More

    ನಮ್ಮದು ತುಂಬು ಸಂಸಾರ… ರಾಜ್ಯದ ಜನತೆಯ ಒಳಿತಿನ ಬಗ್ಗೆ ಕುಟುಂಬದಲ್ಲಿ ಚರ್ಚೆಯಾಗುತ್ತದೆ; ಎಚ್​ಡಿಕೆ

    ಚಿಕ್ಕಮಗಳೂರು: ನಮ್ಮದು ತುಂಬು ಸಂಸಾರ… ದೊಡ್ಡ ಸಂಸಾರ… ನಮ್ಮ ಕುಟುಂಬದಲ್ಲಿ ರಾಜ್ಯದ ಜನತೆಯ ಒಳಿತಿಗಾಗಿ ನಿರಂತರ ಚರ್ಚೆಯಾಗುತ್ತದೆ. ಹೀಗಾಗಿ ಜನತೆಯ ಕೆಲಸ ಮಾಡಲು ನಮ್ಮ ಕುಟುಂಬದಲ್ಲಿ ಪೈಪೋಟಿ ಏರ್ಪಡುತ್ತಲೇ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೊಪ್ಪದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡುತ್ತಾ, ಹಾಸನ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸುವ ವಿಚಾರದಲ್ಲಿ ದೇವೆಗೌಡರ ಮನೆಯಲ್ಲಿ ಭಿನ್ನಮತ ಆರಂಭವಾಗಿದೆ. ಮನೆಯನ್ನು ನಿಯಂತ್ರಣ ಮಾಡಲಾಗದವರು ರಾಜ್ಯವನ್ನು ನಿಯಂತ್ರಣ ಮಾಡಲಾಲು ಸಾಧ್ಯವೇ? ಇದಕ್ಕೆ ಎಚ್‌.ಡಿ.ಕುಮಾರಸ್ವಾಮಿ ಸಮಜಾಯಿಷಿ ನೀಡಲಿ. ಮನೆಯಲ್ಲಿರುವ ಎಲ್ಲರಿಗೂ ಟಿಕೆಟ್ ಕೊಟ್ಟ ಮೇಲೆ ಮತ್ತೇಕೆ ಕಿತ್ತಾಟ? ಮೊದಲು ನಿಮ್ಮ ಮನೆ ಸರಿಮಾಡಿಕೊಂಡು ಬನ್ನಿ, ನಂತರ ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳಿದ್ದರು.

    ಇದನ್ನೂ ಓದಿ: VIDEO | ನಾಟು ನಾಟು ಹಾಡಿಗೆ ದಕ್ಷಿಣ ಕೊರಿಯಾ ರಾಯಭಾರ ಕಚೇರಿ ಸಿಬ್ಬಂದಿ ನೃತ್ಯ; ಪ್ರಧಾನಿ ಮೋದಿ ಶ್ಲಾಘನೆ

    ಪ್ರಲ್ಹಾದ್ ಜೋಶಿ ಹೇಳಿಕೆ ವಿಚಾರವಾಗಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಹಿಂದು ಸಂಸ್ಕೃತಿಯನ್ನು ಪಾಠ ಮಾಡುತ್ತಾ ನಿಮ್ಮಂತೆ ರಾಜ್ಯವನ್ನು ಹಾಳು ಮಾಡುವ ಕೆಲಸ ನಾವು ಮಾಡುತ್ತಿಲ್ಲ. ನೀವೆಲ್ಲರೂ ಲೂಟಿ ಹೊಡೆದು ಕೂತಿದ್ದೀರಿ. ನಿಮ್ಮಂತೆ ನಾವು ರಾಜ್ಯವನ್ನು ಲೂಟಿ ಹೊಡೆದಿದ್ದೇವಾ? ರಾಜ್ಯದ ಕಷ್ಟ ಸುಖ ನೋಡಿಕೊಂಡು ನಮ್ಮ ಕುಟುಂಬ ಬದುಕುತ್ತಿದೆ. ನಿಮ್ಮಂತಹ ಲೂಟಿ ಕೋರರಿಂದ ನಾವು ಪಾಠ ಕಲಿಯಬೇಕಾ? ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts