More

    ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಮತ್ತೆ ಸಂಕಷ್ಟ; 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಉದ್ಯಮಿ ಪತಿ ರಾಜ್ ಕುಂದ್ರಾ ಅವರಿಗೆ ಮತ್ತೆ ಸಂಕಷ್ಟಗಳು ಎದುರಾಗಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ ಕುಂದ್ರಾ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಇಡಿ ಮಹತ್ವದ ಹೆಜ್ಜೆ ಇಟ್ಟಿದೆ. ಶಿಲ್ಪಾ ಮತ್ತು ರಾಜ್ ಅವರ 97 ಕೋಟಿ 79 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ.

    ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಮತ್ತೆ ಸಂಕಷ್ಟ; 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

    ಮುಂಬೈನ ಜಾರಿ ನಿರ್ದೇಶನಾಲಯವೂ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ 97.97 ಕೋಟಿ ಮೊತ್ತದ ಸ್ಥಿರ ಹಾಗೂ ಚರಾಸ್ತಿಯನ್ನು ಜಪ್ತಿ ಮಾಡಿದ್ದು, 2022ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಪ್ರಕರಣ ದಾಖಲಿಸಲಾಗಿದೆ. ಇಡೀ ಜಪ್ತಿ ಮಾಡಿರುವ ಆಸ್ತಿಯಲ್ಲಿ ಪ್ರಸ್ತುತ ಶಿಲ್ಪಾ ಶೆಟ್ಟಿಯ ಹೆಸರಿನಲ್ಲಿರುವ ಮುಂಬೈನ ಜುಹುವಿನಲ್ಲಿರು ರೆಸಿಡೆನ್ಸಿಯಲ್ ಫ್ಲಾಟ್, ಪುಣೆಯಲ್ಲಿರುವ ಬಂಗ್ಲೆ, ರಾಜ್ ಕುಂದ್ರಾ ಹೆಸರಿನಲ್ಲಿರುವ ಇಕ್ವಿಟಿ ಶೇರ್‌ಗಳು ಸೇರಿವೆ.

    ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಮತ್ತೆ ಸಂಕಷ್ಟ; 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

    ಮಹಾರಾಷ್ಟ್ರದಲ್ಲಿ ದಾಖಲಾದ ವಿವಿಧ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಪಿಎಂಎಲ್‌ಎ ಅಡಿಯಲ್ಲಿ ತನಿಖೆ ಆರಂಭಿಸಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ದೆಹಲಿ ಹಾಗೂ ಮುಂಬೈ ಪೊಲೀಸರು ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

    M/s ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್, ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಸಿಂಪಿ ಭಾರದ್ವಾಜ್, ಮಹೇಂದ್ರ ಭಾರದ್ವಾಜ್ ಮತ್ತು ಇತರ MLM ಏಜೆಂಟ್‌ಗಳು 2017 ರಲ್ಲಿ ಸುಮಾರು 6600 ಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆ. ಈ ಎಲ್ಲಾ ಬಿಟ್‌ಕಾಯಿನ್‌ಗಳನ್ನು ಹೂಡಿಕೆದಾರರಿಂದ ನಕಲಿ ಭರವಸೆಗಳ ಆಧಾರದ ಮೇಲೆ ಹಲವಾರು ಏಜೆಂಟ್‌ಗಳು  ಬಿಟ್ ಕಾಯಿನ್ ರೂಪದಲ್ಲಿ ಜನರಿಂದ ಹಣವನ್ನು ಸಂಗ್ರಹಿಸಿದ್ದರು. ತಿಂಗಳಿಗೆ ಶೇಕಡಾ 10 ರಷ್ಟು ಬಡ್ಡಿ ನೀಡುವುದಾಗಿ ಅವರಿಗೆ ಆಮಿಷವೊಡ್ಡಿದ್ದರು. 2017ರಲ್ಲಿ ಹೀಗೆ ಸಂಗ್ರಹಿಸಿದ ಮೊತ್ತ ಸುಮಾರು 6,600 ಕೋಟಿ ಮೌಲ್ಯ ಎಂದು ತನಿಖಾ ಸಂಸ್ಥೆ ಅಂದಾಜಿಸಿದೆ.

    ಹೂಡಿಕೆದಾರರಿಗೆ ಶೇ 10ರಷ್ಟು ರಿಟರ್ನ್ಸ್ ನೀಡಲಾಗುವುದು ಎಂದು ಭರವಸೆ ನೀಡಿದರು. ರಾಜ್ ಕುಂದ್ರಾ ಅವರು ವೈಯಕ್ತಿಕ ಹಿತಾಸಕ್ತಿಗಾಗಿ ಬಿಟ್‌ಕಾಯಿನ್ ಗಣಿಗಾರಿಕೆಯನ್ನು ಬಳಸಿಕೊಂಡರು ಎಂಬ ಆರೋಪವೂ ಇದೆ, ಇದು ಒಂದು ರೀತಿಯ ಪೊಂಜಿ ಯೋಜನೆಯಾಗಿದೆ. ರಾಜ್ ಕುಂದ್ರಾ ಈ ಹಗರಣದ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಇದರಲ್ಲಿ 285 ಬಿಟ್‌ಕಾಯಿನ್‌ಗಳನ್ನು ಪಡೆದುಕೊಂಡಿದ್ದರು. ಅಮಿತ್ ಭಾರದ್ವಾಜ್ ಹೂಡಿಕೆದಾರರನ್ನು ವಂಚಿಸಿ ಈ ಬಿಟ್‌ಕಾಯಿನ್‌ಗಳನ್ನು ಪಡೆದುಕೊಂಡರು ಮತ್ತು ಉಕ್ರೇನ್‌ನಲ್ಲಿ ಬಿಟ್‌ಕಾಯಿನ್ ಗಣಿಗಾರಿಕೆಯಲ್ಲಿ ಹೂಡಿಕೆ ಮಾಡಿದ್ದಾರೆ.

    ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಮತ್ತೆ ಸಂಕಷ್ಟ; 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

    ರಾಜ್ ಕುಂದ್ರಾ ಹೊಂದಿರುವ 285 ಬಿಟ್‌ಕಾಯಿನ್‌ಗಳ ಮೌಲ್ಯ 150 ಕೋಟಿ ರೂ. ಈ ಪ್ರಕರಣದಲ್ಲಿ ಇಡಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿತ್ತು. ಸಿಂಪಿ ಭಾರದ್ವಾಜ್ ಅವರನ್ನು 17 ಡಿಸೆಂಬರ್ 2023 ರಂದು, ನಿತಿನ್ ಗೌರ್ ಅವರನ್ನು 29 ಡಿಸೆಂಬರ್ 2023 ರಂದು ಮತ್ತು ಅಖಿಲ್ ಮಹಾಜನ್ 16 ಜನವರಿ 2023 ರಂದು ಬಂಧಿಸಲಾಯಿತು. ಸದ್ಯ ಎಲ್ಲರೂ ಜೈಲಿನಲ್ಲಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಅಜಯ್ ಭಾರದ್ವಾಜ್ ಮತ್ತು ಮಹೇಂದ್ರ ಭಾರದ್ವಾಜ್ ಇನ್ನೂ ತಲೆಮರೆಸಿಕೊಂಡಿದ್ದಾರೆ. ಇಡಿ ಆತನ ಹುಡುಕಾಟದಲ್ಲಿ ನಿರತವಾಗಿದೆ. ಈ ಪ್ರಕರಣದಲ್ಲಿ ಇಡಿ ಈಗಾಗಲೇ 69 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಜಪ್ತಿ ಮಾಡಿದೆ.

    ಇರೋ ಕೆಲಸ ಬಿಟ್ಟು, ಹಂದಿ ಸಾಕೋಕೆ ಶುರು ಮಾಡಿದ್ಲು; ಈಗ ಖುಷಿಯಾಗಿದ್ದೇನೆಂದಳು ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts