More

    ಹರಿಯಾಣ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ

    ನವದೆಹಲಿ: ತನ್ನ ರಾಜ್ಯದ ಖಾಸಗಿ ಸಂಸ್ಥೆಗಳಲ್ಲಿ ಶೇ.75 ಸ್ಥಾನಗಳನ್ನು ರಾಜ್ಯದ ಯುವಜನತೆಗೆ ಮೀಸಲಿಡುವ ನಿರ್ಣಯವನ್ನು ಹರಿಯಾಣ ಸಚಿವ ಸಂಪುಟ ಸಭೆ ಅಂಗೀಕರಿಸಿದೆ.

    ಖಾಸಗಿ ವಲಯದಲ್ಲಿ ರಾಜ್ಯದ ಯುವಜನತೆಗೆ ಮೀಸಲಾತಿ ನಿಗದಿಪಡಿಸುವ ಮಸೂದೆಗೆ ಅಂಗೀಕಾರ ನೀಡುವ ನಿರ್ಧಾರವನ್ನು ಜ.31ರ ಸಚಿವ ಸಂಪುಟ ಸಭೆಯಲ್ಲಿ ಮುಂದೂಡಲಾಗಿತ್ತು. ಬದಲಿಗೆ ಹೆಚ್ಚಿನ ಚರ್ಚೆ ಅಗತ್ಯವಿದೆ ಎಂದು ಪ್ರತಿಪಾದಿಸಿ, ಮಸೂದೆಯನ್ನು ಕಾನೂನು ಕಾರ್ಯದರ್ಶಿಗೆ ರವಾನಿಸಲಾಗಿತ್ತು.

    ಇದನ್ನೂ ಓದಿ: ಚೀನಾ ಸೇನೆ ಹಿಂತೆಗೆತದ ಹಿಂದೆ ಆ 2 ಗಂಟೆಗಳ ವಿಡಿಯೋ ಕಾಲ್​

    ಬಿಜೆಪಿಯ ಮಿತ್ರಪಕ್ಷ ಜನನಾಯಕ ಜನತಾ ಪಾರ್ಟಿ, ಖಾಸಗಿ ವಲಯದಲ್ಲಿ ಶೇ.75 ಮೀಸಲಾತಿ ನೀತಿ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಅದರಂತೆ ಈಗ ಹರಿಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​ ನೇತೃತ್ವದ ಸಚಿವ ಸಂಪುಟ ಈ ಮಸೂದೆಯನ್ನು ಅಂಗೀಕರಿಸಿದೆ.

    ಹರಿಯಾಣ ರಾಜ್ಯಕ್ಕೂ ಮುನ್ನ ಆಂಧ್ರ ಪ್ರದೇಶದ ಸಿಎಂ ಜಗನ್​ಮೋಹನ್​ ರೆಡ್ಡಿ ಖಾಸಗಿ ವಲಯದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಮೀಸಲಾತಿ ಒದಗಿಸುವ ನಿರ್ಣಯವನ್ನು ಜಾರಿಗೊಳಿಸಿದ್ದರು.

    ವಿಡಿಯೋ: ದಂಪತಿಯೇ ಸೃಷ್ಟಿಸಿದರೊಂದು ಅಪರೂಪದ ಅಭಯಾರಣ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts