ಹಾವೇರಿ: ಕ್ರೀಡೆಯಿಂದ ಮನಸು, ದೇಹ ಎರಡೂ ಪ್ರಪುಲ್ಲಗೊಳ್ಳುತ್ತವೆ. ಪೀಡೆ ಎಂಬ ನಿರಾಸಕ್ತಿ ಮನಷ್ಯನಲ್ಲಿ ಆವರಿಸಿದಾಗ ದೇಹವು ಚೈತನ್ಯಗೊಳ್ಳಬೇಕಾದರೆ ಕ್ರೀಡೆ ಅತ್ಯವಶ್ಯಕ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗೃಹ ರಕ್ಷಕ ದಳದ ಜಿಲ್ಲಾ ಮಟ್ಟದ ಕ್ರೀಡಾಕೂಟ ಸಮಾರಂಭದ ಸಾನ್ನಿಧ್ಯ ವಹಿಸಿಕೊಂಡು ಅವರು ಮಾತನಾಡಿದರು. ಜಿಲ್ಲೆಯ ರಕ್ಷಣೆಯ ಹೊಣೆ ಹೊತ್ತಿರುವ ಆರಕ್ಷಕರ ಜತೆಗೆ ಗೃಹರಕ್ಷಕರೂ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒತ್ತಡ ಮರೆತು ಹಗುರಾಗಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೊಲೀಸ್ ಇಲಾಖೆಯ ಸಹೋದರ ಇಲಾಖೆಯಾದ ಗೃಹರಕ್ಷಕ ದಳ ಜಿಲ್ಲೆಯಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ತಾವುಗಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಿ ಎಂದು ಕಿವಿಮಾತು ಹೇಳಿದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಪ್ರಮೋದ ನಲವಾಗಲ ಮಾತನಾಡಿ, ಹಾವೇರಿ ಜಿಲ್ಲೆಯು ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟ ನಂತರ 2000ನೇ ಇಸವಿಯಿಂದ ಜಿಲ್ಲೆಯ ಗೃಹರಕ್ಷಕ ದಳದ ಸಮಾದೇಷ್ಟರನ್ನು ಆಯ್ಕೆ ಮಾಡುವ ಪದ್ಧತಿ ಜಾರಿಗೆ ಬಂದಿತು. ಅಂದಿನಿಂದ ಗೃಹರಕ್ಷಕ ದಳದ ಸದಸ್ಯರ ಕಾರ್ಯ ಒತ್ತಡ ನಿವಾರಿಸಲು ಇಲಾಖೆಯು ಕ್ರೀಡೆಯನ್ನು ಹಮ್ಮಿಕೊಳ್ಳುತ್ತ ಬಂದಿದೆ. ಎಲ್ಲರೂ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಪಿ.ಪೂಜಾರ, ಚನ್ನವೀರ ಬೆಲ್ಲದ, ಪಿ.ಎಚ್.ಹಂಚಾಟೆ, ಎ.ಜೆ.ಪಠಾಣ, ಇಮ್ತಿಯಾಜ ಕಮದೋಡ, ವಿನಾಯಕ ಬೆಲ್ಲದ, ಗಿರೀಶ ಯತ್ತಿನಹಳ್ಳಿ, ಮತ್ತಿತರರು ಉಪಸ್ಥಿತರಿದ್ದರು.
ಪೀಡೆ ತೊಲಗಿಸಲು ಕ್ರೀಡೆ ಅವಶ್ಯಕ; ಗೃಹ ರಕ್ಷಕ ದಳದ ಜಿಲ್ಲಾ ಮಟ್ಟದ ಕ್ರೀಡಾಕೂಡದಲ್ಲಿ ಬಸವಶಾಂತಲಿಂಗ ಸ್ವಾಮೀಜಿ ಹೇಳಿಕೆ

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt
salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…
ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts
gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…
ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream
ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…