More

    ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಖಂಡನೆ: ಹರಪನಹಳ್ಳಿಯಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

    ಹರಪನಹಳ್ಳಿ: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುರುಗಲವಾಡಿ ಗ್ರಾಮದಲ್ಲಿ ನಡೆದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ವಿಶ್ವ ಬಂಜಾರ ಸಂಸ್ಕೃತಿ ಭಾರತ, ವಿಶ್ವ ಸಕಲಕಲಾ ಸಂಸ್ಕೃತಿ ಭಾರತ, ಎಐಎಸ್‌ಎಫ್, ಎಐವೈಎಫ್ ಹಾಗೂ ಸಮುದಾಯ ಸಂಘಟನೆಗಳು ಗುರುವಾರ ರಾತ್ರಿ ಇಜಾರಿ ಶಿರಸಪ್ಪ ವೃತ್ತದಲ್ಲಿ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದವು.

    ಎಐಎಸ್‌ಎಫ್ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಕ ಮಾತನಾಡಿ, ಹೊಟ್ಟೆ ಪಾಡಿಗಾಗಿ ದುಡಿಯಲು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ತಾಂಡಾವೊಂದರ ಬಡ ಕುಟುಂಬ ಮದ್ದೂರು ತಾಲೂಕಿಗೆ ಹೋಗಿತ್ತು. ಆದರೆ, ಕೆಲಸಕ್ಕೆ ಹೋದ ಸಮಯದಲ್ಲೇ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ನಡೆದಿರುವುದು ದುರಂತ. ಅತ್ಯಾಚಾರಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮೃತ ಬಾಲಕಿಯ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕಠಿಣ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

    ವಿಶ್ವ ಬಂಜಾರ ಸಂಸ್ಕೃತಿ ಭಾರತ ಸಂಸ್ಥಾಪಕ ಎನ್.ಚೇತನ್‌ರಾಜ್ ಮಾತನಾಡಿ ಮಾತನಾಡಿದರು. ಮುಖಂಡರಾದ ಬಳಿಗನೂರು ಕೊಟ್ರೇಶ, ರಾಜುನಾಯ್ಕ, ಸತೀಶ್, ಎಸ್.ಕುಮಾರ್ ನಾಯ್ಕ. ಮಂಜನಾಯ್ಕ. ಚನ್ನನಾಯ್ಕ. ಮನೋಜ್ ನಾಯ್ಕ, ವಿಷ್ಣು ನಾಯ್ಕ, ರವಿನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts