More

    ಮತ್ತೆ ಲಾಕ್​ಡೌನ್​; ಶನಿವಾರ, ಭಾನುವಾರ ಕಂಪ್ಲೀಟ್​ ಬಂದ್​; ಕೋವಿಡ್​ಗೆ ಬೆಚ್ಚಿದ ರಾಜ್ಯವಿದು…!

    ನವದೆಹಲಿ: ಒಂದೇ ದಿನ ಈವರೆಗಿನ ಅತಿ ಹೆಚ್ಚು ಕೋವಿಡ್​ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಮತ್ತೆ ಲಾಕ್​​ಡೌನ್​ ಮೋಡ್​ಗೆ ಮರಳಿದೆ ಈ ರಾಜ್ಯ. ಶನಿವಾರ ಹಾಗೂ ಭಾನುವಾರಗಳಂದು ಎಲ್ಲ ಕಚೇರಿ ಹಾಗೂ ಅಂಗಡಿಗಳ ಬಂದ್​ಗೆ ಆದೇಶಿಸಿದೆ. ಅಗತ್ಯ ವಸ್ತು ಮಾರಾಟ ಹಾಗೂ ಸೇವೆಗಳಿಗೆ ಇದರಿಮದ ವಿನಾಯ್ತಿ ನೀಡಲಾಗಿದೆ.

    ಈ ಆದೇಶ ಜಾರಿಗೊಳಿಸಿರುವುದು ಹರಿಯಾಣಾ ರಾಜ್ಯ. ಶುಕ್ರವಾರ ಒಂದೇ ದಿನ 996 ಕೋವಿಡ್​ ಪ್ರಕರಣಗಳು ಇಲ್ಲಿ ವರದಿಯಾಗಿವೆ. ಒಂದೇ ದಿನ ವರದಿಯಾಗಿರುವ ಅತಿ ಹೆಚ್ಚು ಪ್ರಕರಣಗಳ ಸಂಖ್ಯೆ ಇದಾಗಿದೆ. ಕೋವಿಡ್​ ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ಅನಿಲ್​ ವಿಜ್​ ತಿಳಿಸಿದ್ದಾರೆ.

    ಇದನ್ನೂ ಓದಿ; ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…! 

    ಹರಿಯಾಣದಲ್ಲಿ ಒಟ್ಟಾರೆ ಕೋವಿಡ್​ ರೋಗಿಗಳ ಸಂಖ್ಯೆ 50,926ಕ್ಕೆ ತಲುಪಿದೆ. 578 ಜನರು ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಕರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಬುಧವಾರ 994, ಮಂಗಳವಾರ-896 ಹಾಗೂ ಸೋಮವಾರ 887 ಪ್ರಕರಣಗಳು ಪತ್ತೆಯಾಗಿದ್ದವು.

    ಒಟ್ಟಾರೆ ರೋಗಿಗಳಲ್ಲಿ 42,793 ಜನರು ಕೋವಿಡ್​ನಿಮದ ಚೇತರಿಕೆ ಕಂಡಿದ್ದು, ಸದ್ಯ ರಾಜ್ಯದಲ್ಲಿ 7,555 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಇಲ್ಲಿ ಚೇತರಿಕೆಯ ಪ್ರಮಾಣ ಶೇ.84 ಆಗಿದ್ದರೆ, ಕೋವಿಡ್​ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವ ಸಮಯ 33 ದಿನಗಳಾಗಿವೆ.

    ಇದನ್ನೂ ಓದಿ; ಕೋವಿಡ್​ನಿಂದ ಮೃತಪಟ್ಟ ಪೌರ ಕಾರ್ಮಿಕನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ…! 

    ಪಂಜಾಬ್​ನಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಹರಿಯಾಣದಲ್ಲೂ ಈ ಕ್ರಮಕೈಗೊಳ್ಳಲಾಗುತ್ತಿದೆ. ಪಂಜಾಬ್​ನಲ್ಲಿ ರಾತ್ರಿ ಕರ್ಫ್ಯೂ, ವಿಕೇಂಡ್​ ಲಾಕ್​ಡೌನ್​ ಜಾರಿಯಲ್ಲಿದೆ. ಮದುವೆ ಹಾಗೂ ಅಂತ್ರಕ್ರಿಯೆ ಹೊರತುಪಡಿಸಿ ಬೇರೆಲ್ಲ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.

    ಕೋವಿಡ್​ ಕಾಲದ ಚುನಾವಣೆಗೆ ಮಾರ್ಗಸೂಚಿ ಪ್ರಕಟ; ರಾಜ್ಯಕ್ಕೂ ಇದೇ ಅನ್ವಯವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts