More

    Fact Check: 2,000 ರೂಪಾಯಿ ನೋಟುಗಳ ಬದಲಿಗೆ 1,000 ರೂ.ನೋಟುಗಳ ಚಲಾವಣೆ ಆಗುತ್ತಿದೆಯಾ?

    ನವದೆಹಲಿ: ಕಳೆದ ಅನೇಕ ದಿನಗಳಿಂದಲೂ ಆರ್​ಬಿಐ 2,000 ರೂಪಾಯಿಯ ನೋಟುಗಳನ್ನು ಮುದ್ರಿಸುತ್ತಿಲ್ಲ. ಎಟಿಎಂಗಳಲ್ಲೂ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿವೆ. ಖೋಟಾ ನೋಟು ಜಾಲದಲ್ಲಿ ಹೆಚ್ಚಾಗಿ 2,000 ರೂಪಾಯಿ ನಕಲಿ ನೋಟುಗಳೇ ಮುದ್ರಣವಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಮುದ್ರಣ ನಿಲ್ಲಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರ ಬಂದಿತ್ತು.

    2000 ರೂಪಾಯಿ ನೋಟುಗಳ ಚಲಾವಣೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅದು ರದ್ದುಗೊಳ್ಳಲಿದೆ ಎಂಬರ್ಥದ ಪೋಸ್ಟ್​ಗಳು ಹರಿದಾಡುತ್ತಿದ್ದವು. ಆರ್​ಬಿಐ 2,000 ರೂಪಾಯಿಗಳನ್ನು ಶೀಘ್ರವೇ ನಿಲ್ಲಿಸಲಿದೆ. ಅದರ ಬದಲು 1000 ರೂಪಾಯಿ ನೋಟುಗಳನ್ನು ಮುದ್ರಿಸಿ, ಚಲಾವಣೆಗೆ ಬಿಟ್ಟಿದೆ ಎಂದು ಫೇಸ್​ಬುಕ್, ವಾಟ್ಸ್​ಆ್ಯಪ್​, ಯೂಟ್ಯೂಬ್​ಗಳಂತಹ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಜತೆಗೆ 1,000 ರೂ.ನೋಟಿನ ಫೋಟೋಗಳನ್ನೂ ವೈರಲ್ ಮಾಡಲಾಗಿತ್ತು.

    ಆದರೆ ನಿಜಕ್ಕೂ ಭಾರತೀಯ ರಿಸರ್ವ್​ ಬ್ಯಾಂಕ್​ ಹೊಸ 1,000 ರೂ.ನೋಟುಗಳನ್ನು ಮುದ್ರಿಸಿದೆಯಾ? ಅದು ಜನಸಾಮಾನ್ಯರಿಗೆ ಲಭ್ಯವಾಗುತ್ತಿದೆಯಾ ಎಂಬ ಬಗ್ಗೆ ಕೇಂದ್ರ ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ.

    ಆರ್​ಬಿಐ ಹೊಸದಾಗಿ 1,000 ರೂ.ನೋಟುಗಳ ಮುದ್ರಿಸಿ, ಚಲಾವಣೆಗೆ ಬಿಟ್ಟಿದೆ ಎಂಬುದು ಒಂದು ಗಾಳಿಸುದ್ದಿಯಷ್ಟೇ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಅದರ ಫೋಟೋಗಳೂ ನಕಲಿ ಎಂದು ಕೇಂದ್ರ ಸರ್ಕಾರ ಹೇಳಿದ್ದಾಗಿ ಪಿಐಬಿ (ಪ್ರೆಸ್​ ಇನ್​ಫಾರ್ಮೇಶನ್​ ಬ್ಯೂರೋ) 1,000 ರೂ.ನೋಟುಗಳ ಬಗ್ಗೆ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗಗೊಂಡಿದೆ.

    2,000 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸಲು, ಎಟಿಎಂಗಳಲ್ಲಿ ಹಾಕದೆ ಇರುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬ್ಯಾಂಕ್​ಗಳಿಗೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿಯೂ ಸಹ ಸುಳ್ಳು. ಯಾವ ಬ್ಯಾಂಕ್​ಗಳಿಗೂ ಅವರು ಸೂಚನೆ ನೀಡಿಲ್ಲ ಎಂದು ಪಿಐಬಿ ಟ್ವಿಟರ್​ನಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts