ಹರಪನಹಳ್ಳಿ: ಬರಗಾಲ ಹಿನ್ನೆಲೆಯಲ್ಲಿ ನರೇಗಾ ಯೋಜನೆ ಮಾನವ ದಿನಗಳನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರು ಪತ್ರ ಚಳವಳಿ ನಡೆಸಿದರು.
ತಾಲೂಕಿನ ಬೆಣ್ಣಿಹಳ್ಳಿ, ಮೈದೂರು, ತೌಡೂರು, ತೊಗರಿಕಟ್ಟಿ, ಹಲುವಾಗಲು, ಯಡಿಹಳ್ಳಿ, ಕುಂಚೂರು, ನಿಟ್ಟೂರು, ತಾವರಗುಂದಿ, ಕಡತಿ, ಅಲಮರಸಿಕೇರಿ, ಸಿಂಗ್ರಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ನರೇಗಾ ಕಾರ್ಮಿಕರು ಈಗಿರುವ 100 ದಿನಗಳ ಜತೆಗೆ ಹೆಚ್ಚುವರಿಯಾಗಿ 50 ಮಾನವ ದಿನಗಳನ್ನು ಸೃಜಿಸಬೇಕು.
ಕೂಲಿ ಮೊತ್ತವನ್ನು ಕೂಡಲೇ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು. ಮೂರು ತಿಂಗಳ ಕೂಲಿ ಬಿಡುಗಡೆ ಮಾಡುವಂತೆ ಪ್ರಧಾನಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಕೂಲಿ ಕಾರ್ಮಿಕರಾದ ಶ್ರುತಿ, ಭಾಗ್ಯಮ್ಮ, ಇಂದ್ರಮ್ಮ, ಗೀತಾ, ಯಶೋದಾ, ಗಂಗಮ್ಮ, ಮಹಾಂತೇಶ್, ನೀಲಮ್ಮ, ಕಾಳಮ್ಮ, ಸಾವಿತ್ರಮ್ಮ, ಬಸಮ್ಮ ಇತರರಿದ್ದರು.