More

    ಮನಸೂರೆಗೊಂಡ ಜಗಜ್ಯೋತಿ ಬಸವೇಶ್ವರ ನಾಟಕ; ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಚಾಲನೆ

    ಹಾವೇರಿ: ಅನುಭವ ಮಂಟಪದ ಮೂಲಕ ಸಂಸತ್ತಿನ ಕಲ್ಪನೆಯ ಕೊಡುಗೆ ನೀಡಿದ ವಿಶ್ವಗುರು ಬಸವಣ್ಣನವರ ದೂರದೃಷ್ಟಿಯ ಪರಿಣಾಮ ನಮ್ಮಂಥ ಶೋಷಿತ ಸಮುದಾಯದವರು ಉನ್ನತ ಹುದ್ದೆಗೇರಲು ಸಾಧ್ಯವಾಗಿದೆ ಎಂದು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
    ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
    ದೇವಾಲಯಕ್ಕಿಂತ ದೇಹಾಲಯ ಚಿಂತನೆಯ ಮೂಲಕ ಸರ್ವ ಸಮುದಾಯಗಳ ಶಿವಶರಣರನ್ನು ಒಂದುಗೂಡಿಸಿದ ಬಸವಣ್ಣ ನಮಗೆಲ್ಲ ಪ್ರೇರಣೆ. ಶಿವಶರಣರ ವಚನ ಸಾಹಿತ್ಯ ಕನ್ನಡ ಭಾಷೆಗೆ ಮೆರುಗು ನೀಡಿದೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ನಿಮಿತ್ತ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ ಇಡೀ ನಾಡಿನಾದ್ಯಂತ ಪ್ರದರ್ಶನಗೊಂಡರೆ ವಚನ ಸಾಹಿತ್ಯ ಮತ್ತು ಶರಣರ ಅನನ್ಯ ಕೊಡುಗೆಯನ್ನು ಮತ್ತೆ ಸ್ಮರಿಸಿದಂತಾಗುತ್ತದೆ. ಜೊತೆಗೆ ನಾಟಕ ಕಲೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
    ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಡಿ. ಶಿರೂರ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts