ಹರ್ಷ ಅಸ್ಥಿ ರಥಯಾತ್ರೆಗೆ ಗುರುವಾರ ಚಾಲನೆ; ಶಿವಮೊಗ್ಗದಿಂದ ಶ್ರೀರಂಗಪಟ್ಟಣದವರೆಗೂ ಯಾತ್ರೆ

1 Min Read

ಚಿಕ್ಕಮಗಳೂರು: ಕೊಲೆಗೀಡಾಗಿರುವ ಬಜರಂಗದಳದ ಕಾರ್ಯಕರ್ತ ಹರ್ಷ ವಿಚಾರವು ಸದ್ಯದಲ್ಲೇ ಶಿವಮೊಗ್ಗದಿಂದ ಶ್ರೀರಂಗಪಟ್ಟಣದವರೆಗೂ ಮತ್ತೊಂದು ಸಂಚಲನ ಸೃಷ್ಟಿಸಲಿದೆ. ಏಕೆಂದರೆ ಹರ್ಷ ಅಸ್ಥಿ ರಥಯಾತ್ರೆಗೆ ಗುರುವಾರ ಚಾಲನೆ ಸಿಗಲಿದೆ.

ಕಾಳಿಮಠದ ಋಷಿಕುಮಾರ ಸ್ವಾಮೀಜಿಯ ನೇತೃತ್ವದಲ್ಲಿ ಈ ಅಸ್ಥಿ ರಥಯಾತ್ರೆಯು ಶಿವಮೊಗ್ಗದಿಂದ ಶ್ರೀರಂಗಪಟ್ಟಣದವರೆಗೂ ನಡೆಯಲಿದೆ. ಧರ್ಮರಥದ ಹೆಸರಲ್ಲಿ ನಡೆಯಲಿರುವ ಈ ಅಸ್ತಿ ಯಾತ್ರೆಗೆ ಶಿವಮೊಗ್ಗದಲ್ಲಿ ಗುರುವಾರ ಚಾಲನೆ ಸಿಗಲಿದೆ ಎಂದು ಇಂದು ಚಿಕ್ಕಮಗಳೂರಿನಲ್ಲಿ ಋಷಿಕುಮಾರ ಸ್ವಾಮೀಜಿ ತಿಳಿಸಿದರು.

ಶಿವಮೊಗ್ಗದಿಂದ ಆರಂಭವಾಗುವ ಯಾತ್ರೆಯು ತರೀಕೆರೆ, ಕಡೂರು, ಅರಸೀಕೆರೆ, ಚನ್ನರಾಯಪಟ್ಟಣದ ಮೂಲಕ ಶ್ರೀರಂಗಪಟ್ಟಣಕ್ಕೆ ತಲುಪಲಿದೆ. ಅಲ್ಲಿ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಪಾಪನಾಶಿನಿ ನದಿಯಲ್ಲಿ ಅಸ್ಥಿ ವಿಸರ್ಜನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸೇಡಿಗೆ ಬಲಿಯಾದನೇ ಹರ್ಷ?; ಆರು ವರ್ಷಗಳಿಂದಿತ್ತು ಹಗೆತನ..

ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ…

ಶಿ

Share This Article