More

    ಹಾವನೂರ ಕಾರ್ಣಿಕೋತ್ಸವ ಇಂದು

    ಪಿ.ಎನ್. ಹೇಮಗಿರಿಮಠ ಗುತ್ತಲ

    ಕರೊನಾ ಮಹಾಮಾರಿಯಿಂದಾಗಿ ಈ ಬಾರಿ ಮೈಲಾರದಲ್ಲಿ ಕಾರ್ಣಿಕೋತ್ಸವ ವೀಕ್ಷಿಸಲು ಹೊರಗಿನವರಿಗೆ ಅವಕಾಶವಿಲ್ಲ. ಹೀಗಾಗಿ, ಫೆ. 28ರಂದು ಸಂಜೆ 4.30ಕ್ಕೆ ಹಾವನೂರ ಗ್ರಾಮದಲ್ಲಿ ನಡೆಯುವ ಕಾರ್ಣಿಕೋತ್ಸವ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆಯಿದೆ.

    ಐತಿಹಾಸಿಕ ಹಿನ್ನೆಲೆಯ ಹಾವನೂರ ಗ್ರಾಮದ ಚಿಕ್ಕ ಮೈಲಾರದ ಮೈಲಾರ ಲಿಂಗೇಶ್ವರನ ದೇವಸ್ಥಾನದಿಂದ ಪ್ರತಿವರ್ಷ ಭರತ ಹುಣ್ಣಿಮೆ ಮರುದಿನ ಸಂಜೆ (ಫೆ. 28) ಕಾರ್ಣಿಕ ನುಡಿಯಲಾಗುತ್ತದೆ. ಇದು ಸಹ ಮೈಲಾರದ ಕಾರ್ಣಿಕೋತ್ಸವದ ಕಾರ್ಣಿಕದ ನುಡಿಯಂತೆ ವರ್ಷ ಭವಿಷ್ಯವಾಗಿದೆ. ಹಾವನೂರಿನ ಸಾವಿರಾರು ಜನರು ಪ್ರತಿ ವರ್ಷ ಕಾರ್ಣಿಕ ಕೇಳಲು ಆಗಮಿಸುತ್ತಾರೆ. ಈ ಬಾರಿ ಮೈಲಾರದಲ್ಲಿ ಹೊರಗಿನ ಜನರಿಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ, ಹಾವನೂರಿನ ಕಾರ್ಣಿಕೋತ್ಸವಕ್ಕೆ ಹೆಚ್ಚು ಮಹತ್ವ ಬಂದಿದೆ.

    ಹಿನ್ನೆಲೆ: ಹಾವನೂರ ಸಂಸ್ಥಾನ ಆಳಿದ 2ನೇ ಹನುಮಂತರಾಯ (ಆಡಳಿತಾವಧಿ 1645-1664) ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಕಾರ್ಣಿಕ ನೋಡಲು ಬರುತ್ತಾನೆ. ಅತಿ ಸುರದ್ರೂಪಿ, ವಜ್ರದೇಹಿಯಾಗಿದ್ದ ಆತ ಮೀಸೆಯ ಮೇಲೆ ಲಿಂಬೆ ಹಣ್ಣನ್ನು ಇಟ್ಟುಕೊಂಡು ಕುದುರೆಯನ್ನೇರಿ ಜಾತ್ರೆ ಯಲ್ಲಿ ಸಂಚರಿಸಿ ಕಾರ್ಣಿಕೋತ್ಸವ ವೀಕ್ಷಿಸಲು ತೆರಳುತ್ತಾನೆ. ಆಗ ಜಾತ್ರೆಗೆ ಆಗಮಿಸಿದ್ದ ಜನರು ಕಾರ್ಣಿಕ ಬದಲಾಗಿ ಹನುಮಂತನರಾಯನನ್ನೇ ನೋಡುತ್ತಾರೆ. ಜಾತ್ರೆ ಮುಗಿಸಿ ಹಿಂದಿರುಗಿದ ಹನುಮಂತ ರಾಯನಿಗೆ ಅಂದು ರಾತ್ರಿ ಸ್ವಪ್ನದಲ್ಲಿ ಮೈಲಾರಲಿಂಗೇಶ್ವರ ಬಂದು, ‘ನೀನು ಇನ್ಮುಂದೆ ಜಾತ್ರೆಗೆ ಆಗಮಿಸಬೇಡ. ಹಾವನೂರಿನಲ್ಲೇ ದೇವಸ್ಥಾನ ನಿರ್ವಿುಸು. ಅಲ್ಲಿಯೂ ಮೈಲಾರ ಕಾರ್ಣಿಕದ ಹಿಂದಿನ ದಿನ ಕಾರ್ಣಿಕೋತ್ಸವ ನಡೆಯಲಿ’ ಎಂದು ಹೇಳುತ್ತಾನೆ. ಇದರಿಂದ ಹನುಮಂತರಾಯ ಚಿಕ್ಕ ಮೈಲಾರ ದೇವಸ್ಥಾನ ನಿರ್ವಿುಸುತ್ತಾನೆ ಎನ್ನುವುದು ಐತಿಹ್ಯ. ಅಂದಿನಿಂದ ಇಂದಿನವರೆಗೂ ಮೈಲಾರ ಕ್ಷೇತ್ರದ ಬಹುತೇಕ ಕಾರ್ಯಕ್ರಮಗಳು ಇಲ್ಲಿಯೂ ನಡೆಯುತ್ತವೆ. ಭರತ ಹುಣ್ಣಿಮೆ ನಂತರ ನಡೆಯುವ ಮೈಲಾರದ ಕಾರ್ಣಿಕೋತ್ಸವಕ್ಕಿಂತ ಹಿಂದಿನ ದಿನ ಸಂಜೆ ಇಲ್ಲಿ ನಡೆಯುವ ಕಾರ್ಣಿಕೋತ್ಸವದಲ್ಲಿನ ಕಾರ್ಣಿಕ ನುಡಿಯು ಮೈಲಾರದ ಕಾರ್ಣಿಕ ನುಡಿಗೆ ಸಾಮಿಪ್ಯ ಹೊಂದುತ್ತದೆ ಎಂಬ ನಂಬಿಕೆ ಭಕ್ತರದ್ದು.

    ಮೈಲಾರದ ಕಾರ್ಣಿಕದಂತೆ ನಮ್ಮ ಗ್ರಾಮದಲ್ಲಿನ ಕಾರ್ಣಿಕೋತ್ಸವಕ್ಕೂ ಐತಿಹಾಸಿಕ ಹಿನ್ನೆಲೆಯಿದೆ. ಇಲ್ಲಿನ ಕಾರ್ಣಿಕದ ನುಡಿ ಸಹ ನಿಜವಾದ ಅನೇಕ ನಿರ್ದಶನಗಳಿವೆ.

    | ಪುರುಷೋತ್ತಮ ನ. ಗಲಗಲಿ, ಹಾವನೂರ ಗ್ರಾಮಸ್ಥ

    ವರ್ಷದಿಂದ ವರ್ಷಕ್ಕೆ ನಮ್ಮೂರಿನ ಕಾರ್ಣಿಕೋತ್ಸವ ವೀಕ್ಷಿಸಲು ಜನರು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಹಾವನೂರಿನ ಕಾರ್ಣಿಕೋತ್ಸವ ಮೈಲಾರದಂತಿದೆ. ಅಲ್ಲಿ ನಡೆಯುವ ಸಂಪ್ರದಾಯಗಳೆಲ್ಲವೂ ಇಲ್ಲಿಯೂ ನಡೆಯುತ್ತಿವೆ. 16ನೇ ಶತಮಾನದಿಂದ ಇಲ್ಲಿ ಕಾರ್ಣಿಕೋತ್ಸವ ನಡೆಯುತ್ತಿದೆ.

    | ದತ್ತಾತ್ರೇಯ ಭಂಗಿ, ಗ್ರಾಪಂ ಮಾಜಿ ಸದಸ್ಯ, ಹಾವನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts