More

    ಆಶ್ರಯ ನಿವಾಸಿಗಳಿಗೆ ಕೂಡಲೆ ಹಕ್ಕುಪತ್ರಗಳನ್ನು ನೀಡಿ: ಶಾಸಕ ಜಿ.ಕರುಣಾಕರರೆಡ್ಡಿ ಪಿಡಿಒಗೆ ಸೂಚನೆ

    ಹರಪನಹಳ್ಳಿ: ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಅಟಲ್‌ಜಿ ಜನಸ್ನೇಹಿ ನಿರ್ದೇಶನಾಲಯದ ಅನುದಾನದಲ್ಲಿ ನಿರ್ಮಿಸಿರುವ ನಾಡ ಕಚೇರಿಯನ್ನು ಶಾಸಕ ಜಿ.ಕರುಣಾಕರರೆಡ್ಡಿ ಶುಕ್ರವಾರ ಉದ್ಘಾಟಿಸಿದರು.

    ಆಶ್ರಯ ಯೋಜನೆಯಡಿ ನಿರ್ಮಿಸಿರುವ ಮನೆಗಳಿಗೆ ಇದುವರೆಗೂ ಹಕ್ಕುಪತ್ರಗಳನ್ನು ನೀಡಿಲ್ಲವೆಂದು ನಿವಾಸಿಗಳು ಶಾಸಕರ ಗಮನಕ್ಕೆ ತಂದರು. ಇತ್ತೀಚೆಗೆ ಛಾವಣಿ ಕುಸಿದು ಎರಡು ಕಾಲುಗಳು ಕಳೆದುಕೊಂಡಿದ್ದ ಗ್ರಾಮದ ಮಹಿಳೆ ಆಸ್ಪತ್ರೆಯ ಚಿಕಿತ್ಸೆಗೆ ಹಣ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಆಶ್ರಯ ನಿವಾಸಿಗಳಿಗೆ ಕೂಡಲೆ ಹಕ್ಕುಪತ್ರಗಳನ್ನು ನೀಡುವಂತೆ ಗ್ರಾಪಂ ಪಿಡಿಒಗೆ ಸೂಚಿಸಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿ ಚಿಕಿತ್ಸೆಗೆ ಹಣ ಕೊಡಿಸುವುದಾಗಿ ಭರವಸೆ ನೀಡಿದರು.

    ಬಳಿಕ ಮೈದೂರು ಗ್ರಾಮಕ್ಕೆ ತೆರಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯನ್ನು ಉದ್ಘಾಟಿಸಿದರು. ಈ ವೇಳೆ ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು, ಶಾಸಕರಿಗೆ ಶತಮಾನ ಕಂಡ ಶಾಲೆಗೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಿದರು.

    ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ, ಬಿಇಒ ಯು.ಬಸವರಾಜಪ್ಪ, ಗ್ರೇಡ್ 2 ತಹಸೀಲ್ದಾರ್ ಶಿವಕುಮಾರಗೌಡ, ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಕಂದಾಯ ಅಧಿಕಾರಿಗಳು, ಪಿಡಿಒ ಅಂಜಿನಪ್ಪ, ಬಿಜೆಪಿಯ ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಎಂ.ಮಲ್ಲೇಶ್, ಪ್ರಕಾಶ್, ರೇವಣಸಿದ್ದಪ್ಪ, ಕುಮಾರನಾಯ್ಕ, ಮಾರುತಿ, ಹೇಮಂತ, ಪಂಡಪ್ಪ ಬಡಿಗೇರ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts