More

    ಮಾಜಿ ಶಾಸಕರ ಮನೆಯಲ್ಲಿ ಕೋಟಿ ಕೋಟಿ ಸಂಪತ್ತು ಪತ್ತೆ; ಇಡಿಯಿಂದ ವಿದೇಶಿ ಬಂದೂಕುಗಳು, ಮದ್ಯದ ಪೆಟ್ಟಿಗೆಗಳು ವಶ

    ಹರಿಯಾಣ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಹರಿಯಾಣ ಕಾಂಗ್ರೆಸ್ ಶಾಸಕ ಸುರೇಂದ್ರ ಪನ್ವಾರ್ ಮತ್ತು ಮಾಜಿ ಐಎನ್‌ಎಲ್‌ಡಿ ಶಾಸಕ ದಿಲ್ಬಾಗ್ ಸಿಂಗ್ ಅವರ ಮನೆಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶೋಧ ಕಾರ್ಯಾಚರಣೆ ನಡೆಸಿತು. ಸದ್ಯ ದಿಲ್ಬಾಗ್ ಸಿಂಗ್ ಗೆ ಸಂಬಂಧಿಸಿದ ಮನೆಗಳಲ್ಲಿ ಭಾರೀ ಪ್ರಮಾಣದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಇಡಿ ಮೂಲಗಳ ಪ್ರಕಾರ, ಅವರ ಮನೆಯಿಂದ ಅಪಾರ ಪ್ರಮಾಣದ ಅಕ್ರಮ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು, 300 ಪೆಟ್ಟಿಗೆಗಳಲ್ಲಿ ಅಕ್ರಮ ವಸ್ತುಗಳು, 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳು, 5 ಕೋಟಿ ರೂಪಾಯಿ ನಗದು ಮತ್ತು ಸುಮಾರು ನಾಲ್ಕೈದು ಕೆಜಿಯಷ್ಟು ಚಿನ್ನಾಭರಣಗಳು ಪತ್ತೆಯಾಗಿವೆ. ದಿಲ್ಬಾಗ್ ಸಿಂಗ್ ಅವರ ಅಡಗುತಾಣದಿಂದ ಅಪಾರ ಪ್ರಮಾಣದ ಆಸ್ತಿ ದಾಖಲೆಗಳೂ ಪತ್ತೆಯಾಗಿವೆ.

    ಗುರುವಾರದಿಂದ ಶೋಧ ಕಾರ್ಯಾಚರಣೆ
    ಜಾರಿ ನಿರ್ದೇಶನಾಲಯವು (ED) ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಕಾರಣದಿಂದಾಗಿ, ಕಾಂಗ್ರೆಸ್ ಶಾಸಕ ಸುರೇಂದ್ರ ಪನ್ವಾರ್ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಇಎಲ್) ಮಾಜಿ ಶಾಸಕ ದಿಲ್ಬಾಗ್ ಸಿಂಗ್ ಅವರ ನಿವಾಸಗಳ ಮೇಲೆ ಗುರುವಾರ ದಾಳಿ ನಡೆಸಲಾಯಿತು.

    ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ 
    ಇಡೀ ಪ್ರಕರಣ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ್ದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಪ್ರಕಾರ, ಯಮುನಾನಗರ, ಸೋನೆಪತ್, ಮೊಹಾಲಿ, ಫರಿದಾಬಾದ್, ಚಂಡೀಗಢ ಮತ್ತು ಕರ್ನಾಲ್‌ನಲ್ಲಿ ಇಬ್ಬರು ನಾಯಕರು ಮತ್ತು ಅವರಿಗೆ ಸಂಬಂಧಿಸಿದ 20 ಸ್ಥಳಗಳಲ್ಲಿ ಹುಡುಕಾಟ ನಡೆಸಲಾಯಿತು. ಯಮುನಾನಗರ ಮತ್ತು ಸಮೀಪದ ಜಿಲ್ಲೆಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಹರಿಯಾಣ ಪೊಲೀಸರು ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ ನಂತರ ಅಕ್ರಮ ಹಣ ವರ್ಗಾವಣೆಯ ವಿಷಯ ಬೆಳಕಿಗೆ ಬಂದಿದೆ. ಅಕ್ರಮ ಗಣಿಗಾರಿಕೆ ಮೂಲಕ ಹೆಚ್ಚಿನ ಪ್ರಮಾಣದ ಚಿನ್ನ, ಬೆಳ್ಳಿ ಮತ್ತು ಇತರ ಲೋಹಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ, ನಂತರ ಇಡಿ ದಾಳಿ ನಡೆಸಿತು. 

    Israel-Hamas War: ಅಲ್-ಖೈದಾ ಮುಂದಿನ ಟಾರ್ಗೆಟ್ ಈ ದಿಗ್ಗಜ ಉದ್ಯಮಿಗಳು; ಲೋನ್ ವುಲ್ಫ್ ನಂತೆ ಕೆಲಸ ಮಾಡಲು ಕರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts