More

    ಹಟ್ಟಿ ಪ್ರೌಢಶಾಲೆಗೆ ಸುವರ್ಣ ಮಹೋತ್ಸವ ಸಂಭ್ರಮ

    ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ನ.13ರಂದು ಹಳೇ ವಿದ್ಯಾರ್ಥಿಗಳ ಸಮ್ಮಿಲನ, ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

    1969ರಲ್ಲಿ 62 ವಿದ್ಯಾರ್ಥಿಗಳೊಂದಿಗೆ, ಮೂವರು ಶಿಕ್ಷಕರು ಗಣಿ ಕಂಪನಿ ಸ್ಥಳದಲ್ಲಿ ಕನ್ನಡ ಮತ್ತು ಆಂಗ್ಲಮಾಧ್ಯಮದಲ್ಲಿ 3 ತಗಡಿನ ಕೋಣೆಯಲ್ಲಿ ಆರಂಭವಾದ ಶಾಲೆಯಲ್ಲಿ 1971ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.71 ಫಲಿತಾಂಶ ಲಭಿಸಿತು.

    1999-2000ವರೆಗೆ ಕನ್ನಡ, ಆಂಗ್ಲ, ಉರ್ದು ವಿಭಾಗಗಳು 1400ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿ ಜಿಲ್ಲೆಯಲ್ಲಿಯೇ ಮಾದರಿ ಶಾಲೆಯಾಗಿ ಹೊರಹೊಮ್ಮಿದ್ದು, 2008ರಲ್ಲಿ ಆಂಗ್ಲ ಮಾಧ್ಯಮ ಬಂದ್ ಆಗಿ, ಸದ್ಯ ಕನ್ನಡ ಹಾಗೂ ಉರ್ದು ಮಾಧ್ಯಮದಲ್ಲಿ ಬೋಧನೆ ನಡೆದಿದೆ.

    ಸುವರ್ಣ ಮಹೋತ್ಸವ ಅದ್ದೂರಿಯಾಗಿ ನಡೆಸು ಹಳೇ ವಿದ್ಯಾರ್ಥಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿಗೆ ಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ (ಅಧ್ಯಕ್ಷ), ವಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ನರಸಪ್ಪ ಯಾದವ್ (ಕಾರ್ಯಾಧ್ಯಕ್ಷ) ಆಯ್ಕೆಯಾಗಿದ್ದಾರೆ. ಕಳೆದ ವರ್ಷವೇ ಕಾರ್ಯಕ್ರಮಕ್ಕೆ ಸಿದ್ಧಗೊಳಿಸಲಾಗಿತ್ತು. 2021ರ ಮೇ 23ರಂದು ನಡೆಯಬೇಕಿದ್ದ ಕಾರ್ಯಕ್ರಮ ಕರೊನಾ ಭೀತಿಯಲ್ಲಿ ಮುಂದೂಡಲಾಗಿತ್ತು.

    ಹಟ್ಟಿಚಿನ್ನದಗಣಿಯಲ್ಲಿ ಸರ್ಕಾರಿ ಪ್ರೌಢಶಾಲೆ ಹೊರತುಪಡಿಸಿದರೆ ಬೇರೊಂದು ಶಾಲೆ ಇರಲಿಲ್ಲ. ಅಂದು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಇಂಗ್ಲಿಷ್ ಮಾಧ್ಯಮ ತರಗತಿಗಳಿಗೆ ಬೋಧಿಸಿದ ಇತಿಹಾಸ ಶಾಲೆಗಿದೆ. ಸದರಿ ಶಾಲೆಯಲ್ಲಿ ಕಲಿತು ಇಂದು ಉನ್ನತ ಮಟ್ಟದ ಅಧಿಕಾರದಲ್ಲಿರುವವರನ್ನು ನಾವು ಕಾಣಬಹುದು.

    ಭಾಗ್ಯ (ಐಎಎಸ್), ಪ್ರಕಾಶ್ (ಹಟ್ಟಿಚಿನ್ನದಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ), ರವಿನಾರಾಯಣ್ (ನಿವೃತ್ತ ಎಸ್ಪಿ), ಪಾಂಡುರಂಗ (ಸಹಾಯಕ ಪೊಲೀಸ್ ಆಯುಕ್ತರು), ಯಲ್ಲಮ್ಮ ದೊಡ್ಡಮನಿ, ಚಂದ್ರಶೇಖರ್ ದೊಡ್ಡಮನಿ (ಬಿಇಒ), ಸಲೀಮ್ ಪಾಷಾ (ಡಿವೈಎಸ್ಪಿ), ಅಮರೇಶ್ (ಸಿಪಿಐ), ಪೆಂಚಲಯ್ಯ (ಗಣಿ ಕಂಪನಿ ಉಪಪ್ರಧಾನ ವ್ಯವಸ್ಥಾಪಕ ), ಮೋಹನ್‌ಸಿಂಗ್ (ಗಣಿ ವ್ಯವಸ್ಥಾಪಕ ), ಅನಿಲ್‌ಕುಮಾರ್, ಸಿದ್ರಾಮೇಶ್, ರವಿ ಪುರುಷೋತ್ತಮ್ (ಸಿಪಿಐಗಳು), ರಾಜೇಶ್ವರಿ, ಕನಕಾಚಲಪತಿ (ಫಿಜಿಷಿಯನ್), ಚನ್ನಬಸವ (ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ) ಸೇರಿ ಗಣಿ ಅಧಿಕಾರಿಗಳು, ಪಿಡಿಒಗಳು, ಪತ್ರಕರ್ತರು ಸೇರಿ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಷ್ಠಿತರು ಇದೇ ಶಾಲೆಯಲ್ಲೆ ಓದಿದ್ದಾರೆ.

    ಶಾಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸುವ ಕುರಿತು ಸಿದ್ಧತೆ ಮಾಡಿಕೊಂಡಿದ್ದು ಭಾನುವಾರ ನಡೆಯುವ ಕಾರ್ಯಕ್ರಮ ಶಾಲೆಯ ಪಾಲಿಗೆ ಐತಿಹಾಸಿಕ ಮೈಲುಗಲ್ಲು.
    | ಮುರಳೀಧರರಾವ್ ಕುಲಕರ್ಣಿ, ಉಪಪ್ರಾಚಾರ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ)

    ಹಳೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅದ್ದೂರಿ ಸುವರ್ಣ ಮಹೋತ್ಸವಕ್ಕೆ ಕಳೆದ ವರ್ಷವೇ ಸಿದ್ಧತೆ ನಡೆಸಲಾಗಿತ್ತು. ಆದರೆ ಕರೊನಾದಿಂದ ಮುಂದೂಡಲ್ಪಟ್ಟಿತ್ತು. ಶಾಲೆಯಲ್ಲಿ ಅಭ್ಯಾಸ ಮಾಡಿರುವ ಪ್ರತಿಯೊಬ್ಬರೂ ಕಾರ್ಯಕ್ರಮ ಸಿದ್ಧತೆಗೆ ಕೈ ಜೋಡಿಸಿರುವುದು ಸಂತೋಷ ತಂದಿದೆ.
    | ಪ್ರಕಾಶ್, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ, ಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts