More

    19, 20 ರಂದು ಶಿವಾಜಿ, ಸರ್ವಜ್ಞ ಜಯಂತಿ

    ಹರಪನಹಳ್ಳಿ: ಛತ್ರಪತಿ ಶಿವಾಜಿ, ಸರ್ವಜ್ಞ, ಶರಣರ ಜಯಂತಿಗಳನ್ನು ಸರಳವಾಗಿ ಫೆ.19, 20 ರಂದು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

    ಉಪ ವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್ ಮಾತನಾಡಿ, ಛತ್ರಪತಿ ಶಿವಾಜಿ ಜಯಂತಿಯನ್ನು ಫೆ.19ರ ಬೆಳಗ್ಗೆ 11ಕ್ಕೆ, 20ರ ಬೆಳಗ್ಗೆ 11ಕ್ಕೆ ಸರ್ವಜ್ಞ ಮತ್ತು ಕಾಯಕ ಶರಣರ ಜಯಂತಿಯನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು.

    ಮರಾಠ ಸಮಾಜದ ಮುಖಂಡ ಮಂಜುನಾಥ ಮಾತನಾಡಿ, ತಾಲೂಕಿನ ಅರಸನಾಳು, ಮಜ್ಜಿಗೇರಿ, ವಡೇರಳ್ಳಿ, ನಿಟ್ಟೂರು, ಹಲುವಾಗಲು ಗ್ರಾಮಗಳಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಮರಾಠ ಸಮುದಾಯದವರಿದ್ದು, ಶಿವಾಜಿ ಜಯಂತಿಯನ್ನು ವಡೇರಳ್ಳಿಯಲ್ಲಿ ಆಚರಿಸಲು ತಾಲೂಕು ಆಡಳಿತ ಅನುವು ಮಾಡಿಕೊಡಬೇಕೆಂದು ಕೇಳಿಕೊಂಡರು. ಉಪ ವಿಭಾಗಾಧಿಕಾರಿ ಪ್ರತಿಕ್ರಿಯಿಸಿ, ಎಲ್ಲ ಜಯಂತಿಗಳನ್ನು ತಾಲೂಕು ಆಡಳಿತದಿಂದ ತಾಲೂಕು ಕೇಂದ್ರದಲ್ಲೇ ಮಾಡುವುದು ನಿಯಮವಾಗಿದೆ. ಹಾಗಾಗಿ ಸಮಾಜದ ಮುಖಂಡರು ತಮ್ಮ ಇಚ್ಚಾನುಸಾರ ಯಾವುದೇ ಹಳ್ಳಿಯಲ್ಲಿ ಆಚರಿಸಿಕೊಳ್ಳಲು ನಮ್ಮ ಅಭ್ಯಂತರವಿಲ್ಲ. ಸಾಧ್ಯವಾದರೆ ನಾವು ಸಹ ಭಾಗವಹಿಸುತ್ತೇವೆ ಎಂದರು.

    ತಹಸೀಲ್ದಾರ್ ಈಶ್ವರ್ ಪಾಂಡೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದ ವೈ . ಡೊಳ್ಳಿನ, ತಾಪಂ ಎಡಿ ತಿಮ್ಮನಾಯ್ಕ, ಉಪ ನೋಂದಣಾಧಿಕಾರಿ ದೀಪಾ ಮ್ಯಾಳಿ, ಪುರಸಭೆ ಮುಖ್ಯಾಧಿಕಾರಿ ನಾಗರಾಜ ನಾಯ್ಕ, ಟಿಎಚ್‌ಒ ಇನಾಯತ್, ಮೀನುಗಾರಿಕೆ ಇಲಾಖೆಯ ಬಿ. ಮಂಜುಳ, ಎಎಸ್‌ಐ ಅಪ್ಪಣ್ಣ ರೆಡ್ಡಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಂಕಾಪುರ, ಮರಾಠ ಸಮಾಜ ದ ಲಕ್ಷ್ಮಣ ರಾವ್ ಜಾಧವ್, ನಿಂಗಪ್ಪ, ಮಹಾಂತೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts