More

    ಎಸ್‌ಬಿಐ ವಿರುದ್ಧ ಕಾಂಗ್ರೆಸ್ ಆಕ್ರೋಶ

    ಹಾವೇರಿ: ಭಾರತದ ಸರ್ವೋಚ್ಛ ನ್ಯಾಯಲಯವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಚುನಾವಣಾ ಬಾಂಡ್ ದಾನಿಗಳ ವಿವರಗಳನ್ನು ಬಹಿರಂಗ ಪಡಿಸುವಂತೆ ಆದೇಶ ನೀಡಿದರೂ ಬಹಿರಂಗಗೊಳಿಸದ ಬ್ಯಾಂಕ್ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು. ನಗರದ ಮೈಲಾರ ಮಹದೇವಪ್ಪ ವೃತ್ತದಿಂದ ಮಾಗಾವಿ ಪೆಟ್ರೋಲ್ ಬಂಕ್ ಬಳಿ ಇರುವ ಎಸ್‌ಬಿಐ ಬ್ಯಾಂಕ್‌ವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಕರ್ಜಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಮೈದೂರ ಮಾತನಾಡಿ, ಚುನಾವಣಾ ಬಾಂಡ್ ಮಾಹಿತಿ ಬಹಿರಂಗಪಡಿಸದ ಎಸ್‌ಬಿಐ ನಡೆ ಸಂವಿಧಾನದ ವಿರುದ್ಧವಾಗಿದೆ. ಸುಪ್ರೀಂಕೋರ್ಟ್ ಆದೇಶಕ್ಕೆ ತೋರಿರುವ ಅಗೌರವವಾಗಿದೆ ಎಂದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ ಮಾತನಾಡಿ, ಈ ವಿವರ ಬಹಿರಂಗವಾದರೆ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಬಣ್ಣ ಬಟಾ ಬಯಲಾಗಲಿದೆ. ಆದ್ದರಿಂದ ವಿವರವನ್ನು ಬಹಿರಂಗ ಪಡಿಸದಂತೆ ಒತ್ತಡ ಹೇರುತ್ತಿದ್ದಾರೆ. ಮೋದಿ ಕೈಗೊಂಬೆ ಆಗಿರುವ ಎಸ್‌ಬಿಐ ತನ್ನ ಕೆಲಸವನ್ನು ಕಾನೂನಿನ ಅಡಿಯಲ್ಲಿ ಮಾಡಬೇಕು. ಚುನಾವಣಾ ಬಾಂಡ್ ವಿವರವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
    ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ರೇಣುಕಾ ಪುತ್ರನ್, ಶಿಲ್ಪಾ ಬಡೆಮ್ಮನವರ, ವಿಶಾಲಾಕ್ಷಿ ಆನವಟ್ಟಿ, ನಂದಿನಿ ಎಸ್., ಕರಬಸಪ್ಪ ಹಲಗಣ್ಣನವರ, ಉಮರ ಇನಾಮದಾರ, ಬಾಬುಸಾಬ ಮೊಮಿನಗಾರ, ಮಹಾಲಿಂಗಯ್ಯ ಹಿರೇಮಠ, ಮಂಜುನಾಥ ಬಂಗೇರ, ಇಮಾಮ ಹಿರೇಮುಗದುರ, ತೌಸೀಫ್ ದೊಡ್ಡಮನಿ, ರಾಜು ಚನ್ನೂರ, ಗುಡ್ಡಪ್ಪ ಬಣಕಾರ, ವೆಂಕಟೇಶ ಬಿಜಾಪುರ, ಪವನ ದೊಡ್ಡಮನಿ, ಗಿರೀಶ ಗಾಜಿಗೌಡ್ರ, ಮಲ್ಲಿಕಾರ್ಜುನ ಬುದಗಟ್ಟಿ, ತೌಸೀಫ್ ದೊಡ್ಡಮನಿ, ಪ್ರಶಾಂತ ಮರಿಯಮ್ಮನವರ, ಗಂಗಾಧರ ಇಂಗಳಗೊಂದಿ, ಶಂಕರ ಮೆಹರವಾಡೆ, ಗುಡ್ಡನಗೌಡ್ರ ಅಂದಾನಿಗೌಡ್ರ, ರಾಜನಗೌಡ ಪಾಟೀಲ, ಆನಂದ ಬೆಟಗೇರಿ, ಶರಣು ಹಿರೇಮಠ, ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts