More

    ಕೋಟಿ ವೆಚ್ಚದಲ್ಲಿ ಕಿತ್ತೂರ ರಾಣಿ ಚನ್ನಮ್ಮ ಪುತ್ಥಳಿ ನಿರ್ಮಾಣ; ಜಯಂತ್ಯುತ್ಸವದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಭರವಸೆ

    ಹಾವೇರಿ: ನಗರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತವನ್ನು ಸುಂದರವಾಗಿ ನಿರ್ಮಾಣ ಮಾಡಲಾಗುವುದು. ಈ ಉದ್ದೇಶಕ್ಕಾಗಿ ಸರ್ಕಾರಕ್ಕೆ ಒಂದು ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅನುದಾನ ಮಂಜೂರಾಗಲಿದೆ. ಬರುವ ದಿನಗಳಲ್ಲಿ ಪುತ್ಥಳಿ ನಿರ್ಮಾಣ ಸೇರಿದಂತೆ ವೃತ್ತದ ಅಭಿವೃದ್ಧಿಪಡಿಸಿ ಶೀಘ್ರ ಉದ್ಘಾಟನೆ ಮಾಡಲಾಗುವುದು ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಭರವಸೆ ನೀಡಿದರು.
    ನಗರದ ಜಿಲ್ಲಾ ಗುರುಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ರಾಣಿ ಚನ್ನಮ್ಮನವರ ಇತಿಹಾಸ ರೋಮಾಂಚಕಾರಿಯಾಗಿದೆ. ಇಂತಹ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ ನಮ್ಮ ನೆಲದಲ್ಲಿ ಜನಿಸಿದ್ದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ಅವರ ಹೋರಾಟ ಇಂದಿನ ಮಕ್ಕಳಿಗೆ ಮಾದರಿಯಾಗಬೇಕು. ಅವರ ಜಯಂತಿ ರಾಷ್ಟ್ರಮಟ್ಟದಲ್ಲಿ ಆಚರಣೆಯಾಗಬೇಕು ಎಂದರು.
    ಬೈಲಹೊಂಗಲ ತಾಲೂಕು ನೇಸರಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ಎಫ್.ಡಿ. ಗಡ್ಡಿಗೌಡರ ಕಿತ್ತೂರು ರಾಣಿ ಚನ್ನಮ್ಮ ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ, ಎಂ.ಬಿ.ಬಿ.ಎಸ್ ಹಾಗೂ ಎಂ.ಎಸ್.ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
    ಕಾರ್ಯಕ್ರಮದಲ್ಲಿ ಹಾವೇರಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯರಾದ ಪಿ.ಡಿ.ಶಿರೂರ, ಉಪ ವಿಭಾಗಾಧಿಕಾರಿ ಚನ್ನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ವೀರಶೈವ ಸಮಾಜದ ಮುಖಂಡರಾದ ಶಂಕರ್‌ಗೌಡ ಪಾಟೀಲ, ಸಂತೋಷ, ತಿರುಕಪ್ಪ ಕರಬಸಣ್ಣ, ಗೀತಾ ಕಡಕೋಳ, ಮಲ್ಲಿಕಾರ್ಜುನ ಹಾವೇರಿ, ಪರಮೇಶಪ್ಪ ಹಲಗೇರಿ, ಮಲ್ಲಣ್ಣ ಸಾತೇನಹಳ್ಳಿ, ಚನ್ನಮ್ಮ ಬ್ಯಾಡಗಿ, ಸಿ.ಮಂಜುನಾಥ, ನಾಗರತ್ನ ಗುಡಿಹಳ್ಳಿ, ಪರಮೇಶಪ್ಪ ಹಲಗೇರಿ, ಬಸವರಾಜ ಇಂಗಳಗಿ, ನಿಂಗಣ್ಣ ಪೂಜಾರ, ನಾಗೇಂದ್ರ ಕಟಕೋಳ ಹಾಗೂ ಸಮಾಜದ ಮುಖಂಡರು, ಮತ್ತಿತರು ಉಪಸ್ಥಿತರಿದ್ದರು.
    ಮಲ್ಲಿಕಾರ್ಜುನ ಅಗಡಿ ಸ್ವಾಗತಿಸಿದರು. ಡಾ.ವಿರೇಶ ಹಿತ್ತಲಮನಿ ನಿರೂಪಿಸಿದರು. ಕೊಟ್ರೇಶಪ್ಪ ಬಿಜಾಪುರ ವಂದಿಸಿದರು.

    ಇಡಿ ಜಗತ್ತನ್ನೇ ಮಣಿಸಿದ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ವನಿತೆ ಕಿತ್ತೂರ ರಾಣಿ ಚೆನ್ನಮ್ಮನ ಇತಿಹಾಸ ಅತ್ಯಂತ ರೋಚಕವಾಗಿದೆ. ಇಂತಹ ರಾಣಿ ಚನ್ನಮ್ಮ, ಹೈದರಾಲಿ ಜತೆ ಹೋರಾಡಿದ ಒನಕೆ ಓಬವ್ವ, ಪೋರ್ಚುಗೀಸರ ಜತೆ ಕಾದಾಡಿದ ಅಬ್ಬಕ್ಕ, ಬೆಳವಡಿ ಮಲ್ಲಮ್ಮರ ಬದುಕು-ಹೋರಾಟ, ತ್ಯಾಗವನ್ನು ಇಂದಿನ ಯುವ ಪೀಳಿಗೆ ಅಧ್ಯಯನ ಮಾಡಬೇಕು.
    ಶ್ರೀ ವಚನಾನಂದ ಸ್ವಾಮೀಜಿ, ಹರಿಹರ ಶ್ರೀ ಪಂಚಮಸಾಲಿ ಪೀಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts