More

    ಮಾದಪುರದಲ್ಲಿ ವೀರಗಲ್ಲುಗಳು ಪತ್ತೆ

    ಹರಪನಹಳ್ಳಿ: ತಾಲೂಕಿನ ಮಾದಪುರ ಗ್ರಾಮದ ಗೌಡ್ರ ಶಿವಪ್ಪನವರ ಜಮೀನು ಹಾಗೂ ರಾಮದೇವರ ಗುಡಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಮತ್ತು ವಿಜಯನಗರೋತ್ತರ ಕಾಲದ ಅಪ್ರಕಟಿತ ಸ್ಮಾರಕ ಶಿಲ್ಪಗಳನ್ನು ವೀರಗಲ್ಲುಗಳ್ನು ಪತ್ತೆಯಾಗಿವೆ.

    ಕನ್ನಡ ವಿ.ವಿ.ಶಾಸನಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಡಿ. ವೀರೇಶ ಸಂಶೋಧನೆ ಕೈಗೊಂಡು ಈ ವೀರಗಲ್ಲುಗಳನ್ನು ಪತ್ತೆ ಹಚ್ಚಿದ್ದಾರೆ. ಗೌಡ್ರ ಶಿವಪ್ಪನವರ ಹೊಲದ ಬೇವಿನ ಮರದ ಕೆಳಗಿನ ನೆಲದಲ್ಲಿ ಇವುಗಳನ್ನು ಹೂತಿಡಲಾಗಿತ್ತು. ಇವರಡೂ ಬಿಳಿ ಬಳಪದ ಶಿಲೆಗಳಾಗಿವೆ.

    38 ಇಂಚು ಎತ್ತರ ಹಾಗೂ 17.5 ಇಂಚು ಅಗಲ ಇರುವ ತುರುಗೊಳ್ ವೀರಗಲ್ಲಿನ ಕೆಳಗಿನ ಫಲಕದಲ್ಲಿ ಧನುರ್ಧಾರಿ ವೀರನೊಬ್ಬ ಮೂರು ಹಸುಗಳ ರಕ್ಷಣೆಗಾಗಿ ಹೋರಾಡುತ್ತಿರುವುದನ್ನು ಕೆತ್ತಲಾಗಿದೆ. ಯುದ್ಧ ಬೇಟೆ ವೀರಗಲ್ಲು 26 ಇಂಚು ಎತ್ತರ ಹಾಗೂ 17 ಇಂಚು ಅಗಲವಾಗಿದೆ.

    ರಾಮದೇವರ ಗರ್ಭಗುಡಿಯಲ್ಲಿರುವ ವೀರಮಾಸ್ತಿಗಲ್ಲುಗಳು ಕ್ರಮವಾಗಿ 27 ಇಂಚು ಎತ್ತರ ಹಾಗೂ 15 ಇಂಚು ಅಗಲ, 26 ಇಂಚು ಎತ್ತರ ಹಾಗೂ 27 ಇಂಚು ಅಗಲದ ಕಪ್ಪು ಬಳಪದ ಕಲ್ಲಾಗಿದೆ. ಇವರ ಕೆಳಗಿನ ಫಲಕದಲ್ಲಿ ಧನುರ್ಧಾರಿ ವೀರನೊಬ್ಬ ಮೂರು ಹಸುಗಳ ರಕ್ಷಣೆಗಾಗಿ ಹೋರಾಡುತ್ತಿರುವ ದೃಶ್ಯ ಕೆತ್ತಲಾಗಿದೆ. ಅಲ್ಲದೇ ಶೈವ ಪಂಡಿತ, ಶಿವಲಿಂಗ, ನಂದಿ, ಸೂರ್ಯ, ಚಂದ್ರರ ಚಿತ್ರಣವೂ ಇದರಲ್ಲಿದೆ. ಇದಲ್ಲದೇ ಹಲವು ವಿಶೇಷತೆಗಳನ್ನು ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts