More

    ದಂಪತಿ ಮಧ್ಯೆ ಭಿನ್ನಾಭಿಪ್ರಾಯಗಳು.. ವಿಚ್ಛೇದನವಾದ್ರೆ ಶೇ.70ರಷ್ಟು ಆಸ್ತಿಯನ್ನು ಮಾಜಿ ಪತ್ನಿಗೆ ಹಸ್ತಾಂತರಿಸ್ತಾರೆ ಹಾರ್ದಿಕ್ ಪಾಂಡ್ಯಾ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಯಕ್ತಿಕ ಜೀವನದ ಕುರಿತಾಗಿ ಸುದ್ದಿಯಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನದಲ್ಲೂ ಶಾಕ್ ಉಂಟಾಗಿದೆ ಎಂದು ವರದಿಯಾಗಿದೆ. ಅದೇನೆಂದರೆ.. ಪಾಂಡ್ಯ ದಂಪತಿ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೆ. ಅವರು ತಮ್ಮ ಪತ್ನಿ ನತಾಶಾಗೆ ವಿಚ್ಛೇದನ ನೀಡುತ್ತಿದ್ದಾರೆ ಎಂದು ವರದಿಯಾಗಿದೆ..

    ವಿಚ್ಛೇದನ ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ 70 ಪ್ರತಿಶತವನ್ನು ನತಾಶಾಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಯಾವುದೆ ಸ್ಪಷ್ಟನೆ ಇಲ್ಲ. ಟೀಂ ಇಂಡಿಯಾ ಕ್ರಿಕೆಟಿಗನಾಗಿ, ಐಪಿಎಲ್ ಜೊತೆಗೆ ಜಾಹೀರಾತುದಾರನಾಗಿ ಹಾರ್ದಿಕ್ ಪಾಂಡ್ಯ ಸಂಪಾದನೆ ಕೆಲವು ಕೋಟಿಗಳಲ್ಲಿದೆ. ಆ ಮೊತ್ತದ ಶೇ.70ರಷ್ಟು ಪಾಲು ಸಾವಿರಾರು ಕೋಟಿ ಇರಬಹುದು. ಮತ್ತು ಅವರು ಆ ಮೊತ್ತವನ್ನು ಜೀವನಾಂಶವಾಗಿ ಪಾವತಿಸಲಿದ್ದಾರೆಯೇ? ಎಂಬುದು ತಿಳಿಯಬೇಕಿದೆ.  ಈ ಜೋಡಿ, ಏಕಾಏಕಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬುದಕ್ಕೆ ಕಾರಣ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಸದ್ಯ ಇವರಿಬ್ಬರು ವಿಚ್ಛೇದನ ಪಡೆದಿದ್ದಾರೆ ಎಂಬ ಸದ್ದು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

    ಕಳೆದ ಕೆಲವು ದಿನಗಳಿಂದ ನತಾಶಾ ಪಾಂಡ್ಯ ಜೊತೆಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿಲ್ಲ. ಈ ವಿಚಾರವನ್ನು ಹಿಡಿದಿಟ್ಟುಕೊಂಡಿರುವ ಕೆಲವರು, ಪಾಂಡ್ಯ-ನತಾಶಾ ನಡುವೆ ಭಿನ್ನಾಭಿಪ್ರಾಯವಿದೆ ಮತ್ತು ಶೀಘ್ರದಲ್ಲೇ ಸಂಪೂರ್ಣವಾಗಿ ಬೇರ್ಪಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೇಳುತ್ತಿದ್ದಾರೆ.

    ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಸಂಬಂಧದ ಬಗ್ಗೆ ವದಂತಿಗಳಿವೆ. ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಸಂಬಂಧ ಸರಿ ಇಲ್ಲ. ಇವರಿಬ್ಬರು ಬೇರ್ಪಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕಾ ಪಾಂಡ್ಯ ವೈವಾಹಿಕ ಜೀವನದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಇದರಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆ ಎಂಬುದಕ್ಕೆ ದಂಪತಿ ಇನ್ನೂ ಖಚಿತ ಉತ್ತರ ನೀಡಿಲ್ಲ.

    ಮಾರ್ಚ್ 4 ರಂದು ಹಾರ್ದಿಕ್ ಪತ್ನಿ ನತಾಶಾ ಅವರ ಹುಟ್ಟುಹಬ್ಬವಿದ್ದ ಕಾರಣ ಅವರ ಸಂಬಂಧದ ವಿಷಯವೂ ಸಾರ್ವಜನಿಕರ ಗಮನಕ್ಕೆ ಬಂದಿದೆ. ಆದರೆ ಪತ್ನಿಯ ಹುಟ್ಟುಹಬ್ಬದ ಸಂದರ್ಭದಲ್ಲೂ ಹಾರ್ದಿಕ್ ಯಾವುದೇ ಪೋಸ್ಟ್ ಮಾಡಿಲ್ಲ. ಇದಾದ ನಂತರವೂ ಇವರಿಬ್ಬರ ಸಂಬಂಧದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಅನುಮಾನಗಳಿದ್ದವು. ನತಾಶಾ ತನ್ನ ಇನ್​ಸ್ಟಾಗ್ರಾಮ್​​ನಿಂದ ತನ್ನ ಪತಿಯೊಂದಿಗೆ ಫೋಟೋಗಳನ್ನು ಇನ್ನೂ ಅಳಿಸಿಲ್ಲ.

    ರಾಷ್ಟ್ರೀಯ ಮಾಧ್ಯಮದ ಕೆಲವು ಪ್ರಮುಖ ಸುದ್ದಿ ಸಂಸ್ಥೆಗಳು ಇದೇ ವಿಷಯದ ಬಗ್ಗೆ ಸುದ್ದಿಗಳನ್ನು ಪ್ರಕಟಿಸಿವೆ. ಇವರಿಬ್ಬರ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು  ಗೊಂದಲಕ್ಕೀಡಾಗಿದ್ದರು.

    ಪತ್ನಿಯಿಂದ ದೂರವಾಗ್ತಾರಾ ಹಾರ್ದಿಕ್ ಪಾಂಡ್ಯ! IPLನಲ್ಲಿ ತಂಡದ ಸೋಲಿಗೆ ಕಾರಣ ಇದೇನಾ? ಎಂದ್ರು ಫ್ಯಾನ್ಸ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts