More

    ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್​ ಸೋಂಕಿತರ ಆರೋಗ್ಯ ವಿಚಾರಿಸಿ, ಕುಣಿದು ರಂಜಿಸಿದ ಹರ್ಷಿಕಾ-ಭುವನ್​

    ಕೊಡಗು: ಕರೊನಾ ರೋಗಿಗಳಲ್ಲಿ ಮನೋಸ್ಥೈರ್ಯ ಅತಿ ಮುಖ್ಯ. ಆ ಕಾರಣಕ್ಕೆ ಅನೇಕರು ಸೋಂಕಿತರಿಗೆ ಧೈರ್ಯ ಹೇಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅದೇ ರೀತಿ ನಟ ಭುವನ್​ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ಕೂಡ ಸೋಂಕಿತರಿಗೆ ಧೈರ್ಯ ಹೇಳುವ ಕೆಲಸಕ್ಕೆ ಮುಂದಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತರೆದುರು ಕುಣಿದು ಕುಪ್ಪಳಿಸಿ ರಂಜಿಸಿದ್ದಾರೆ.

    ಹರ್ಷಿಕಾ ಹಾಗೂ ಭುವನ್​ ಜತೆಯಾಗಿ ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರಿಗೆ ಊಟದ ಕಿಟ್​ ವಿತರಣೆಯಿಂದ ಹಿಡಿದು ಆ್ಯಂಬುಲೆನ್ಸ್​ ವ್ಯವಸ್ಥೆಯವರೆಗೂ ಅನೇಕ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಅದರ ಮುಂದಿನ ಹೆಜ್ಜೆಯಾಗಿ ಸೋಂಕಿತರಿಗೆ ಧೈರ್ಯ ಹೇಳಲು ಮುಂದಾಗಿದ್ದಾಗಿ ನಟಿ ಹರ್ಷಿಕಾ ಹೇಳಿದ್ದಾರೆ. ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿರುವ 400 ಸೋಂಕಿತರನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಸೋಂಕಿತರ ಎದುರು ಕೊಡವ ನೃತ್ಯವನ್ನೂ ಮಾಡಿದ್ದಾರೆ. ಈ ಸೆಲೆಬ್ರಿಟಿ ಜೋಡಿಗೆ ವೈದ್ಯಕೀಯ ಸಿಬ್ಬಂದಿಯೂ ಸಾಥ್​ ನೀಡಿದ್ದಾರೆ. ಸೋಂಕಿತರೂ ಬೆಡ್​ನಲ್ಲೇ ಕುಳಿತು ನೃತ್ಯವನ್ನು ಎಂಜಾಯ್​ ಮಾಡಿದ್ದಾರೆ. (ಏಜೆನ್ಸೀಸ್​)

    ‘ಅಪ್ಪಾ, ನನ್ನ ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ವೈದ್ಯೆ

    ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts