More

    ಗಳಲೆ ರೋಗಕ್ಕೆ ಕುರಿ-ಮೇಕೆಗಳು ತುತ್ತು

    ಹಟ್ಟಿಚಿನ್ನದಗಣಿ: ಯಲಗಟ್ಟಾ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಗಂಟಲು ಬೇನೆ (ಗಳಲೆ ರೋಗ) ಕಂಡುಬಂದ ಪರಿಣಾಮ ಕುರಿ-ಮೇಕೆಗಳು ರಕ್ತ ಮಿಶ್ರಿತ ಭೇದಿಯಿಂದ ಬಳಲುತ್ತಿವೆ. ಇದರಿಂದ ಅದರ ಮಾಲಿಕರು ತತ್ತರಿಸಿದ್ದಾರೆ.

    ಈ ಗ್ರಾಮಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಎಲ್ಲೆಂದರಲ್ಲಿ ಚರಂಡಿ ನೀರು ಹರಿಯುತ್ತಿದೆ. ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳದ ಕಾರಣ ಕುರಿ-ಮೇಕೆಗಳಿಗೆ ರೋಗ ಕಾಣಿಸಿದೆ ಎನ್ನುತ್ತಾರೆ ಜಾನುವಾರು ಮಾಲೀಕರು. ಕೂಡಲೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಬೇಕು. ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ಕಲುಷಿತ ನೀರನ್ನು ಸ್ವಚ್ಛಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

    ಈ ಕುರಿತು ನಮ್ಮ ಗಮನಕ್ಕೆ ಯಾರೂ ತಂದಿಲ್ಲ. ಮಾಹಿತಿ ನೀಡಿದರೆ ಚಿಕಿತ್ಸೆ ನೀಡಲಾಗುವುದು.
    | ವಿಶಾಲ್, ಆನ್ವರಿ ಗ್ರಾಮದ ಪಶುವೈದ್ಯ.

    ಬಾವಿ ನೀರು ಸ್ವಚ್ಛಗೊಳಿಸಿ, ಶುಚಿತ್ವ ಕಾಪಾಡಲು ಕ್ರಮಕೈಗೊಳ್ಳಲಾಗುವುದು.
    | ಮೋಸಿನ್ ಅಹ್ಮದ್, ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts