More

    ವಿಶ್ವದ ಮೊದಲ ಇಂಜಿನಿಯರ್ ವಿಶ್ವಕರ್ಮ

    ಹರಪನಹಳ್ಳಿ: ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಾಗ್ರಿಗಳು, ಲೋಹ, ಕಬ್ಬಿಣ, ದೇವರ ಮೂರ್ತಿ, ಚಿತ್ರಪಟಗಳು, ಗೃಹಬಳಕೆ, ಸ್ಮಾರಕಗಳ ನಿರ್ಮಾಣ ಕಾರ್ಯದಲ್ಲಿ ವಿಶ್ವಕರ್ಮರ ಕಲೆ ಜೀವಂತಿಕೆಯಾಗಿದೆ ಎಂದು ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಅಭಿಪ್ರಾಯಪಟ್ಟರು.

    ತಾಲೂಕು ಆಡಳಿತದಿಂದ ಶನಿವಾರ ವಿಶ್ವಕರ್ಮರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಕರ್ಮ ವಿಶ್ವದ ಮೊದಲ ಇಂಜಿನಿಯರ್ ಆಗಿದ್ದು, ಅವರ ಸೂಕ್ಷ್ಮ ಕೆತ್ತನೆಯ ಕೆಲಸಗಳು ಸ್ಮರಣೀಯ ಎಂದರು. ವಿಶ್ವಕರ್ಮರ ಭಾವಚಿತ್ರಕ್ಕೆ ಶಾಸಕ ಜಿ.ಕರುಣಾಕರರೆಡ್ಡಿ ಪುಷ್ಪಾರ್ಚನೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷ ಎಚ್.ಎಂ.ಅಶೋಕ, ತಹಸೀಲ್ದಾರ ಡಾ.ಶಿವಕುಮಾರ ಬಿರಾದಾರ, ಡಿವೈಎಸ್‌ಪಿ ವಿ.ಎಸ್.ಹಾಲಮೂರ್ತಿ, ಸಿಪಿಐ ಕಮ್ಮಾರ ನಾಗರಾಜ, ಪಿಎಸ್‌ಐ ಸಿ.ಪ್ರಕಾಶ್, ಮುಖಂಡರಾದ ಎಲ್‌ಐಸಿ ಅಂಬಣ್ಣ, ರಂಗಾಪುರ ಬಸವರಾಜ, ಭರಮಪ್ಪ, ಕಲ್ಲಹಳ್ಳಿ ಗೋಣೆಪ್ಪ, ಡಿ.ನಾಗರಾಜ, ಮಂಜುನಾಥಚಾರಿ, ಹನುಮಂತಪ್ಪ, ಎಂ.ಮಲ್ಲೇಶ್, ವೀರಭದ್ರಪ್ಪ, ಕಾಳಚಾರಿ, ಮೌನೇಶ, ಮಾನಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts