More

    ಗ್ರಾಮಗಳ ನೈರ್ಮಲ್ಯ ಆರೋಗ್ಯಕ್ಕೆ ಆದ್ಯತೆ ನೀಡಿ; ಸ್ವಚ್ಛತಾ ವಾಹಿನಿ ಮಹಿಳಾ ಚಾಲಕರಿಗೆ ತರಬೇತಿ ಶಿಬಿರದಲ್ಲಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ

    ಹಾವೇರಿ: ಮಹಿಳೆಯರು ಸ್ವಚ್ಛತಾ ವಾಹನಗಳ ಚಾಲನೆ ಕೆಲಸವನ್ನು ಆಯ್ಕೆ ಮಾಡಿಕೊಂಡಿರುವುದು ಅಭಿನಂದನೀಯ. ನೀವೆಲ್ಲ ಗ್ರಾಮಗಳ ನೈರ್ಮಲ್ಯ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸಲಹೆ ನೀಡಿದರು.
    ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ, ಸಾರಿಗೆ ಇಲಾಖೆ ಸಹಯೋಗದಲ್ಲಿ ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಗ್ರಾಮೀಣ ಪ್ರದೇಶದ 80 ಮಹಿಳೆಯರಿಗೆ ಆಯೋಜಿಸಿದ್ದ ವಾಹನ ಚಾಲನೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡುವ ಸ್ವಚ್ಛ ವಾಹಿನಿ ವಾಹನ ಚಲಾಯಿಸಲು ಸಂಜೀವಿನಿ ಮಹಿಳಾ ಸ್ವ-ಸಹಾಯ ಗುಂಪುಗಳ ಆಸಕ್ತ ಗ್ರಾಮೀಣ ಪ್ರದೇಶದ 80 ಮಹಿಳೆಯರಿಗೆ ವಾಹನ ಚಾಲನೆ ತರಬೇತಿ ನೀಡಲಾಗುತ್ತಿದೆ. ಸರಿಯಾಗಿ ಚಾಲನೆ ತರಬೇತಿ ಪಡೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಮಹಿಳಾ ವಾಹನ ಚಾಲಕರ ತರಬೇತಿ ಪ್ರಾರಂಭಿಸುತ್ತಿರುವ ಮೊದಲ ಜಿಲ್ಲೆ ಇದಾಗಿದೆ. ಮಹಿಳೆಯರು ಈ ಚಾಲನಾ ತರಬೇತಿಯ ಸದುಪಯೋಗ ಪಡೆಸಿಕೊಂಡು ಗ್ರಾಮ ಪಂಚಾಯಿತಿಗಳಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
    ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎಸ್.ಜಿ.ಕೊರವರ, ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿ ಶಶಿಧರ ಮರಿದೇವರಮಠ, ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ ಪಾಟೀಲ, ಪ್ರಾಂಶುಪಾಲೆ ಸುಮನಾ, ತರಬೇತಿ ನಿರ್ದೇಶಕ ಪಲ್ಲೇದ, ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಪ್ರಭುಸ್ವಾಮಿ ಹಿರೇಮಠ, ಡಿ.ಎಂ.ಗಳಾದ ರಮೇಶ ದಾಸರ, ವಿರೇಶ ರುದ್ರಾಕ್ಷಿ, ಸುಮಂಗಲಾ, ಸೃಷ್ಠಿ ಹಿರೇಮಠ, ದೀಪಕ ನಾಯಕ, ತಾಲೂಕು ಕಾರ್ಯಕ್ರಮ ಅಧಿಕಾರಿಗಳಾದ ಇಂದ್ರಾ ಕನವಳ್ಳಿ, ಅನಿಲ ಮೇಲ್ಮುರಿ, ಪರಶನಗೌಡ ಪಾಟೀಲ, ಗುಡ್ಡಪ್ಪ ತುಮ್ಮಣ್ಣನವರ, ಬಸವಣಯ್ಯ ಪೂಜಾರ, ಮತ್ತಿತರರು ಉಪಸ್ಥಿತರಿದ್ದರು.
    ಜಿಲ್ಲಾ ಕಾರ್ಯಕ್ರಮ ಅಧಿಕಾರಿ ನಾಗರಾಜ ಬಾರ್ಕಿ ನಿರೂಪಿಸಿದರು. ಎಸ್.ಎಂ.ಎಂ.ಅಧಿಕಾರಿ ಗೋವಿಂದರಾಜ ವಂದಿಸಿದರು.
    ಶಿಶುಪಾಲನೆಗೆ ಮನವಿ
    ತರಬೇತಿ ಅವಧಿ ಮುಗಿಯುವವರೆಗೆ ತಮ್ಮ ಪುಟ್ಟ ಮಕ್ಕಳಿಗೆ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿರುವ ಶಿಶು ಪಾಲನಾ ಕೇಂದ್ರದಲ್ಲಿ ಪಾಲನೆ, ಪೋಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಮನವಿ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts