More

    ಜಿಪಂ ಕಚೇರಿಯ ಶುದ್ಧ ನೀರಿನ ಘಟಕದಲ್ಲಿ ನೀರು ಪೋಲು

    ಹಾವೇರಿ: ಇಲ್ಲಿನ ದೇವಗಿರಿಯ ಜಿಲ್ಲಾಡಳಿತ ಕಚೇರಿ ಆವರಣದ ಜಿಲ್ಲಾ ಪಂಚಾಯಿತಿ ಕಚೇರಿಯ ಎದುರಿಗೆ ಇರುವ ಶುದ್ಧ ಕುಡಿಯುವ ನೀರಿನ ಘಟಕದ ನಲ್ಲಿಯ ಟ್ಯಾಪ್ ಸೋರಿಕೆಯಿಂದ ನಿತ್ಯ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
    ‘ನಲ್ಲಿಯನ್ನು ನಿಲ್ಲಿಸಿ ಪ್ರತಿ ಹನಿ ನೀರು ಉಳಿಸಿ. ಸುಮ್ಮನೆ ಸುರಿಯುವ ನಲ್ಲಿಯಿಂದ ಪ್ರತಿ ನಿಮಿಷಕ್ಕೆ ಆರು ಲೀಟರ್ ನೀರು ವ್ಯರ್ಥವಾಗುತ್ತದೆ’ ಎಂದು ಶುದ್ಧ ಕುಡಿಯುವ ನೀರಿನ ಘಟಕದ ನಲ್ಲಿಯ ಪಕ್ಕದಲ್ಲೇ ಬರೆಯಲಾಗಿದೆ. ಈ ಬರಹದ ಕೆಳಗೇ ನಲ್ಲಿಯಲ್ಲಿನ ನೀರು ಪೋಲಾಗುತ್ತಿದೆ. ಘಟಕದ ಒಳಗಡೆ ಯಂತ್ರಗಳ ಕೆಳಗೂ ನೀರು ಪೋಲಾಗಿ ಹರಿಯುತ್ತಿದೆ. ಸೂಕ್ತ ನಿರ್ವಹಣೆ ಇಲ್ಲದೇ ನಿತ್ಯ ನೂರಾರು ಲೀಟರ್ ನೀರು ಚರಂಡಿ ಪಾಲಾಗುತ್ತಿದೆ.
    ಬರಗಾಲದ ಹಿನ್ನೆಲೆಯಲ್ಲಿ ನದಿ, ಕೆರೆ, ಕಟ್ಟೆಗಳಲ್ಲಿ ನೀರು ಖಾಲಿಯಾಗಿದೆ. ಸಾವಿರಾರು ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ನೀರಿನ ಮಿತಬಳಕೆಯ ಪಾಠ ಮಾಡಬೇಕಿರುವ ಜಿಪಂ ಕಚೇರಿ ಆವರಣದಲ್ಲೇ ನೀರು ಪೋಲಾಗುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಕೂಡಲೇ ಸಂಬಂಧಪಟ್ಟವರು ನಲ್ಲಿಯ ಟ್ಯಾಪ್ ಬದಲಾಯಿಸಬೇಕು. ನೀರು ಪೋಲಾಗುವುದನ್ನು ಶಾಶ್ವತವಾಗಿ ಸರಿಪಡಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts