More

    ಚನ್ನರಾಯಪಟ್ಟಣ ಪಿಎಸ್​ಐ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣ: ವರದಿಯಲ್ಲಿದೆ ಸ್ಫೋಟಕ ಕಾರಣ!

    ಹಾಸನ: ಚನ್ನರಾಯಪಟ್ಟಣ ಪಿಎಸ್​ಐ ಕಿರಣ್​ ಕುಮಾರ್​ ನೇಣಿಗೆ ಶರಣಾದ ಪ್ರಕರಣದ ತನಿಖೆಯನ್ನು ಹಾಸನ ವಿಶೇಷ ಪೊಲೀಸ್​ ತಂಡ ಪೂರ್ಣಗೊಳಿಸಿದೆ. ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಿದ್ದು, ಅತಿಯಾದ ಫೋನ್ ಕರೆಗಳ ಒತ್ತಡಕ್ಕೆ ಸಿಲುಕಿ, ಖಿನ್ನತೆಗೆ ಒಳಗಾಗಿ ಕಿರಣ್ ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅರಸೀಕೆರೆ ಡಿವೈಎಸ್ಪಿ ಹಾಗೂ ವಿಶೇಷ ತನಿಖಾಧಿಕಾರಿ ನಾಗೇಶ್, ಕಿರಣ್​ ಆತ್ಮಹತ್ಯೆ ಸಮಯದಲ್ಲಿ ಚನ್ನರಾಯಪಟ್ಟಣದಲ್ಲಿ ಹೆಚ್ಚು ಅಪರಾಧಗಳು ನಡೆದಿದ್ದವು. ಒಂದು ದಿನದ ಅಂತರದಲ್ಲಿ ಜೋಡಿ ಕೊಲೆಯಾಗಿತ್ತು. ಸಾರ್ವಜನಿಕರಿಂದ ಹಿಡಿದು ರಾಜಕಾರಣಿವರೆಗೆ ವಿವಿಧ ಮಂದಿ ಆಗ್ಗಾಗೆ ಹೆಚ್ಚು ಕರೆಮಾಡಿ ಕಾನೂನು ಸುವ್ಯವಸ್ಥೆ ಕುಸಿತದ ಬಗ್ಗೆ ಕಿರಣ್​ರನ್ನು ಕೇಳಿತ್ತಿದ್ದರು. ತನ್ನ ವಲಯ ವ್ಯಾಪ್ತಿಯಲ್ಲಿ ಹೀಗೆ ಆಯ್ತಲ್ಲ ಎಂದು ಕಿರಣ್ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಲವ್​, ಸೆಕ್ಸ್​, ದೋಖಾ: ಕೇಸು ದಾಖಲಿಸಿ ಎಸ್​ಐ ಕರಾಳ ಮುಖ ಬಯಲು ಮಾಡಿದ ಮಹಿಳಾ ಪಿಎಸ್​ಐ!

    ಕಿರಣ್ ಇನ್ನೇನು ಪ್ರಮೋಷನ್ ಹಂತದಲ್ಲಿದ್ದರು. ಆಗಾಷ್ಟೆ ಅವರ ಇಲಾಖೆಯ ತನಿಖೆಗಳು ಮುಗಿದಿದ್ದವು. ಸರಣಿ ಕೊಲೆಗಳು ಎಲ್ಲಿ ತನ್ನ ಪ್ರಮೋಷನ್​ಗೆ ಅಡ್ಡಿ ಆಗುತ್ತದೆಯೋ ಎಂಬ ಖಿನ್ನತೆಯೂ ಆಗಿರಬಹುದು. ಉತ್ತಮ ಅಧಿಕಾರಿಯನ್ನು ಕಳೆದುಕೊಂಡಿದ್ದೆವೆ. ಆತ ತನ್ನ ಮಗನ ಹುಟ್ಟುಹಬ್ಬಕ್ಕೂ ಕೇವಲ ಒಂದು ಗಂಟೆ ರಜೆ ಹಾಕಿದ್ದ. ಸದಾ ಕರ್ತವ್ಯಕ್ಕಾಗಿ ದುಡಿದಿದ್ದರು ಎಂದು ಹಾಸನ ಎಸ್ಪಿ ‌ಶ್ರೀನಿವಾಸ್ ಗೌಡ ಸ್ಮರಿಸಿದರು.

    ಜುಲೈ 31ರಂದು ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್ಐ ಕಿರಣ್​ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಈ ವೇಳೆ ಅವರ ಪತ್ನಿ ತವರಿಗೆ ತೆರಳಿದ್ದರು. (ದಿಗ್ವಿಜಯ ನ್ಯೂಸ್​)

    ಚನ್ನರಾಯಪಟ್ಟಣ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಆತ್ಮಹತ್ಯೆಗೆ ಶರಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts