More

    ವ್ಯಾದಿ ಬೂದಿಯಾದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್: ನಿಜವಾಯ್ತು ಕಾರ್ಣಿಕ ಭವಿಷ್ಯ..!

    ಹಾವೇರಿ: ಈ ದೇವರು ನುಡಿಯುವ ಭವಿಷ್ಯದ ನುಡಿ ಎಂದೂ ಸುಳ್ಳಾಗಲ್ಲ ಎಂಬ ನಂಬಿಕೆ ಜನರದ್ದು. ಕಳೆದ ವರ್ಷ ನಡೆದ ಘಟಸರ್ಪ ಕಂಗಾಲಾದಿತಲೆ ಪರಾಕ್ ಎಂಬ ವಾಣಿಯೆ ಅದಕ್ಕೆ ಸಾಕ್ಷಿ. ಕರ್ನಾಟಕದಾದ್ಯಂತ ಕಿಲ್ಲರ್ ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದು, ಈ ಮೂಲಕ ಮಾಲತೇಶ ಸ್ವಾಮೀಜಿ ಹೇಳಿದ ವ್ಯಾದಿ ಬೂದಿಯಾತಲೆ ಎಂಬುವುದು ನಿಜ ನುಡಿಯಾಗಿದೆ.

    ಮೊನ್ನೆ ರಾಜ್ಯದ ಜನರು ನಿಟ್ಟುಸಿರು ಬಿಡುವ ಭವಿಷ್ಯವಾಣಿ ಅಥವಾ ಕಾರ್ಣಿಕ ನುಡಿಯನ್ನು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಪ್ರಸಿದ್ಧ ದೇವರಗುಡ್ಡ ಕ್ಷೇತ್ರದ ಮಾಲತೇಶ ಸ್ವಾಮೀಜಿ ನುಡಿದರು. “ವ್ಯಾದಿ ಬೂದಿಯಾದಿತಲೆ ಸೃಷ್ಟಿ ಸಿರಿ ಆಯಿತಲೆ ಪರಾಕ್” ಎಂಬುದು ಕಾರ್ಣಿಕದ ನುಡಿಯಾಗಿತ್ತು. ಇದೇ ಕಾರ್ಣಿಕ ಇದೀಗ ನಿಜವಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರು ಸಂಭ್ರಮಿಸುತ್ತಿದ್ದಾರೆ.

    ದೇವರವಾಣಿ ಇಷ್ಟು ಬೇಗ ಕಾರ್ಣಿಕ ನುಡಿ ಫಲಿಸುತ್ತದೆ ಎಂದು ನಂಬಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ನಡೆದ ಕಾರ್ಣಿಕವೇ ನಮಗೆ ಸಾಕ್ಷಿ. ಈಗ ಮತ್ತೊಮ್ಮೆ ನಿಜವಾಗಿದೆ. ಬಹಳ ದಿನಗಳಿಂದ ಕರೊನಾ ರೋಗ ಕಡಿಮೆ ಆಗುತ್ತಿದೆ. ಮುಂದೆಯೂ ಇನ್ನೂ ಕಡಿಮೆ ಆಗುತ್ತೆ ಎಂದು ದಿಗ್ವಿಜಯ ನ್ಯೂಸ್​ಗೆ ದೇವರಗುಡ್ಡ ಕ್ಷೇತ್ರದ ಅರ್ಚಕರು ಹೇಳಿದ್ದಾರೆ.

    ಇದನ್ನೂ ಓದಿ: ಪೊಲೀಸರನ್ನು ಕಂಡೊಡನೇ ಹೋಟೆಲ್ ಒಳಗೆ ಓಡಿ ಬಾತ್​ರೂಂ ಸೇರಿಕೊಂಡ ಮಹಿಳೆ..!

    ಭಕ್ತರು ಮತ್ತು ಜನಗಳು ಮಾತಾಡುತ್ತಿರುವುದು ನಿಜವಾ ಎಂದು ಆರೋಗ್ಯ ಇಲಾಖೆಯನ್ನು ವಿಚಾರಿದಾಗ ಖುಷಿ ಮತ್ತು ಅಚ್ಚರಿ ವಿಷಯ ತಿಳಿಯಿತು. ಕಳೆದ ತಿಂಗಳು 25ನೇ ತಾರೀಖಿನಿಂದ ನಿನ್ನೆಯ ತನಕ ಕೇವಲ 189 ಪಾಸಿಟಿವ್ ಕೇಸ್, 423 ಡಿಸ್ಚಾರ್ಜ್ ಪ್ರಕರಣಗಳು ಪತ್ತೆಯಾಗಿವೆ. ಇದನ್ನು ನೋಡಿದರೆ ಸ್ವಲ್ಪ ಮಟ್ಟಿಗೆ ಕೊರೊನಾ ರಾಜ್ಯದಲ್ಲಿ ಕಡಿಮೆ ಆಗುತ್ತಿದೆ ಎಂದು ಆರೋಗ್ಯಾಧಿಕಾರಿ ಹೇಳಿದರು.

    ಹಾವೇರಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಗದಗ, ಹುಬ್ಬಳ್ಳಿ, ಚಿತ್ರದುರ್ಗ, ಧಾರವಾಡ, ಬೆಳಗಾವ, ಕೊಪ್ಪಳ ಮತ್ತು ಇತರೆ ಜಿಲ್ಲೆಯಲ್ಲೂ ಕೊರೊನಾ ಆರ್ಭಟ ಕಡಿಮೆಯಾಗಿದೆ. ಒಟ್ಟಿನಲ್ಲಿ ಗೊರವಯ್ಯ ನುಡಿಯುವ ಭವಿಷ್ಯವಾಣಿಯಿಂದಾದರೂ ಕಿಲ್ಲರ್ ಕೊರಾನಾ ದೂರವಾಗಲಿ, ಇದರಿಂದ ಸೃಷ್ಟಿ ಏನೇಲ್ಲಾ ಕಳಕೊಂಡಿತ್ತೊ ಅದನ್ನು ವಾಪಸ್ಸು ಪಡೆದುಕೊಳ್ಳಲಿ ಎಂಬುದು ಎಲ್ಲರ ಆಶಯವಾಗಿದೆ. (ದಿಗ್ವಿಜಯ ನ್ಯೂಸ್​)

    ವ್ಯಾಧಿ ಬೂದಿ ಆದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts