More

    30 ನಿಮಿಷ ಮುಂಚೆಯೇ ಸಿಡಿಲಿನ ಮಾಹಿತಿ ಲಭ್ಯ; ಸಿಡಿಲು-ಮಿಂಚಿನಿಂದ ತಪ್ಪಿಸಿಕೊಳ್ಳಲು ವರುಣ ಮಿತ್ರ ಸಹಾಯವಾಣಿ

    ಹಾವೇರಿ: ಮಳೆ-ಗಾಳಿ ಹಾಗೂ ಸಿಡಿಲು-ಮಿಂಚಿನಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಕೆ.ಎಸ್.ಎನ್.ಡಿ.ಎಂ.ಸಿ. ವರುಣ ಮಿತ್ರ ಸಹಾಯವಾಣಿ 92433 45433ಯನ್ನು ಸಂಪರ್ಕಿಸಿ ಹವಾಮಾನ ಮಾಹಿತಿ ಪಡೆದುಕೊಳ್ಳಬಹುದು.
    ಗುಡುಗು ಸಿಡಿಲಿನ ಮುನ್ನೆಚ್ಚರಿಕೆಗಳನ್ನು ಕೆ.ಎಸ್.ಎನ್.ಡಿ.ಎಂ.ಸಿ ಅಭಿವೃದ್ಧಿಪಡಿಸಿರುವ ‘ಸಿಡಿಲು ಆ್ಯಪ್’ನಲ್ಲಿ ಪಡೆಯಬಹುದು. ಅಥವಾ ಎನ್‌ಡಿಎಂಎ ಅಭಿವೃದ್ಧಿಪಡಿಸಿರುವ ‘ದಾಮಿನಿ ಆ್ಯಪ್’ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಸಿಡಿಲು ಯಾವ ಪ್ರದೇಶದಲ್ಲಿ ಬರುವ ಸಾಧ್ಯತೆ ಇರುತ್ತದೆ ಎಂಬುದರ ಕುರಿತು 30 ನಿಮಿಷಗಳ ಮೊದಲೇ ಮುನ್ಸೂಚನೆ ಹಾಗೂ ಸಿಡಿಲಿನ ಅಪಾಯಗಳನ್ನು ತಗ್ಗಿಸಲು ಕೈಗೊಳ್ಳಬೇಕಾದ ಸಲಹೆ, ಸೂಚನೆಗಳನ್ನು ನೀಡುತ್ತದೆ.
    ಹವಾಮಾನ ವಿಷಯದಲ್ಲಿ ಮಾಹಿತಿ ಮತ್ತು ಅಲರ್ಟ್ ಆ್ಯಪ್ ಪಡೆಯಲು ಎನ್‌ಡಿಎಂಎ ಅಭಿವೃದ್ಧಿಪಡಿಸಿರುವ ಸಾಚೆಟ್ ಆ್ಯಪ್‌ನಲ್ಲೂ ಪಡೆಯಬಹುದು. ಈ ಆ್ಯಪ್‌ಗಳಿಂದ ಜಿಲ್ಲೆಯಲ್ಲಿ ಜೀವಹಾನಿ, ಜಾನುವಾರುಗಳ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts