More

    2,872 ಕ್ವಿಂಟಾಲ್ ಬೀಜ, 6,453 ಟನ್ ರಸಗೊಬ್ಬರ ವಿತರಣೆ; ಕೃಷಿ ಇಲಾಖೆ ಜೆಡಿ ಮಂಜುನಾಥ ಅಂತರವಳ್ಳಿ ಸ್ಪಷ್ಟನೆ

    ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ರೈತರಿಗೆ ವಿವಿಧ ಬೆಳೆಗಳಿಗೆ ಅಗತ್ಯವಿರುವ ಒಟ್ಟು ಬಿತ್ತನೆ ಬೀಜಗಳಲ್ಲಿ ಈವರೆಗೆ 8,586 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜಾಗಿದೆ. ಈವರೆಗೆ 2,872 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿದ್ದು, 5,714 ಕ್ವಿಂಟಾಲ್ ಬೀಜ ದಾಸ್ತಾನಿದ್ದು, ಬೀಜ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಗೆ ಅವಶ್ಯವಿರುವ ಬೀಜ ಹಾಗೂ ರಸಗೊಬ್ಬರವನ್ನು ಹಂತ ಹಂತವಾಗಿ ಸರಬರಾಜು ಮಾಡಲಾಗುತ್ತಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಚುರುಕಿನಿಂದ ಸಾಗಿವೆ. ಸಹಾಯಧನದಲ್ಲಿ ಬಿತ್ತನೆ ಬೀಜ ಸರಬರಾಜು ಕಾರ್ಯ ಪ್ರಗತಿಯಲ್ಲಿದೆ. ರೈತರಿಗೆ ಅವಶ್ಯಕವಿರುವ ರಸಗೊಬ್ಬರವನ್ನು ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಲಾವಗುತ್ತಿದೆ. 2024ರ ಮುಂಗಾರು ಹಂಗಾಮಿಗೆ ಮೇ ಅಂತ್ಯಕ್ಕೆ ಒಟ್ಟು 37,915 ಟನ್ ರಸಗೊಬ್ಬರ ಅಗತ್ಯವಿದ್ದು, ಅದರಲ್ಲಿ ಡಿಎಪಿ 12,000 ಟನ್‌ನಲ್ಲಿ ಈಗಾಗಲೇ 11,015 ಟನ್ ಸರಬರಾಜಾಗಿದ್ದು, ಈ ಪೈಕಿ 6,453 ಟನ್ ವಿತರಣೆಯಾಗಿದೆ. 4,562 ಟನ್ ದಾಸ್ತಾನಿದೆ. ಮೇ 24ರಂದು ಆರ್‌ಸಿಎಫ್ ಸಂಸ್ಥೆಯಿಂದ 2,300 ಟನ್ ಸರಬರಾಜಾಗಲಿದೆ. ಉಳಿದಂತೆ ಅಗತ್ಯವಿರುವ ಯೂರಿಯಾ 22,282 ಟನ್ ಹಾಗೂ ಕಾಂಪ್ಲೆಕ್ಸ್ 12,147 ಟನ್ ಲಭ್ಯವಿದ್ದು, ರಸಗೊಬ್ಬರ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts