More

    ಹಾಲೇಬೇಲೂರಿನಲ್ಲಿ ಮರಳಿನಲ್ಲಿ ಹುದುಗಿದ್ದ ಚನ್ನಕೇಶವ!

    ಹಾಸನ: ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ಚನ್ನಕೇಶವ ಸ್ವಾಮಿಯ ಮೂಲ ವಿಗ್ರಹ ಪತ್ತೆಯಾಗಿದೆ.

    ಪ್ರಾಚೀನ ಕಾಲದಿಂದಲೂ ಚನ್ನಕೇಶವ ಸ್ವಾಮಿಯ ಮೂಲ ನೆಲೆ ಹಾಲೇಬೇಲೂರು ಎಂಬ ಪ್ರತಿಪಾದನೆ ಇದ್ದು ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮದಲ್ಲಿ ಹೊಯ್ಸಳರ ಕಾಲದ ದೇವಾಲಯವಿದೆ. ಇದೆ ಗ್ರಾಮದಲ್ಲಿ ಹೊಯ್ಸಳರು ಚನ್ನಕೇಶವ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಪಾಳೆಗಾರರ ದಾಳಿಯ ಭಯದಿಂದ ಚನ್ನಕೇಶವನ ದೇವಸ್ಥಾನ ನಿರ್ಮಾಣ ಯೋಜನೆ ಬೇಲೂರಿಗೆ ಸ್ಥಳಾಂತರವಾಯಿತು.

    ಈ ಕಾರಣದಿಂದಲೇ ಗ್ರಾಮಕ್ಕೆ ಹಳೇಬೇಲೂರು ಎಂಬ ಹೆಸರು ಬಂದಿದೆ. ಯುಗಗಳು ಉರುಳಿದಂತೆ ಜನರ ಬಾಯಲ್ಲಿ ಹಳೇಬೇಲೂರು-ಹಾಲೆಬೇಲೂರಾಯಿತು ಎಂಬ ಪ್ರತೀತಿ ಇದೆ. ಈ ಮಾತಿಗೆ ಪುಷ್ಟಿ ಎಂಬಂತೆ ಎರಡು ದಿನಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ಹರಿಯುವ ಹೇಮಾವತಿ ನದಿ ದಂಡೆಯಲ್ಲಿ ಮರಳು ಗಣಿಗಾರಿಕೆ ನಡೆಸುವ ವೇಳೆ ನಾಲ್ಕು ಅಡಿ ಎತ್ತರದ ಚನ್ನಕೇಶವ ಸ್ವಾಮಿ ವಿಗ್ರಹ ಪತ್ತೆಯಾಗಿದೆ.

    ಅದನ್ನು ಗ್ರಾಮಸ್ಥರು ಸಂರಕ್ಷಿಸಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ತಹಸೀಲ್ದಾರ್ ಜಯಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts