More

    ಮಗ, ಸೊಸೆಯೊಂದಿಗೆ ಕೊಡಗಿನ ರೆಸಾರ್ಟ್‌ನಲ್ಲಿ ಎಚ್‌ಡಿಕೆ ವಾಸ್ತವ್ಯ

    ಮಡಿಕೇರಿ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಕುಟುಂಬಸ್ಥರೊಂದಿಗೆ ಶುಕ್ರವಾರ ಕೊಡಗಿಗೆ ಆಗಮಿಸಿ ರೆಸಾರ್ಟೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

    ನಗರದ ಹೊರ ವಲಯದ ಪ್ರತಿಷ್ಠಿತ ತಾಜ್ ರೆಸಾರ್ಟ್‌ಗೆ ಮಧ್ಯಾಹ್ನ 6 ವಾಹನಗಳಲ್ಲಿ ಕುಟುಂಬಸ್ಥರೊಂದಿಗೆ ಆಗಮಿಸಿದ ಅವರು, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ, ಸಹೋದರಿಯರಾದ ಅನುಸೂಯ, ಶೈಲಜಾ ಹಾಗೂ ಸೊಸೆಯ ಕುಟುಂಬಸ್ಥರೊಂದಿಗೆ ರೆಸಾರ್ಟ್ ವಾಸ್ತವ್ಯಕ್ಕೆ ಆಗಮಿಸಿದ್ದಾರೆ. ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿರುವುದರಿಂದ ಜೆಡಿಎಸ್ ನಾಯಕರು ರೆಸಾರ್ಟ್‌ನತ್ತ ಸುಳಿಯಲಿಲ್ಲ. ರೆಸಾರ್ಟ್ ಬಳಿ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳಿಗೂ ಎಚ್‌ಡಿಕೆ ಸಿಗಲಿಲ್ಲ.

    ಕುಮಾರಸ್ವಾಮಿ ಕೊಡಗಿಗೆ ಕುಟುಂಬಸ್ಥರೊಂದಿಗೆ ಖಾಸಗಿ ಭೇಟಿ ನೀಡಿದ್ದಾರೆ. ಒಟ್ಟು 12 ಜನರಿದ್ದು, ಭಾನುವಾರ ರೆಸಾರ್ಟ್‌ನಿಂದ ನಿರ್ಗಮಿಸಲಿದ್ದಾರೆ ಎಂದು ಮಡಿಕೇರಿ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.

    ಇದನ್ನೂ ಓದಿ ಬಿಎಸ್​ವೈ ಹೆಸರಲ್ಲಿ ಚೌಡಿಗೆ ಕುರಿ-ಕೋಳಿ ಬಲಿ ಕೊಟ್ಟರೇ ಶಾಸಕ?

    ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ್ದರಿಂದ ತಾಜ್ ರೆಸಾರ್ಟ್ ಮುಚ್ಚಲ್ಪಟ್ಟಿತ್ತು. ರೆಸಾರ್ಟ್ ತೆರೆಯಲು ಅವಕಾಶ ಕಲ್ಪಿಸಿದ ಬಳಿಕ ಮೊದಲ ಅತಿಥಿಯಾಗಿ ಕುಮಾರಸ್ವಾಮಿ ಆಗಮಿಸಿದ್ದಾರೆಂಬ ಮಾಹಿತಿಯನ್ನು ರೆಸಾರ್ಟ್‌ನ ಪ್ರತಿನಿಧಿಗಳು ತಿಳಿಸಿದರು.

    ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಜಂಬೂರು, ಗೋಳಿಕಟ್ಟೆಯಲ್ಲಿ ಮನೆ ನಿರ್ಮಿಸಲು ಪ್ರಮುಖ ಕಾರಣಕರ್ತರಾದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಡಾವಣೆ ಉದ್ಘಾಟನೆಗೆ ಆಹ್ವಾನಿಸಲಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿತ್ತು. ಈ ಎರಡು ಸ್ಥಳಗಳಿಗೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಹೋಗಲು ಜೆಡಿಎಸ್ ಮುಖಂಡರು ಈಗ ಉತ್ಸುಕರಾಗಿದ್ದಾರೆ.

    ತಂದೆಯಿಲ್ಲದ ಹೆಣ್ಣು ಮಗುವಿನ ಸಂಪೂರ್ಣ ವಿದ್ಯಾಭ್ಯಾಸಕ್ಕೆ ನೆರವಾದ ಕಿಚ್ಚ ಸುದೀಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts