More

    ನಿರುಪಯುಕ್ತವಾದ ಸರ್ಕಾರಿ ವಾಹನಗಳು, ದಾಖಲೆ ತರಿಸಿಕೊಳ್ಳಲು ಅಧಿಕಾರಿಗಳು ವಿಫಲ

    ಕರಿಬಸಪ್ಪ ಪರಶೆಟ್ಟಿ ಹರಪನಹಳ್ಳಿ
    ಸರ್ಕಾರ ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸಲು ವಿವಿಧ ಇಲಾಖೆ ಅಧಿಕಾರಿಗಳಿಗೆ ನೀಡಿರುವ ವಾಹನಗಳು ನಿರ್ವಹಣೆ ಕೊರತೆ ಮತ್ತು ಅವಧಿ ಮುಗಿದು ಮೂಲೆ ಸೇರಿವೆ.

    ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆ, ಕ್ಷೇತ್ರ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ 8ಕ್ಕೂ ಹೆಚ್ಚು ಇಲಾಖೆ ವಾಹನಗಳು ಬಳಕೆಗೂ ಇಲ್ಲದೆ, ಸರಿಯಾದ ದಾಖಲೆಗಳೂ ಇಲ್ಲದೆ ಸಮರ್ಪಕ ವಿಲೇಯಾಗದೆ ನಿಂತಲ್ಲೇ ನಿಂತು ಹಾಳಾಗುತ್ತಿವೆ.

    ಹೊಸಪೇಟೆ ರಸ್ತೆಗೆ ಹೊಂದಿಕೊಂಡಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ಆಂಬುಲೆನ್ಸ್ ಸಂಪೂರ್ಣ ಹಾಳಾಗಿದ್ದು, ಆವರಣದಲ್ಲಿ ನಿಲ್ಲಿಸಲಾಗಿದೆ. ಇದನ್ನು ವಿಲೇ ಮಾಡಿದರೂ ಸಂಬಂಧಿಸಿದವರು ತೆಗೆದುಕೊಂಡು ಹೋಗದೆ ನಿಂತಲ್ಲೆ ನಿಂತಿದೆ.

    ಇದಲ್ಲದೆ ಇನ್ನೆರಡು 108 ಆಂಬುಲೆನ್ಸ್‌ಗಳು ಹಾಗೇ ನಿಂತಿದ್ದು, ತೆರವು ಗೊಳಿಸುವಂತೆ ಸಂಬಂಧಿಸಿದವರಿಗೆ ಪತ್ರ ಬರೆದರು ಕ್ರಮವಹಿಸುತ್ತಿಲ್ಲ ಎನ್ನುವುದು ಆಸ್ಪತ್ರೆ ಸಿಬ್ಬಂದಿವಾದವಾಗಿದೆ.

    ವಿಲೇವಾರಿಗೆ ಕ್ರಮ

    ತಾಲೂಕು ಮಿನಿವಿಧಾನಸೌಧದಲ್ಲಿ ಎರಡು ವಾಹನಗಳು ನಿಂತಿದ್ದು, ಇವುಗಳನ್ನು ಒಂದು ತಹಸೀಲ್ದಾರ್ ಹೆಸರಿನಲ್ಲಿದ್ದು ಹಳೆಯದಾಗಿ ನಿರುಪಯುಕ್ತವಾಗಿದೆ. ಚುನಾವಣೆ ಪೂರ್ವ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗೆ ವಾಹನ ವಿಲೇ ಮಾಡಲು ಯೋಜನೆ ರೂಪಿಸಿ, ಅನುಮತಿಗೆ ಪತ್ರ ಬರೆಯಲಾಗಿದೆ. ಇನ್ನೊಂದು ವಾಹನ ಬೇರೆ ಇಲಾಖೆಯದಾಗಿದ್ದು, ಅದರ ದಾಖಲೆ ಪಡೆದು ಸಾರಿಗೆ ಇಲಾಖೆ ಮೂಲಕ ವಿಲೇವಾರಿ ಮಾಡಲು ಪ್ರಯತ್ನಿಸುವುದಾಗಿ ತಹಸೀಲ್ದಾರ್ ಶಿವಕುಮಾರ ಬಿರಾದಾರ ತಿಳಿಸಿದ್ದಾರೆ.

    ಬಿಇಒ ಕಚೇರಿ ಆವರಣದ ಕ್ಷೇತ್ರ ಸಂಪನ್ಮೂಲ ಕಚೇರಿ ಪಕ್ಕದಲ್ಲಿ ಒಂದು ಜೀಪ್ ನಿಲ್ಲಿಸಲಾಗಿದೆ. ಅದು ತುಂಬಾ ಹಳೆಯದಾಗಿದ್ದು, ಉಪಯೋಗಕ್ಕೆ ಬರುತ್ತಿಲ್ಲ. ಏನಾಗಿದೆ ಎನ್ನುವ ಮಾಹಿತಿ ಪಡೆದು ವಿಲೇವಾರಿಗೆ ಕ್ರಮವಹಿಸಲಾಗುವುದು ಎನ್ನುತ್ತಾರೆ ಬಿಇಒ ಯು.ಬಸವರಾಜಪ್ಪ.

    ತಾಪಂ ಆವರಣದಲ್ಲಿ ಒಂದು ಲಾರಿ ಮತ್ತು ಜೀಪ್ ದುರಸ್ತಿಗೊಂಡು ನಿಂತಿವೆ. ಅವುಗಳ ದಾಖಲೆಗಳು ಸಮರ್ಪಕವಿಲ್ಲದೆ ಕಾರಣ ಆರ್‌ಟಿಒಗೆ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಮನವಿ ಮಾಡಲಾಗಿದೆ. ಬಂದ ಕೂಡಲೇ ಜಿಪಂ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಹಾರಜು ಹಾಕಲು ಕ್ರಮವಹಿಸಲಾಗುವುದು ಎನ್ನುತ್ತಾರೆ ಇಒ ಪ್ರಕಾಶ್.

    ಇದನ್ನೂ ಓದಿ: ಗುಜರಿ ಗಾಡಿ ರಾಜ್ಯಕ್ಕೆ ಹೆಚ್ಚುವರಿ: 87.48 ಲಕ್ಷ ವಾಹನಗಳು ಸ್ಕ್ರ್ಯಾಪ್​, ದೇಶದಲ್ಲಿ ಕರ್ನಾಟಕ ನಂ.1

    ಸಹಾಯಕ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲೂ ಒಂದು ಜೀಪ್ ನಿಂತಿದ್ದು, ಇದರ ಆರ್‌ಸಿ ಇಲ್ಲದೆ ವಿಲೇಯಾಗಿಲ್ಲ. ಹರಪನಹಳ್ಳಿ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿದ್ದಾಗ ಜಿಲ್ಲಾ ಕೃಷಿ ನಿರ್ದೇಶಕರಿಗೆ ದಾಖಲೆ ನೀಡುವಂತೆ ಮನವಿ ಮಾಡಿದ್ದರೂ ಈವರೆಗೆ ಸಲ್ಲಿಕೆ ಮಾಡಿಲ್ಲ. ನೋಂದಣಿ ದಾಖಲೆ ಬಂದ ಕೂಡಲೇ ವಾಹನ ವಿಲೇ ಮಾಡಲಾಗುವುದು. ಪ್ರಸ್ತುತ ಬಾಡಿಗೆ ರೂಪದಲ್ಲಿ ವಾಹನವನ್ನು ಇಲಾಖೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಗೊಂದಿ ಮಂಜುನಾಥ ತಿಳಿಸಿದರು.

    ಜಿಪಂ ಆವರಣದಲ್ಲೂ ಒಂದು ವಾಹನ ಕೆಟ್ಟು ನಿಂತಿದ್ದು, ಶೀಘ್ರವೇ ವಿಲೇವಾರಿಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯಿತಿ ಪಿಆರ್‌ಇ ಇಲಾಖೆ ಎಇಇ ನಾಗಪ್ಪ ತಿಳಿಸಿದ್ದಾರೆ.

    ನಿರುಪಯುಕ್ತವಾದ ಸರ್ಕಾರಿ ವಾಹನಗಳು, ದಾಖಲೆ ತರಿಸಿಕೊಳ್ಳಲು ಅಧಿಕಾರಿಗಳು ವಿಫಲ

    ಉಪವಿಭಾಗಾಧಿಕಾರಿ, ತಹಸಿಲ್, ತಾಲೂಕು ಆರೋಗ್ಯಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಹೀಗೆ ಕೆಲವು ಇಲಾಖೆಗಳಲ್ಲಿ ಮಾತ್ರ ಸರ್ಕಾರಿ ವಾಹನಗಳು ಲಭ್ಯ ಇವೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ, ಲೋಕಪಯೋಗಿ, ಸಹಾಯಕ ಕೃಷಿ ನಿರ್ದೇಶಕರು, ತೋಟಗಾರಿಕೆ, ಪುರಸಭೆ ಇತರ ಇಲಾಖೆಗಳು ಸರ್ಕಾರದ ವಾಹನಗಳಿಲ್ಲದೆ ಸರ್ಕಾರದ ಮಾರ್ಗಸೂಚಿಯಂತೆ ಹೊರಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಪಡೆದು ಕಿ.ಮಿ.ನಂತೆ ಹಣ ಪಾವತಿಸುತ್ತಿವೆ.

    ಒಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸರ್ಕಾರದ ನಿರುಪಯುಕ್ತ ವಾಹನಗಳ ದಾಖಲೆ ಸರಿಪಡಿಸಿ, ವಿಲೇವಾರಿಗೆ ಕ್ರಮವಹಿಸುತ್ತಾರಾ ಕಾದು ನೋಡಬೇಕಿದೆ.

    ಸರ್ಕಾರದ ವಾಹನಗಳು ಅನೇಕ ಕಡೆಗಳಲ್ಲಿ ದುರಸ್ತಿಯಲ್ಲಿದ್ದು, ಅವುಗಳನ್ನು ವಿಲೇವಾರಿ ಮಾಡಬೇಕು ಮತ್ತು ಎಲ್ಲ ಇಲಾಖೆಗಳಿಗೆ ಸರ್ಕಾರದ ವಾಹನಗಳನ್ನು ನೀಡಿದಲ್ಲಿ ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗಲಿದೆ.
    ಅರುಣಕುಮಾರ
    ಸ್ಥಳೀಯ ನಿವಾಸಿ, ಹರಪನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts