More

    ಮೇ 07 ಮಹತ್ವದ ದಿನ, ಯಾರೂ  ಮತದಾನದಿಂದ ವಂಚಿತರಾಗದಿರಿ: ತಾಪಂ ಇಓ ಎಸ್.ಕೆ.ಇನಾಮದಾರ

    ರೋಣ : ಲೋಕಸಭಾ ಚುನಾವಣೆ 2024 ರ ಅಂಗವಾಗಿ ಗುರುವಾರ ರೋಣ ಪಟ್ಟಣದ ತಾಲೂಕ ಪಂಚಾಯತಿಯಿಂದ ಸಿದ್ದಾರೂಡ ಮಠದವರೆಗೂ ಹಾಗೂ ತಾಲೂಕ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿಗಾಗಿ ಬೈಕ್ ರ್ಯಾಲಿ ನಡೆಯಿತು.

    ತಾಲೂಕ ಪಂಚಾಯತಿ ಮುಂಭಾಗದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ  ಎಸ್.ಕೆ ಇನಾಮದಾರ ಅವರು ಸೆಲ್ಫಿ ಸ್ಟಾಂಡ್‍ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಗೆ  ಎಲ್ಲರೂ ಮತದಾನದ ದಿನ ತಪ್ಪದೆ ನಿಮ್ಮ ಹಕ್ಕು ಚಲಾಯಿಸಿ ಎಂದು ಹೇಳಿದರು

    ಚುನಾವಣಾ ಆಯೋಗ ನೀಡಿರುವ ಓಟರ್ ಹೆಲ್ಪ್ ಲೈನ್, ಸಕ್ಷಾಮ್ ಆ್ಯಪ್,ಸಿವಿಜಿಲ್ ಆ್ಯಪ್‍ಗಳನ್ನು ಬಳಸಿ  ನೈತಿಕ ಮತದಾನಕ್ಕೆ ಸಹಕರಿಸಿ ಹಾಗೂ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದಾಗಿದೆ ಎಂದರು.

    ಮೇ 7 ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ    ವಿವೇಚನೆಯಿಂದ ಅರ್ಹರೆಲ್ಲರೂ  ಮತ ಚಲಾಯಿಸಬೇಕು.  ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಕಡ್ಡಾಯವಾಗಿ ಮತದಾನ ಮಾಡಿ ಎಂದರು.

    ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು ಹಾಗೂ ಹೆಸ್ಕಾಂ ಸಿಬ್ಬಂದಿಗಳು ಭಾಗವಹಿಸಿದ್ದರು..

    ಬೈಕ್ ರ್ಯಾಲಿ ರೋಣ ತಾಲೂಕಿನ ಹಸ್ಕಾಂ ಸಿಬ್ಬಂದಿಗಳು ಸೇರಿದಂತೆ ತಾಲೂಕಿನ ವಿವಿಧ ಮಟ್ಟದ ಅಧಿಕಾರಿಗಳು ಬೈಕ್ ರ್ಯಾಲಿ ಮುಖಾಂತರ ಮತದಾನ ಜಾಗೃತಿ ಕುರಿತು ಹಾಗೂ ಕಡ್ಡಾಯವಾಗಿ ಮತದಾನ ಮಾಡಿ,   ನಾಮಫಲಕಗಳನ್ನು ಹಿಡಿದು ಮತದಾನ ಜಾಗೃತಿ ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು…

    ಸೆಲ್ಫಿ ಪಾಯಿಂಟ್
            ರೋಣ ಪಟ್ಟಣದ ಬಸ್‍ನಿಲ್ದಾಣದಲ್ಲಿ ಹಾಗೂ ತಾಲೂಕ ಪಂಚಾಯತಿ ಕಚೇರಿಯಲ್ಲಿ ಅಳವಡಿಸಿದ  ಸೆಲ್ಪಿ ಪಾಯಿಂಟ್ ಗೆ ಯುವ ಮತದಾರರು, ಮೊದಲ ಬಾರಿ ಮತದಾನ  ಮಾಡುವ ವಿದ್ಯಾರ್ಥಿಗಳ ಹಾಗೂ ಮಹಿಳೆಯರ ಗಮನ ಸೆಳೆದು  ಸೆಲ್ಪಿ  ತೆಗೆದುಕೊಂಡಿದ್ದು ವಿಶೇಷವಾಗಿತ್ತು.

    ಕೀಟಜನ್ಯ ರೋಗಗಳ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ

         ಗದಗ (ಕರ್ನಾಟಕ ವಾರ್ತೆ) ಮೇ 2: ವಿಶ್ವ ಮಲೇರಿಯಾ ದಿನ ಪ್ರಯುಕ್ತ ಮೇ 3 ರಂದು ಬೆಳಿಗ್ಗೆ 8.00 ಘಂಟೆಗೆ ದಂಡಪ್ಪ ಮಾನ್ವಿ (ಎಮ್.ಸಿ.ಎಚ್ ಆಸ್ಪತ್ರೆ) ಕೆ.ಸಿ.ರಾಣಿ ರಸ್ತೆ, ಗದಗ ಕಾರ್ಯಾಲಯದಿಂದ ಸಾರ್ವಜನಿಕರಿಗೆ ಕೀಟಜನ್ಯ ರೋಗಗಳ ಅರಿವು ಮೂಡಿಸಲು ಜಿಲ್ಲಾ ಮಟ್ಟದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts