More

    ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ? ನಿಜ ಏನು?

    ಹೈದರಾಬಾದ್​: ಇಂಥದ್ದೊಂದು ಸುದ್ದಿ ಕೇಳಿಬರುತ್ತಿರುವುದು ಇದು ಮೊದಲೇನಲ್ಲ. ‘ಪುಷ್ಪ’ ಬಿಡುಗಡೆಯಾಗಿ ಯಶಸ್ವಿಯಾಗುತ್ತಿದ್ದಂತೆಯೇ, ಅದರ ಮುಂದುವರೆದ ಭಾಗದಲ್ಲಿ ರಶ್ಮಿಕಾ ಇರುವುದಿಲ್ಲ ಎಂಬಂತಹ ಸುದ್ದಿಗಳು ಕೇಳಿ ಬಂದಿದ್ದವು. ಆದರೆ, ಚಿತ್ರತಂಡದವರಾಗಲೀ, ರಶ್ಮಿಕಾ ಆಗಲೀ ಈ ಬಗ್ಗೆ ಪ್ರತಿಕ್ರಿಯೆ ನೀಡದಿದ್ದರಿಂದ, ಸುದ್ದಿ ತಣ್ಣಗಾಯ್ತು.

    ಇದನ್ನೂ ಓದಿ: ಡ್ರಗ್ಸ್​ ದುಷ್ಪರಿಣಾಮಗಳ ಕುರಿತಾದ ‘ಕ್ವಿಟ್​’ …

    ಈಗ ಮತ್ತೊಮ್ಮೆ ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿಲ್ಲವಂತೆ ಎಂಬ ಸುದ್ದಿ ಕೇಳಿ ಬಂದಿದೆ. ಅಷ್ಟೇ ಅಲ್ಲ, ರಶ್ಮಿಕಾ ಬದಲು ಸಾಯಿ ಪಲ್ಲವಿ ಬರುತ್ತಾರಂತೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ಆದರೆ, ಚಿತ್ರತಂಡದವರ್ಯಾರೂ ಈ ಬಗ್ಗೆ ಬಾಯಿಬಿಟ್ಟಿಲ್ಲ.

    ರಶ್ಮಿಕಾ ಬದಲು ಸಾಯಿ ಪಲ್ಲವಿ ನಟಿಸುತ್ತಿರುವುದು ನಿಜವಾ? ಈ ಬಗ್ಗೆ ಟಾಲಿವುಡ್​ ಪಂಡಿತರು ತನಿಖೆ ಮಾಡಿದ್ದಾರೆ. ಅವರ ಪ್ರಕಾರ, ಸಾಯಿ ಪಲ್ಲವಿಗೆ ಚಿತ್ರದಲ್ಲೊಂದು ಪಾತ್ರವಿದೆಯಾದರೂ ಅದು ರಶ್ಮಿಕಾ ಪಾತ್ರವಲ್ಲವಂತೆ. ಅದೇ ಬೇರೆ, ಇದೇ ಬೇರೆ. ವಿಷಯವೇನೆಂದರೆ, ಚಿತ್ರದಲ್ಲಿ ಇನ್ನೊಂದು ಮಹಿಳಾ ಪಾತ್ರ ಬೇಕೆಂದೆನಿಸಿ, ನಿರ್ದೇಶಕ ಸುಕುಮಾರ್​ ಇನ್ನೊಂದು ಪಾತ್ರ ಸೃಷ್ಟಿ ಮಾಡಿದ್ದಾರಂತೆ. ಅದು ಬುಡಕಟ್ಟು ಹುಡುಗಿಯ ಪಾತ್ರ. ನಾಯಕ ಪುಷ್ಪನ ತಂಗಿಯಂತಿರುವ ಈ ಪಾತ್ರ ಚಿತ್ರದಲ್ಲೊಂದು ಪ್ರಮುಖ ಪಾತ್ರ ವಹಿಸುತ್ತದಂತೆ. ಈ ಪಾತ್ರವನ್ನು ಸಾಯಿ ಪಲ್ಲವಿ ಮಾಡಿದರೆ ಚೆಂದ ಎಂದನಿಸಿ, ಆಕೆಗೆ ಕಥೆ ಮತ್ತು ಪಾತ್ರದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆಯಂತೆ. ಸಾಯಿಪಲ್ಲವಿ, ನೋಡೋಣ ಎಂದಿದ್ದಾರಂತೆ. ಒಂದು ಪಕ್ಷ ಆಕೆ ಒಪ್ಪಿದರೆ, ‘ಪುಷ್ಪ 2’ ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರ ಇರಲಿದೆ.

    ಇದನ್ನೂ ಓದಿ: ಯಾರಿಗೂ ಬೇಡವಾದ ಪುರಿ ಜಗನ್ನಾಥ್​ಗೆ ಸಾಥ್​ ನೀಡಿದ ಸಲ್ಮಾನ್​ …

    ಇನ್ನು, ‘ಪುಷ್ಪ’ ಚಿತ್ರದಿಂದ ಉತ್ತೇಜಿತರಾಗಿರುವ ನಿರ್ದೇಶಕ ಸುಕುಮಾರ್​, ಮುಂದುವರೆದ ಭಾಗವನ್ನು ಇನ್ನಷ್ಟು ದೊಡ್ಡದಾಗಿ ಮತ್ತು ಅದ್ಧೂರಿಯಾಗಿ ಮಾಡಲು ಚಿಂತಿಸಿದ್ದು, ಈ ನಿಟ್ಟಿನಲ್ಲಿ ಚಿತ್ರಕಥೆ ಮಾಡಿದ್ದಾರಂತೆ. ಈಗಾಗಲೇ ಈ ಮುಂದುವರೆದ ಭಾಗದ ಚಿತ್ರೀಕರಣ ಶುರುವಾಗಿದ್ದು, ಮುಂದಿನ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

    ಸುದೀಪ್​ ಅಭಿನಯಿಸುತ್ತಿರುವ ಮುಂದಿನ ಚಿತ್ರ ಯಾವುದು ಗೊತ್ತಾ? ಇಲ್ಲಿದೆ ಡೀಟೇಲ್ಸ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts