More

    ವಿಡಿಯೋ: ದಂಪತಿಯೇ ಸೃಷ್ಟಿಸಿದರೊಂದು ಅಪರೂಪದ ಅಭಯಾರಣ್ಯ

    ರಾಜಸ್ಥಾನ: ಈಗ ಎಲ್ಲೆಲ್ಲೂ ಸಾವು ನೋವಿನ ಮಾತೇ. ಕರೊನಾ ವೈರಸ್‌ ದಾಳಿ ಇಟ್ಟಾಗಿನಿಂದಲೂ ಎಲ್ಲೆಲ್ಲೂ ಕೆಟ್ಟ ಸುದ್ದಿಗಳೇ ಸುಳಿದಾಡುತ್ತಿವೆ. ಇಂಥದ್ದರಲ್ಲಿ ಒಂದು ಒಳ್ಳೆಯ ಸುದ್ದಿ ರಾಜಸ್ಥಾನದ ಒಂದು ಸಣ್ಣ ಪಟ್ಟಣದಿಂದ ಹೊರಬಂದಿದೆ.

    ಅದೇನೆಂದರೆ ಇಲ್ಲಿಯ ದಂಪತಿ ತಮ್ಮ ಖಾಸಗಿ ಭೂಮಿಯನ್ನು ಹಚ್ಚ ಹಸಿರಿನ ಕಾಡಿನನ್ನಾಗಿ ಪರಿವರ್ತಿಸಿದ್ದಾರೆ. ಇಲ್ಲೀಗ ಹುಲಿಗಳು, ಜಿಂಕೆಗಳು ಮತ್ತು ಕಾಡುಹಂದಿಗಳಂತಹ ವನ್ಯಜೀವಿಗಳೂ ಇದ್ದು, ಇದೀಗ ಅಭಯಾರಣ್ಯವಾಗಿದೆ.

    ಇವರ ಅದ್ಭುತ ಕಥೆಯನ್ನು ವರ್ಲ್ಡ್ ಎಕನಾಮಿಕ್ ಫೋರಂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದೀಗ ಭಾರಿ ವೈರಲ್‌ ಆಗಿದೆ. ಈ ದಂಪತಿಯನ್ನು ಅಭಯಾರಣ್ಯದ ರಾಜ-ರಾಣಿ ಎಂದೇ ಕರೆಯಲಾಗುತ್ತಿದೆ.

    ಇಂಥದ್ದೊಂದು ಅದ್ವಿತೀಯ ಸಾಧನೆ ಮಾಡಿರುವ ದಂಪತಿ ಹೆಸರು ಆದಿತ್ಯ ಮತ್ತು ಪೂನಂ ಸಿಂಗ್. ಕಳೆದ 20 ವರ್ಷಗಳಿಂದ ಅವರು ಈ ಕಾಡಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

    ಈ ಕಾಡಿನ ಸೃಷ್ಟಿಯ ಹಿಂದೆ ಕುತೂಹಲದ ಕಥನವೇ ಇದೆ. ಅದೇನೆಂದರೆ 20 ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಒಂದು ಸಣ್ಣ ಜಮೀನನ್ನು ಖರೀದಿಸಿದ್ದರು. ಆದರೆ ಇಲ್ಲಿ ಬೇಲಿ ಹಾಕಿರಲಿಲ್ಲ. ಅತ್ತ ಹೋಗಿರಲೂ ಇಲ್ಲ. ಹೀಗೆ ಅಲ್ಲಿ ಗಿಡ-ಗಂಟಿಗಳು ಬೆಳೆದು ಕಾಡೇ ಸೃಷ್ಟಿಯಾಯಿತು. ಇದನ್ನು ಕಂಡ ಇವರಿಗೆ ತಾವೇಕೆ ಕಾಡನ್ನೇ ಬೆಳೆಯಬಾರದು ಎಂಬ ಯೋಚನೆ ಬಂದು ಈ ಪ್ರದೇಶದ ಸುತ್ತಲೂ ಹೆಚ್ಚು ಹೆಚ್ಚು ಭೂಮಿಯನ್ನು ಖರೀದಿಸಿದರು. ಸುಮಾರು 40 ಎಕರೆ ಜಮೀನು ಖರೀದಿಸಿ ಕಾಡು ಮಾಡಿದರು. ಇದೀಗ ಅಭಯಾರಣ್ಯವಾಗಿದೆ.

    ಇಲ್ಲಿ ಎರಡು ನೈಸರ್ಗಿಕವಾಗಿ ಅಭಿವೃದ್ಧಿ ಹೊಂದಿದ ವಾಟರ್‌ಹೋಲ್‌ಗಳು ಇವೆ. ಅನೇಕ ಕಾಡು ಪ್ರಾಣಿಗಳಿವೆ. ಇವರಿಗೆ ಧನಸಹಾಯ ಮಾಡಲು ಕೆಲವರು ಮುಂದಾದರೂ ಅದನ್ನು ನಯವಾಗಿ ನಿರಾಕರಿಸಿರುವ ಇವರೀಗ ಕಾಡಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

    ಮದುಮಕ್ಕಳಿಗೆ ಭಾರಿ ಶಾಕ್‌- ಸಾರ್ವಜನಿಕ ಮದುವೆ ಬ್ಯಾನ್‌- ಎಲ್ಲೆಲ್ಲಿ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts