕಂಸಾಗರ, ಉಪಾಧ್ಯಕ್ಷ ಸಿದ್ದಾಚಾರಿ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ್, ಪುರಸಭೆ ಸದಸ್ಯ ಟಿ.ನಂದಕುಮಾರ್, ಮುಖಂಡರಾದ ಅಶೋಕ್ ಕ್ಯಾತನಹಳ್ಳಿ, ಕೃಷ್ಣ, ಪ್ರಭಾಕರ್, ನಾಗಭೂಷಣ್, ಶಿವಲಿಂಗಸ್ವಾಮಿ, ಬಸವರಾಜು ಇದ್ದರು.

    ನಡಕಲಪುರ, ರಾಗಿಬೊಮ್ಮನಹಳ್ಳಿ , ಕುಂದೂರು ರಸಸಿದ್ದೇಶ್ವರ ಮಠ, ಹಿಟ್ಟನಹಳ್ಳಿ ಕೊಪ್ಪಲಿಗೆ ಮಾಜಿ ಶಾಸಕ ವೆಂಕಟಗೌಡ ನಾಡಗೌಡ ಭೇಟಿ ನೀಡಿ ವೀರಶೈವ ಮುಖಂಡರೊಂದಿಗೆ ಸಭೆ ನಡೆಸಿ ಮತಯಾಚಿಸಿದರು. ಇದೇ ವೇಳೆ ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಸಿ.ಎಂ. ಪುಟ್ಟುಬುದ್ದಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಮಲ್ಲಪ್ಪ, ಮುಖಂಡರಾದ ಮಾಗನೂರು ರಾಜು, ಕುಂದೂರು ಮೂರ್ತಿ, ಗುರುಸ್ವಾಮಿ ಇತರರಿದ್ದರು.

    ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೆಲಮಾಕನಹಳ್ಳಿ , ಕಂದೇಗಾಲ, ನಾಗೇಗೌಡನದೊಡ್ಡಿ, ನಿಡಘಟ್ಟ, ತಳಗವಾದಿ, ದುಗ್ಗನಹಳ್ಳಿ, ಹಿಟ್ಟನಹಳ್ಳಿ ಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಸುವುದರ ಜತೆಗೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು.

    ಜೆಡಿಎಸ್ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಡಿ.ಜಯರಾಮು, ಜಿಲ್ಲಾ ಉಪಾಧ್ಯಕ್ಷ ಸಿದ್ದಾಚಾರಿ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ್, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮನ್ಮುಲ್ ನಿರ್ದೇಶಕಿ ರೂಪಾ, ಯಮದೂರು ಸಿದ್ದರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts