More

    ಮುಳುಗುವ ಹಡಗು ಎನ್ನುವವರಿಗೆ 2023ರಲ್ಲಿ ಉತ್ತರ : ವಿರೋಧಿಗಳಿಗೆ ಮಾಜಿ ಸಿಎಂ ಎಚ್‌ಡಿಕೆ ಸಂದೇಶ

    ಬಿಡದಿ : ಕಳೆದ 7 ದಿನಗಳಿಂದ ನಡೆದ ಕಾರ್ಯಾಗಾರ ಪಕ್ಷದ ಶಾಸಕರು, ಮುಖಂಡರಲ್ಲಿ ಉತ್ಸಾಹ ತುಂಬಿದ್ದು, ಜೆಡಿಎಸ್ ಮುಳುಗಿದ ಹಡಗು ಎನ್ನುವವರಿಗೆ 2023ರಲ್ಲಿ ಉತ್ತರ ಸಿಗಲಿದೆ ಎಂದು ವಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
    ಬಿಡದಿಯ ಕೇತಿಗಾನಹಳ್ಳಿ ತೋಟದಲ್ಲಿ ಕಾರ್ಯಾಗಾರದ ಕೊನೆಯ ದಿನವಾದ ಮಂಗಳವಾರ ಕ್ರೈಸ್ತ ಅಲ್ಪಸಂಖ್ಯಾತ ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಾಗಾರದ ಮೂಲಕ ರಾಜ್ಯದ ಜನರಿಗೆ ಸಂದೇಶ ನೀಡಲಾಗಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ವಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯವಿದೆ. ಪಂಚರತ್ನ ಯೋಜನೆಗಳನ್ನು ಸಾಕಾರ ವಾಡಿ ರಾಜ್ಯದ ಜನತೆಯ ಸರ್ಕಾರವನ್ನು ರಚಿಸಬೇಕೆಂಬ ನನ್ನ ಕನಸು ಈಡೇರಿಸಲು ಜನತೆ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.

    ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಯುತ್ತಿರುವುದು ಚುನಾಯಿತ ಪ್ರತಿನಿಧಿಗಳ ಸರ್ಕಾರವಲ್ಲ, ಬದಲಿಗೆ ಆರ್‌ಎಸ್‌ಎಸ್‌ನ ಮುಖಂಡರ ಆದೇಶದಂತೆಯೇ ಆಡಳಿತ ನಡೆಯುತ್ತಿದೆ ಎಂದ ಅವರು, 1990ರಲ್ಲಿ ಆಡ್ವಾಣಿ, ವಾಜಪೇಯಿ ಬಿಜೆಪಿ ಕಟ್ಟುವಾಗ ಜಿನ್ನ ಅವರ ಬಗ್ಗೆ ವಾತನಾಡಿದರು ಎಂಬ ಕಾರಣಕ್ಕೆ ಆಡ್ವಾಣಿಗೆ ದೆಹಲಿಯ ಆರ್‌ಎಸ್‌ಎಸ್ ಕಚೇರಿಗೆ ಬರುವಂತೆ ಬುಲಾವ್ ಬರುತ್ತದೆ. ವಾಜಪೇಯಿ ಪಿಎಂ ಅಭ್ಯರ್ಥಿ ೋಷಣೆ ವಾಡಿದಾಗ ಆಡ್ವಾಣಿಗೆ ನೋಟಿಸ್ ನೀಡುತ್ತಾರೆ. ಅದೇ ರೀತಿ ಇಂದೂ ಸ್ವತಂತ್ರವಾಗಿ ಅಧಿಕಾರ ನಡೆಸಲು ಸಾಧ್ಯವಾಗದ ಸ್ಥಿತಿಯಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರಗಳು ಆರ್‌ಎಸ್‌ಎಸ್ ನಿರ್ದೇಶನದಂತೆ ಆಡಳಿತ ನಡೆಸುತ್ತಿವೆ ಎಂದು ಕಿಡಿಕಾರಿದರು.

    ನಮ್ಮ ದೇಶದಲ್ಲಿರುವ ಕ್ರೈಸ್ತರು ಬಡತನದಿಂದ ಬಳಲಿದವರು. ಅಗತ್ಯ ಸೌಲಭ್ಯಗಳು ಸಿಕ್ಕರೆ ಮತಾಂತರದ ಚಿಂತನೆ ವಾಡದೆ ಹುಟ್ಟಿದ ಧರ್ಮದಲ್ಲಿ ಬದುಕುತ್ತಾರೆ. ನಾಡಗೀತೆಯಲ್ಲಿ ಕುವೆಂಪು ತಿಳಿಸಿರುವಂತೆ ಸರ್ವಧರ್ಮದ ಶಾಂತಿಯ ವಾತಾವರಣ ನಿರ್ಮಿಸುವುದಾಗಿದೆ. ಮತಾಂತರ ನಿಷೇಧ ವಿಧೇಯಕಕ್ಕಿಂತ ದುಡಿಯುವ ಕೈಗೆ ಅಧಿಕಾರ ನೀಡಬೇಕಿದೆ. ಎಂದು ಪತ್ರಕರ್ತರ ಪ್ರಶ್ನೆಗೆ ಎಚ್‌ಡಿಕೆ ಉತ್ತರಿಸಿದರು.
    ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕಮಾರಸ್ವಾಮಿ, ವಾಜಿ ಸಚಿವ ಬಂಡಪ್ಪ ಕಾಶಂಪೂರ್, ಎಂಎಲ್‌ಸಿ ರಮೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ಇದೇ ವೇಳೆ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಕೃಷ್ಣಾನಾಯಕ್ ಅಪಾರ ಬೆಂಬಲಿಗರೊಂದಿಗೆ ಕರಿಕಂಬಳಿ, ಕುರಿಮರಿಗಳ ಜೊತೆ ಬಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ವಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

     

    ಬಿಜೆಪಿಯ ಹಿಡನ್ ಅಜೆಂಡಾ, ದೇಶವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವುದಾಗಿದೆ. ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡದೆ, ಬಡತನ ಹೋಗಲಾಡಿಸಲು ಕಾರ್ಯಕ್ರಮ ರೂಪಿಸಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಸಿಲ್ಲ. 2016ರಲ್ಲಿ ಆರ್‌ಎಸ್‌ಎಸ್ ಸಿದ್ಧಾಂತ ಪ್ರತಿಪಾದಿಸುವ 676 ಜನ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಈ ಅಧಿಕಾರಿ ವರ್ಗವನ್ನು ಸೃಜಿಸಿಕೊಂಡು ಬಿಜೆಪಿಯನ್ನು ಸದೃಢವಾಗಿಸುವ ಕೆಲಸ ವಾಡಿದ್ದಾರೆ. ಪ್ರಸ್ತುತ ದೇಶ ಹೋಗುತ್ತಿರುವ ಹಾದಿ ನೋಡಿದರೆ ಜನರ ಮುಂದೆ ಸತ್ಯ ಇಡುವುದು ಅಗತ್ಯವೆಂದು ನನಗೆ ಅನಿಸುತ್ತಿದೆ. ಸತ್ಯ ಹೇಳಲು ಹಿಂಜರಿಕೆ ಇಲ್ಲ. ನನ್ನ ಹೇಳಿಕೆ ಯಾರ ಪರ ಅಥವಾ ವಿರೋಧವೂ ಇಲ್ಲ. ಸತ್ಯ ಚರ್ಚೆ ಆಗಬೇಕೆಂಬುದು ನನ್ನ ಆಸೆಯಾಗಿದೆ ಎಂದರು.

    ಈ ರೀತಿ ವಾತಾವರಣದಲ್ಲಿ ಯುವಕರು ಬುದ್ದಿವಂತರಾಗದಿದ್ದರೆ, ದೇಶ ಅಧೋಗತಿಗೆ ಹೋಗಲು ಯುವಕರೇ ಕಾರಣರಾಗುತ್ತಾರೆ ಎಂದು ಎಚ್ಚರಿಸಿದ ಎಚ್‌ಡಿಕೆ, ಇವೆಲ್ಲವನ್ನು ಗಮನಿಸಿ ರಾಜ್ಯದಲ್ಲಿ ಸರ್ವ ಧರ್ಮಗಳನ್ನು ಸಾರುವ ಆಡಳಿತ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷವನ್ನು ಅಣಿಗೊಳಿಸುತ್ತಿರುವುದಾಗಿ ತಿಳಿಸಿದರು. ಕರ್ನಾಟಕದಿಂದಲೇ ಹಿಡನ್ ಸರ್ಕಾರ ತೆಗೆಯಲು ತೀಮಾವಾನ ಮಾಡಿ ವಿಷಯಗಳ ಆಧಾರದ ಮೇಲೆ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

    ಸರ್ಕಾರ ನೌಕರರ ಹಿತಕಾಯಲಿ : ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ವೇತನ ವಿಳಂಬ ಮಾಡುತ್ತಿರುವ ಸರ್ಕಾರದ ನಡೆಯನ್ನು ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು. ಲಾಭದಲ್ಲಿದ್ದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಯಲ್ಲಿ ಆಡಳಿತ ನಡೆಸುವವರಿಂದ ಮತ್ತು ಸಂಬಂಧಿಸಿದ ಮಂತ್ರಿಗಳ ಲೋಪದಿಂದ ನೌಕರರು ಇಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೂಡಲೇ ಅವಾನತು ವಾಪಸ್ ಪಡೆದು, ಸಾರಿಗೆ ನೌಕರರಿಗೆ ವೇತನ ಪಾವತಿ ವಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮಾಯಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಒತ್ತಾಯ ವಾಡಿದ್ದಾರೆ. ಕರೊನಾದಿಂದ ತತ್ತರಿಸಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಮೇಲೆ ಕ್ಷಮೆ ತೋರುವ ಔದಾರ್ಯವನ್ನು ಸರ್ಕಾರ ತೋರಬೇಕಿದೆ. ಈ ನೌಕರರಿಗೆ ಆಗಸ್ಟ್‌ನಲ್ಲಿ ಅರ್ಧ ಸಂಬಳ ಆಗಿದ್ದು, ಸೆಪ್ಟೆಂಬರ್‌ನಲ್ಲಿ ಪೂರ್ಣ ಸಂಬಳ ಆಗಿಲ್ಲ ಎನ್ನುವ ವಾಹಿತಿ ಬಂದಿದೆ. ಮಕ್ಕಳು ತಪ್ಪು ವಾಡುವುದು ಸಹಜ. ತಂದೆ-ತಾಯಿ ಸ್ಥಾನದಲ್ಲಿರುವ ಸರ್ಕಾರ ಕ್ಷಮಿಸುವ ದೊಡ್ಡ ಮನಸ್ಸು ವಾಡಬೇಕು. ಸಾರಿಗೆ ನೌಕರರ ಮೇಲೆ ಹಗೆತನ ಸಾಧಿಸುವುದು ಬೇಡ ಎಂದು ಸಲಹೆ ನೀಡಿದರು.

    1994ರಲ್ಲಿ ದೇವೇಗೌಡರು ನೀರಾವರಿ ಯೋಜನೆಗೆ ಕೊಟ್ಟ ಕೊಡುಗೆಯನ್ನು ಉತ್ತರ ಕರ್ನಾಟಕ ಜನರು ಅರ್ಥ ಮಾಡಿಕೊಳ್ಳಬೇಕು. ಎತ್ತಿನಹೊಳೆಯ 14 ಸಾವಿರ ಕೋಟಿ ಏನಾಯಿತು. ಮೇಕೆದಾಟು ಯೋಜನೆ ೋಷಣೆ ಅಧಿಕಾರಕ್ಕೆ ವಾತ್ರ ಬಳಕೆ ಮಾಡಲಾಗುತ್ತಿದೆ. ಕಾಂಗ್ರೆಸ್‌ನ ಸ್ವೇಚ್ಚಾಚಾರದ ಪರಿಣಾಮದಿಂದ ದೇಶ ಈ ಸ್ಥಿತಿಯತ್ತ ಸಾಗಿದೆ. ಕಾಂಗ್ರೆಸ್‌ನವರು ಅಧಿಕಾರ ಹಿಡಿಯಲು ವೇಗವಾಗಿದ್ದಾರೆ. ಎಲ್ಲಿ ಜೆಡಿಎಸ್ ವೀಕ್ ಇದೆ, ಅಲ್ಲಿ ಕಾಂಗ್ರೆಸ್ ಬೆಂಬಲಿಸಿ ಎಂದು ಹೇಳಿರುವುದು ನಮ್ಮ ಔದಾರ್ಯದ ಹೇಳಿಕೆಯಾಗಿದೆ. ಅದನ್ನು ಅರ್ಥ ವಾಡಿಕೊಳ್ಳದ ಕಾಂಗ್ರೆಸ್ ಮುಖಂಡರು ನಮ್ಮನ್ನು ಎ ಮತ್ತು ಬಿ ಟೀಮ್ ಎಂದು ಕರೆಯುವುದನ್ನು ಬಿಟ್ಟು ಕೆಲಸ ವಾಡಲಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಬಗ್ಗೆ ಗೌರವವಿದ್ದರೆ ಕೇಂದ್ರ ಸಚಿವರನ್ನು ಸಂಪುಟದಿಂದ ವಜಾ ವಾಡಿ ತಪ್ಪಿತಸ್ಥರನ್ನು ಅರೆಸ್ಟ್ ವಾಡಬೇಕಿತ್ತು. ಅಧಿಕಾರಕ್ಕಾಗಿ ಬಡವರ ಮೇಲೆ ರಕ್ತ ಚೆಲ್ಲಾಟ ವಾಡುತ್ತಿರುವ ಬಗ್ಗೆ ಕಿಡಿಕಾರಿದ ಅವರು ನಾನು ಸಿಎಂ ಇದ್ದಾಗ 14 ರೈತರ ಸಭೆ ನಡೆಸಿದೆ. ಆದರೆ ಇದುವರೆಗೂ ಪ್ರಧಾನಿ ರೈತರ ಒಂದು ಸಭೆ ನಡೆಸಿಲ್ಲ ಎಂದರು.

    ಕಾರ್ಯಾಗಾರಕ್ಕೆ ತೆರೆ : ಎರಡು ಹಂತಗಳಲ್ಲಿ ನಡೆದ ಜೆಡಿಎಸ್ ಸಂಟನಾ ಕಾರ್ಯಾಗಾರಕ್ಕೆ ಮಂಗಳವಾರ ಸಂಜೆ ತೆರೆ ಬಿದ್ದಿದೆ. ಜೆಡಿಎಸ್ ಶಾಸಕರು, ವಾಜಿ ಶಾಸಕರು, ನಿಯೋಜಿತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ಯುವ ಟಕ, ಮಹಿಳಾ ಟಕ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ, ಕ್ರೈಸ್ತ ಅಲ್ಪಸಂಖ್ಯಾತ ಟಕದ ಪದಾಧಿಕಾರಿಗಳಿಗೆ ಏಳು ದಿನ ಪ್ರತ್ಯೇಕವಾಗಿ ನಡೆದ ಕಾರ್ಯಾಗಾರದಲ್ಲಿ ಪಕ್ಷ ಸಂಟನೆ, ಸದಸ್ಯತ್ವ, ಮುಂದಿನ ಪಂಚರತ್ನ ವಿಷಯಗಳನ್ನು ಜನರ ಬಳಿಗೆ ಕೊಂಡೊಯ್ಯುವ ಬಗೆಗೆ ಪದಾಧಿಕಾರಿಗಳನ್ನು ಅಣಿಗೊಳಿಸಲಾಯಿತು.

    ಅಭಿವೃದ್ಧಿಗೆ ಶ್ರಮಿಸುತ್ತೇನೆ : ಪಕ್ಷದ ಗೌರವ ಉಳಿಸಿದ ನಿಮಗೆ ಗೌರವ ಸಲ್ಲಿಸುವುದು ತಡವಾಗಿದೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ನಾನು ಚುನಾವಣಾ ಪ್ರಚಾರಕ್ಕೆ ಬರದಿದ್ದರೂ ಪಕ್ಷವನ್ನು ಸದೃಢವಾಗಿಸಿದ್ದೀರಿ, ಮುಂದಿನ ದಿನಗಳಲ್ಲಿ ನಿಮ್ಮಗಳ ಕೈಬಲಪಡಿಸುವ ಕೆಲಸ ವಾಡುತ್ತೇನೆ. ಇದು ಚನ್ನಪಟ್ಟಣ ನಗರಸಭೆ ನೂತನ ಸದಸ್ಯರಿಗೆ ವಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ ಅಭಯ.
    ಬಿಡದಿಯ ಕೇತಗಾನಹಳ್ಳಿಯಲ್ಲಿ ಮಂಗಳವಾರ ಪಕ್ಷದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರಸಭೆ ಚುನಾವಣೆಯಲ್ಲಿ ವಿಜೇತ ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ವಾತನಾಡಿ, ಚುನಾವಣೆಯಲ್ಲಿ ಪಕ್ಷದ ಅಸ್ತಿತ್ವ ಉಳಿಸಿದ್ದೀರಿ. ವಿವಿಧ ಕಾರಣಗಳಿಂದ ನಿಮ್ಮಗಳನ್ನು ಅಭಿನಂದಿಸುವುದು ತಡವಾಗಿದೆ. ಆದರೆ, ಪಕ್ಷದ ಮುಂದಿನ ಭವಿಷ್ಯ ರೂಪಿಸಲು ನಡೆಸುತ್ತಿರುವ ಈ ಕಾರ್ಯಾಗಾರದಲ್ಲಿ ಅದಕ್ಕೆ ಕಾಲಕೂಡಿ ಬಂದಿದೆ ಎಂದರು.

    ಚನ್ನಪಟ್ಟಣ ನಗರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ. ನಿಮ್ಮಗಳ ಸಹಕಾರದಿಂದ ಪಕ್ಷಕ್ಕೆ ಮತ ನೀಡಿದ ಮತದಾರರ ಋಣ ತೀರಿಸಲಾಗುವುದು. ನಿಮಗೆ ಉತ್ತಮ ಹೆಸರು ಬರುವಂತೆ ನಾನು ಕೂಡ ಕೆಲಸ ವಾಡಲಿದ್ದೇನೆ. ಪಕ್ಷ ಬಹುಮತ ಪಡೆದಿದ್ದು, ಮುಂದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಬಗ್ಗೆ ನಿಮ್ಮಗಳ ಜತೆ ಚರ್ಚೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಆಸೆ. ಆಮಿಷಗಳಿಗೆ ಬಲಿಯಾಗಬೇಡಿ ಎಂದು ಮನವಿ ವಾಡಿದರು.

    ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ನಗರಾಧ್ಯಕ್ಷ ರಾಂಪುರ ರಾಜಣ್ಣ, ಜೆಡಿಎಸ್ ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ಗೋವಿಂದನಹಳ್ಳಿ ನಾಗರಾಜು, ಕುಕ್ಕುರುದೊಡ್ಡಿ ಜಯರಾಂ, ಬೋರೆವೆಲ್ ರಾಮಚಂದ್ರು, ಎಸ್.ಲಿಂಗೇಶ್‌ಕುವಾರ್ ಹಾಗೂ ನಗರಸಭೆಯ 31 ವಾರ್ಡ್‌ಗಳ ವಿಜೇತ ಹಾಗೂ ಪರಾಜಿತ ಅಭ್ಯರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts