More

    ಭೋಜ್​ಪುರಿಯಲ್ಲೂ ಬೆಸ್ಟ್; ಪರಭಾಷೆಯಲ್ಲೂ ಅತ್ಯುತ್ತಮ ಡೆಬ್ಯೂ ನಟಿ ಪ್ರಶಸ್ತಿ ಪಡೆದ ಹರ್ಷಿಕಾ

    | ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

    ನಟಿ ಹರ್ಷಿಕಾ ಪೂಣಚ್ಚ ಪಾಲಿಗೆ 2023 ಅದೃಷ್ಟದ ವರ್ಷವಾಗಿದೆ. ಈ ವರ್ಷ ಅವರು ನಟಿಸಿರುವ ಸಾಲುಸಾಲು ಚಿತ್ರಗಳು ತೆರೆಗೆ ಅಪ್ಪಳಿಸಲಿದ್ದು, ಜತೆಗೆ ಭೋಜ್​ಪುರಿ ಚಿತ್ರದ ನಟನೆಗೆ ಪ್ರಶಸ್ತಿಯೂ ಒಲಿದುಬಂದಿದೆ. ದೂರದ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಭೋಜ್​ಪುರಿ ಫಿಲಂ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಹರ್ಷಿಕಾ, ‘ಹಮ್ ಹೈ ರಾಹಿ ಪ್ಯಾರ್ ಕೇ ಚಿತ್ರದ ನಟನೆಗೆ ಅತ್ಯುತ್ತಮ ಡೆಬ್ಯೂ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

    ದುಬೈನಿಂದ ‘ವಿಜಯವಾಣಿ’ ಜತೆ ಮಾತನಾಡಿದ ಹರ್ಷಿಕಾ, ‘ಪ್ರಶಸ್ತಿ ದೊರೆತಿರುವುದು ನನಗೇ ನಂಬಲಾಗುತ್ತಿಲ್ಲ. ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯುವುದರ ಜತೆಗೆ ವೇದಿಕೆ ಮೇಲೆ ಗೋವಿಂದ ಅವರಂತಹ ದಿಗ್ಗಜ ನಟರ ಜತೆ ಡಾನ್ಸ್ ಮಾಡಿದ್ದು ಅವಿಸ್ಮರಣೀಯ. ಇದೆಲ್ಲ ನಿಜವಾಗಲೂ ನಡೆಯುತ್ತಿದೆಯಾ ಅನ್ನುವಷ್ಟು ಖುಷಿಯಾಗುತ್ತಿದೆ. ನನಗೆ ಭೋಜ್​ಪುರಿ ಚಿತ್ರರಂಗ ಹೊಸದು. ಭೋಜ್​ಪುರಿ ಹಾಡುಗಳನ್ನು ಕೇಳಿದ್ದೆ ಅಷ್ಟೇ. ಅಲ್ಲಿ ನಾನು ನಟಿಸಿದ್ದು, ಆ ಚಿತ್ರರಂಗ ನನ್ನನ್ನು ಗುರುತಿಸಿದ್ದು, ಅಲ್ಲಿನ ಪ್ರೇಕ್ಷಕರು ನೀಡಿದ ಪ್ರೀತಿಗೆ ಚಿರಋಣಿ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

    ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲೂ ‘ಕಾಂತಾರ’ ಹವಾ; ಭಾರತದ ಪ್ರತಿನಿಧಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್​ ಶೆಟ್ಟಿ

    ‘ಭೋಜ್​ಪುರಿ ಚಿತ್ರರಂಗದಲ್ಲಿ ಮೂವರು ನಟರು, ಸಂಸದರಾಗಿದ್ದಾರೆ. ಮನೋಜ್ ತಿವಾರಿ, ರವಿಕಿಶನ್ ಮತ್ತು ನಿರಹುವಾ ಸ್ಟಾರ್​ಗಳಾಗಿ ಬೆಳೆದು, ರಾಜಕೀಯಕ್ಕೆ ಬಂದು, ಸಂಸದರಾಗಿದ್ದಾರೆ. ಜತೆಗೆ ಸಿನಿಮಾಗಳಲ್ಲೂ ಸಕ್ರಿಯರಾಗಿದ್ದಾರೆ. ಅಲ್ಲಿ ಕಲಾವಿದರಿಗೆ ಅಷ್ಟು ದೊಡ್ಡ ಕ್ರೇಜ್ ಇದೆ’ ಎಂದು ಹೇಳಿಕೊಳ್ಳುತ್ತಾರೆ ಹರ್ಷಿಕಾ ಪೂಣಚ್ಚ. ಹಾಗೆಯೇ ಈ ವರ್ಷ ಬಿಡುಗಡೆಯಾದ ಹರ್ಷಿಕಾ ನಟಿಸಿರುವ ಮೊದಲ ಸಿನಿಮಾ ‘ಕಾಸಿನ ಸರ’. ‘ಚಿತ್ರ ಸದ್ಯ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ನಿರ್ದೇಶಕ ನಂಜುಂಡೇಗೌಡ, ನಾಯಕ ವಿಜಯ್ ರಾಘವೇಂದ್ರ ಹಾಗೂ ಉಮಾಶ್ರೀ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಉತ್ತಮ ಸಾಮಾಜಿಕ ಸಂದೇಶವಿರುವ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಹೇಳಿಕೊಳ್ಳುತ್ತಾರೆ ಹರ್ಷಿಕಾ.

    ಇದನ್ನೂ ಓದಿ: ಮಾ.27ರಿಂದ ಏ.1ರ ವರೆಗೆ 5 ಮತ್ತು 8ನೇ ತರಗತಿ ಮೌಲ್ಯಾಂಕನ ಪರೀಕ್ಷೆ; ಇಲ್ಲಿದೆ ವೇಳಾಪಟ್ಟಿ..

    13ನೇ ವರ್ಷ, 13 ಸಿನಿಮಾ!

    ಹರ್ಷಿಕಾ ಪೂಣಚ್ಚ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇದೀಗ 13 ವರ್ಷಗಳಾಗಿವೆ. ವಿಶೇಷ ಅಂದರೆ ಈ ವರ್ಷ ಅವರ ಕೈಯಲ್ಲಿ ಸದ್ಯ 13 ಚಿತ್ರಗಳಿವೆಯಂತೆ. ‘ಈ ವರ್ಷ ನನಗೆ ತುಂಬ ಸ್ಪೆಷಲ್ ಆಗುತ್ತಿದೆ. ‘ಕಾಸಿನ ಸರ’ ಈ ವರ್ಷ ಬಿಡುಗಡೆಯಾದ ನನ್ನ ಮೊದಲ ಚಿತ್ರ. ಅದರ ಜತೆಗೆ ಒಂಬತ್ತು ಕನ್ನಡ ಚಿತ್ರಗಳು ಹಾಗೂ ಮೂರು ಭೋಜ್​ಪುರಿ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. 13 ವರ್ಷಗಳ ಬಳಿಕವೂ ಜನರಲ್ಲಿ ನನ್ನ ಬಗ್ಗೆ ಪ್ರೀತಿಯಿದೆ, ಕೈತುಂಬ ಅವಕಾಶಗಳಿವೆ. ಅಪ್ಪನ ಆಶೀರ್ವಾದ. ಅವರೇ ನನ್ನನ್ನು ಮುಂದುವರಿಸುತ್ತಿದ್ದಾರೆ ಅಂತನ್ನಿಸುತ್ತದೆ’ ಎಂದು ಹೇಳಿಕೊಳ್ಳುತ್ತಾರೆ ಹರ್ಷಿಕಾ.

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts