More

    ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ಥ

    ತುಂಬಿಹರಿದ ಅರಸೀಕೆರೆ, ಹಗರಿಹಳ್ಳ * ಕೊಚ್ಚಿಹೋದ ಬೈಕ್ ಸವಾರ * ಸ್ಥಳೀಯರಿಂದ ರಕ್ಷಣೆ

    ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಹೋಬಳಿಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ.

    ಬುಧವಾರ ಸುರಿದ ಮಳೆಗೆ ಹಳ್ಳಿಕೆರೆ, ಕಡೆಕಲ್ ತಾಂಡಾ, ರಾಮಘಟ್ಟ ಗ್ರಾಮದಲ್ಲಿ ತಲಾ ಒಂದೊಂದು ಮನೆ ಭಾಗಶಃ ಹಾನಿಯಾಗಿವೆ. ಕಂಚಿಕೆರೆಯಲ್ಲಿ ಸಿಡಿಲು ಬಡಿದು ಹಸು ಮೃತಪಟ್ಟಿದೆ.

    ಅರಸೀಕೆರೆ ದೊಡ್ಡಕೆರೆಯ ಕೋಡಿ ಒಡೆದು ಅಪಾರ ಪ್ರಮಾಣದ ನೀರು ರಸ್ತೆಗೆ ಹರಿಯುತ್ತಿದೆ. ಇದರಿಂದಾಗಿ ಜಗಳೂರು, ಅರಸೀಕೆರೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಬೈಕ್ ಸವಾರನೊಬ್ಬ ಕೊಚ್ಚಿಕೊಂಡು ಹೋಗಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಹಳ್ಳದಲ್ಲಿದ್ದ ಬೈಕ್ ಅನ್ನು ಸಾರ್ವಜನಿಕರು ಹಗ್ಗದ ಸಹಾಯದಿಂದ ಹೊರ ತಂದಿದ್ದಾರೆ.

    ಅರಸೀಕೆರೆ-ಉಚ್ಚಂಗಿದುರ್ಗ ರಸ್ತೆಯ ಸೇತುವೆಯಲ್ಲಿ ಎರಡು ದೊಡ್ಡ ರಂದ್ರಗಳು ಬಿದ್ದಿದ್ದು, ಕುಸಿಯುವ ಹಂತಕ್ಕೆ ತಲುಪಿದೆ. ಭಾರಿ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹಗರಿಹಳ್ಳ ರಭಸವಾಗಿ ಹರಿಯುತ್ತಿರುವುದರಿಂದ ಗಡಿ ಗುಡಾಳ್, ಬುದಿಹಾಳ್, ಮಾದಿಹಳ್ಳಿ, ಜಂಗಮ ತುಂಬಿಗೆರೆ ಗ್ರಾಮಗಳಿಗೆ ಜಲ ದಿಗ್ಬಂಧನ ವಿಧಿಸಿದಂತಾಗಿದೆ. ಗ್ರಾಮದ ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಂಡಿವೆ.

    ಪುಣಭಘಟ್ಟ ಗ್ರಾಮದ ಕೆರೆ 35 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದಿದೆ. ಕೋಡಿ ನೀರು ಗ್ರಾಮಕ್ಕೆ ನುಗ್ಗಿದ್ದು, ಇತಿಹಾಸ ಪ್ರಸಿದ್ಧ ಪುಣ್ಯದ ಕಟ್ಟೆ ಜಲಾವೃತಗೊಂಡಿದೆ.

    ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts