More

    ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರಿಗಿಂತ ಪತ್ನಿಯೇ ಸಿರಿವಂತೆ…!

    ಬೆಂಗಳೂರು: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರಿಗೆ ಮತ್ತೊಮ್ಮೆ ಸಂಸತ್ತು ಪ್ರವೇಶಿಸುವ ಅವಕಾಶ ಒದಗಿ ಬಂದಿದ್ದು, ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

    ನಾಮಪತ್ರ ವೇಳೆ ಆಸ್ತಿ ವಿವರವುಳ್ಳ ಅಫಿಡೆವಿಟ್​ ಸಹ ಸಲ್ಲಿಸಲಾಗಿದ್ದು, ಮಾಜಿ ಪ್ರಧಾನಿ ಎಚ್​ಡಿಡಿ ಅವರಿಗಿಂತ ಪತ್ನಿ ಚೆನ್ನಮ್ಮರೇ ಶ್ರೀಮಂತರು ಎಂದು ತಿಳಿದುಬಂದಿದೆ.

    ದೇವೇಗೌಡರ ಬಳಿ 2. 43 ಲಕ್ಷ ರೂ. ನಗದು ಹಣವಿದ್ದರೆ, ಪತ್ನಿ ಚೆನ್ನಮ್ಮರ ಬಳಿ 2. 61 ಲಕ್ಷ ರೂ. ನಗದು ಹಣವಿದೆ. ಗೌಡರ ಹೆಸರಲ್ಲಿ ವಿವಿಧ ಬ್ಯಾಂಕ್​​ಗಳಲ್ಲಿ 37.63 ಲಕ್ಷ ರೂ. ಹಾಗೂ ಚೆನ್ನಮ್ಮರ ಹೆಸರಿನಲ್ಲಿ 80.29 ಲಕ್ಷ ರೂ. ಠೇವಣಿ ಇಡಲಾಗಿದೆ. ಗೌಡರ ಹೆಸರಿನಲ್ಲಿರುವ ಬಾಂಡ್, ಮ್ಯೂಚುವಲ್ ಫಂಡ್ 1000 ರೂ. ಮಾತ್ರ. ಆದರೆ, ಪತ್ನಿಯ ಹೆಸರಿನಲ್ಲಿ 26.92 ಲಕ್ಷ ಬಾಂಡ್, ಮ್ಯೂಚುವಲ್ ಫಂಡ್ ಇದೆ. ಇದನ್ನೂ ಓದಿ: ಇನ್ಮುಂದೆ ಯಾವುದೇ ಎಲೆಕ್ಷನ್‌ಗೆ ನಿಲ್ಲಬಾರದೆಂದು ಮನಸ್ಸು ಗಟ್ಟಿ ಮಾಡ್ಕೊಂಡಿದ್ದೆ, ಆದರೆ…

    ದೇವೇಗೌಡರ ಉಳಿತಾಯ ಖಾತೆಯಲ್ಲಿ 6.50 ಲಕ್ಷ ರೂ ಹಣವಿದೆ. ದೇವೇಗೌಡರ ಹೆಸರಿನಲ್ಲಿ 15.72 ಲಕ್ಷ ರೂ. ಸಾಲವಿದ್ದರೆ, ಪತ್ನಿ ಹೆಸರಲ್ಲಿ 92.67 ಲಕ್ಷ ರೂ. ಸಾಲವಿದೆ. ಚೆನ್ನಮ್ಮ ಅವರು ದೇವೇಗೌಡರಿಗೆ 6. 27 ಲಕ್ಷ ರೂ. ಸಾಲ ನೀಡಿದ್ದಾರೆ.

    ಮಕ್ಕಳಿಗೆ, ಮೊಮ್ಮಕ್ಕಳಿಗೆ ಚೆನ್ನಮ್ಮ ಕೊಟ್ಟಿರುವ ಸಾಲದ ಮೊತ್ತವೆಷ್ಟು?
    ಪುತ್ರರಾದ ಎಚ್.ಡಿ ಬಾಲಕೃಷ್ಣ ಗೌಡಗೆ 7.55 ಲಕ್ಷ ರೂ., ಹೆಚ್.ಡಿ ಕುಮಾರಸ್ವಾಮಿಗೆ 1 ಲಕ್ಷ ರೂ., ಹೆಚ್.ಡಿ ರಮೇಶ್​​​ಗೆ 9.5 ಲಕ್ಷ ರೂ., ಹೆಚ್.ಡಿ ರೇವಣ್ಣಗೆ 15.5 ಲಕ್ಷ ಸಾಲ ನೀಡಿದ್ದರೆ, ಪುತ್ರಿಯರಾದ ಅನುಸೂಯಗೆ 19.2 ಲಕ್ಷ ರೂ., ಹಾಗೂ ಶೈಲಜಾಗೆ 10.59 ಲಕ್ಷ ರೂ. ಸಾಲ ನೀಡಿದ್ದಾರೆ. ಮೊಮ್ಮಗ ಪ್ರಜ್ವಲ್ ರೇವಣ್ಣಗೆ 23 ಲಕ್ಷ ರೂ. ಸಾಲ ಕೊಟ್ಟಿದ್ದಾರೆ.

    ದೇವೇಗೌಡರ ಬಳಿಯಿರುವ ವಾಹನಗಳ ಬೆಲೆ ಎಷ್ಟು?
    ದೇವೇಗೌಡರ ಬಳಿ 3 ಅಂಬಾಸಿಡರ್ ಕಾರು ಇದೆ. 2011, 2005 ಹಾಗೂ 1974ರ ಮಾಡೆಲ್​​ನ 3 ಅಂಬಾಸಿಡರ್ ಕಾರುಗಳಿದ್ದು, ಮೂರೂ ಕಾರುಗಳ ಮೌಲ್ಯ ಒಟ್ಟು 11.22 ಲಕ್ಷ ರೂ., ಪತ್ನಿ ಚೆನ್ನಮ್ಮ ಹೆಸರಿನಲ್ಲಿ ಎರಡು ಟ್ರಾಕ್ಟರ್ ಇದ್ದು, ಅವುಗಳ ಮೌಲ್ಯ 5 ಲಕ್ಷ ರೂಪಾಯಿಗಳು. ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರಕ್ಕೆ ಅಡ್ಡಿ ಮೇಲೆ ಅಡ್ಡಿ!

    ದೇವೇಗೌಡರ ಬಳಿ ಇರುವ ಚಿನ್ನಾಭರಣ ಮೌಲ್ಯವೆಷ್ಟು?
    ದೇವೇಗೌಡರ ಬಳಿ 50 ಸಾವಿರ ರೂ. ಮೌಲ್ಯದ ಚಿನ್ನಾಭರಣವಿದ್ದರೆ, ಪತ್ನಿ ಚೆನ್ನಮ್ಮ ಬಳಿ 6.5 ಲಕ್ಷ ರೂ. ಮೌಲ್ಯದ ಆಭರಣವಿದೆ. ಗೌಡರ ಮನೆಯ ಪೀಠೋಪಕರಣದ ಬೆಲೆ 39 ಸಾವಿರ ರೂ., ಗೌಡರ ಮನೆಯಲ್ಲಿ ಫ್ರಿಡ್ಜ್ ಇಲ್ಲ. ಅವರ ಮಾಸಿಕ ಪಿಂಚಣಿ 61 ಸಾವಿರ ರೂ.ಗಳು.

    ದೇವೇಗೌಡರ ಬಳಿಯಿರುವ ಸ್ಥಿರಾಸ್ತಿ ಹಾಗೂ ಚರಾಸ್ತಿ ಎಷ್ಟು?
    ಎಚ್.​ ಡಿ. ದೇವೇಗೌಡರ ಬಳಿ ಇರುವ ಚರಾಸ್ತಿ ಮೌಲ್ಯ 72.50 ಲಕ್ಷ ರೂ.ಗಳಾಗಿದ್ದರೆ, ಪತ್ನಿ ಚೆನ್ನಮ್ಮರ ಚರಾಸ್ತಿ ಮೌಲ್ಯ 2.14 ಕೋಟಿ ರೂಪಾಯಿಗಳು. ಗೌಡರ ಹೆಸರಿನಲ್ಲಿರುವ ಸ್ಥಿರಾಸ್ತಿ 41.28 ಲಕ್ಷ ರೂ., ಚೆನ್ನಮ್ಮರ ಸ್ಥಿರಾಸ್ತಿ 5.38 ಕೋಟಿ ರೂ., ಗೌಡರ ಒಟ್ಟು ಸ್ಥಿರಾಸ್ತಿ ಮೌಲ್ಯ 5.79 ಕೋಟಿ ರೂ.ಗಳಾಗಿದ್ದು, ಬೆಂಗಳೂರಿನಲ್ಲಿ ಅವರ ಹೆಸರಿನಲ್ಲಿ ಮನೆಯೇ ಇಲ್ಲವೆಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

    ಮೈಸೂರು ರಾಜವಂಶಸ್ಥರನ್ನು ಭೇಟಿ ಮಾಡಿದ ಮುರುಗೇಶ ನಿರಾಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts