More

    ಬಿಳೆಗುಡಿ ಹಾರಿತಲೆ ಪರಾಕ್

    ಹಟ್ಟಿಚಿನ್ನದಗಣಿ :ಅಂತರ್ ಜಿಲ್ಲೆ, ರಾಜ್ಯದ ಭಕ್ತರನ್ನು ಹೊಂದಿದ ವಂದಲಿಯ ಬಲಭೀಮ ದೇವಸ್ಥಾನದಲ್ಲಿ ಬುಧವಾರ ಯುಗಾದಿ ದಿನ(ಮುಂಗಾರಿಗೆ), ಬೆನಕನ ಅಮವಾಸ್ಯೆ ಪಾಡ್ಯ(ಮುಂಗಾರಿಗೆ) ಎರಡು ಹೇಳಿಕೆಗಳು ಭಕ್ತರಿಗೆ ಪ್ರಮುಖವಾಗಿವೆ.

    ಈ ಬಾರಿ ಯುಗಾದಿ ಹಬ್ಬದ ಹೇಳಿಕೆ ಉತ್ತಮ ಮಳೆ-ಬೆಳೆಯಿಂದ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದ್ದರೆ, ‘ಬಿಳೆ ಗುಡಿ ಹಾರಿತಲೆ’ ಪರಾಕ ಎಂದರೆ ಪ್ರತಿಷ್ಠಿತರಿಗೆ ಆತಂಕ ಎಂಬ ಹೇಳಿಕೆ ಸಂಚಲನ ಸೃಷ್ಟಿಸಿದೆ. ಯುಗಾದಿ ನಿಮಿತ್ತ ಬಲಭೀಮ ದೇವರಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ಅಲಂಕಾರ, ಪಲ್ಲಕ್ಕಿ ಮೆರವಣಿಗೆ, ಭಕ್ತರಿಂದ ದೀರ್ಘದಂಡ ನಮಸ್ಕಾರ, ಗಂಡಾರ್ತಿ ಹೋರುವ ಹರಕೆ, ಸಾಯಂಕಾಲ ಪಂಚಾಂಗ ಶ್ರವಣ ಹಾಗೂ ಉಚ್ಛಾಯ ಮಹೋತ್ಸವ ನಂತರ ಹೇಳಿಕೆಗಳು, ಮಹಾ ಮಂಗಳಾರತಿ ಕಾರ್ಯಕ್ರಮಗಳು ಸಂಪ್ರದಾಯದಂತೆ ನಡೆದವು.

    ಹಟ್ಟಿಚಿನ್ನದಗಣಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಶಾಖಾ ಮಠದಲ್ಲಿ ರಾಯರಿಗೆ ವಿಶೇಷ ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಉತ್ಸವ, ಪಂಚಾಂಗ ಶ್ರವಣ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ವಿ.ಎ ಮಾಲೀಪಾಟೀಲ್, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ್‌ಗೌಡ, ಪ್ರಮುಖರಾದ ವರದರಾಜ್ ಕುಲಕರ್ಣಿ, ಮುರಲೀಧರ್ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts